ಕನ್ನಡಪ್ರಭ ವಾರ್ತೆ ಮಳವಳ್ಳಿ
ಕೆಲವು ದಿನಗಳ ಹಿಂದೆ ನ್ಯಾಯಾಧೀಶರು ಭೇಟಿ ನೀಡಿದ್ದಾಗ ಸ್ವಚ್ಛತೆ, ಸೌಲಭ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿ ನಿಲಯದ ಮೇಲ್ವಿಚಾರಕರಿಗೆ ನೋಟಿಸ್ ಜಾರಿ ಮಾಡಿದ್ದರು. ನಂತರ ಇಲಾಖೆ ಸಂಬಂಧಪಟ್ಟ ಅಧಿಕಾರಿಗಳು ನಿಲಯಕ್ಕೆ ಭೇಟಿ ನೀಡಿ ಕುಂದು ಕೊರತೆಗಳನ್ನು ಪರಿಶೀಲಿಸಿ ಆಗತ್ಯ ಕ್ರಮ ಕೈಗೊಂಡಿದ್ದರು.
ಅಡುಗೆಮನೆ ಹಾಗೂ ಶೌಚಾಲಯಗಳ ಶುಚಿತ್ವ, ವಸತಿ ಗೃಹ ಹಾಗೂ ಅಡುಗೆ ಮನೆ ಹಿಂಭಾಗ ಕೊಳಚೆ ನೀರು ನಿಂತಿರುವುದನ್ನು ತೆರವು, ಬಾಲಕಿಯರ ವಸತಿ ಗೃಹದ ಕಿಟಕಿಗಳಿಗೆ ಕರ್ಟನ್ ಅಳವಡಿಕೆ, ಕೆಟ್ಟುನಿಂತ ಫ್ಯಾನ್ ಹಾಗೂ ದೀಪಗಳನ್ನು ದುರಸ್ತಿಗೊಳಿಸಿ ಅಳವಡಿಸಿರುವುದು ಸೇರಿದಂತೆ ಪ್ರಾಂಶುಪಾಲರು ಹಾಗೂ ಶಿಕ್ಷಕರು ವಸತಿ ಶಾಲೆಯಲ್ಲಿಯೇ ಇದ್ದು ಎಸ್.ಎಸ್.ಎಲ್.ಸಿ ಮಕ್ಕಳಿಗೆ ಪರೀಕ್ಷೆಯ ಅಂತಿಮ ಸಿದ್ಧತೆ ಪಾಠ ಪ್ರವಚನಗಳನ್ನು ಮಾಡುತ್ತಿರುವ ನ್ಯಾಯಾಧೀಶರು ಮೆಚ್ಚುಗೆ ವ್ಯಕ್ತಪಡಿಸಿ ಇದೇ ರೀತಿ ಮುಂದೆ ನೋಡಿಕೊಳ್ಳುವಂತೆ ಸಲಹೆ ನೀಡಿದರು.ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಮಹೇಂದ್ರ ಮಾತನಾಡಿ, ಶಿಕ್ಷಣ ಪಡೆಯಲು ತಂದೆ ತಾಯಿಯಿಂದ ದೂರ ಬಂದು ವಸತಿ ನಿಲಯದಲ್ಲಿರುವ ಮಕ್ಕಳಿಗೆ ಶುಚಿತ್ವದ ಆಹಾರದ ಜೊತೆಗೆ ಪ್ರೀತಿಯಿಂದ ನೋಡಿಕೊಳ್ಳಬೇಕು. ಶಾಲೆಯ ಇಂದಿನ ಪರಿಸ್ಥಿತಿ ಸ್ವಲ್ಪ ಸಮಾಧಾನ ತಂದಿದೆ ಎಂದರು.