ಎಲ್.ಜಿ.ಹಾವನೂರ್ ಆದರ್ಶ ಪಾಲಿಸಲು ನ್ಯಾ.ಊರ್ಮಿಳಾ ವಿ.ಕರೆ

KannadaprabhaNewsNetwork |  
Published : Mar 28, 2026, 01:45 AM IST
ತುಂಗಭದ್ರ ವಿದ್ಯಾ ಸಂಸ್ಥೆಯಲ್ಲಿ ಹಿಂದುಳಿದ ಆಯೋಗದ ಅಧ್ಯಕ್ಷರಾದ ದಿವಂಗತ ಎಲ್.ಜಿ.ಹಾವನೂರ್ ರವರ ಜನ್ಮದಿನಾಚರಣೆ ಕಾರ್ಯಕ್ರಮ | Kannada Prabha

ಸಾರಾಂಶ

ತರೀಕೆರೆಎಲ್.ಜಿ.ಹಾವನೂರ್ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಅವರ ಅದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಊರ್ಮಿಳಾ ವಿ. ಹೇಳಿದ್ದಾರೆ.

ಹಿಂದುಳಿದ ಆಯೋಗದ ಅಧ್ಯಕ್ಷ ದಿ. ಎಲ್.ಜಿ.ಹಾವನೂರ್ ಜನ್ಮದಿನಾಚರಣೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಎಲ್.ಜಿ.ಹಾವನೂರ್ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಅವರ ಅದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಊರ್ಮಿಳಾ ವಿ. ಹೇಳಿದ್ದಾರೆ.ಕಾನೂನು ನೆರವು ಸಮಿತಿ, ತುಂಗಭದ್ರ ವಿದ್ಯಾ ಸಂಸ್ಥೆ ಆಶ್ರಯದಲ್ಲಿ ನಡೆದ ಹಿಂದುಳಿದ ಆಯೋಗದ ಅಧ್ಯಕ್ಷ ದಿವಂಗತ ಎಲ್.ಜಿ. ಹಾವನೂರ್ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.ಎಲ್.ಜಿ.ಹಾವನೂರ್ ರಾಜ್ಯಸಭೆ, ವಿಧಾನ ಪರಿಷತ್ ಸದಸ್ಯರನ್ನಾಗಿ ಗಳಿಸಿದ ಕೀರ್ತಿ ದಿ. ಮುಖ್ಯಮಂತ್ರಿ ದೇವರಾಜ ಆರಸ್ ಅವರಿಗೆ ಸಲ್ಲಿಸಿದ್ದು, ನಂತರ ಹಿಂದುಳಿದ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ತಮ್ಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದರು, ಸಮಾಜದಲ್ಲಿ ಹಿಂದುಳಿದ ವರ್ಗದ ಜನತೆಗೆ ಮೀಸಲಾತಿ ನೀಡುವಲ್ಲಿ ಹೆಚ್ಚಿನ ಶ್ರಮ ವಹಿಸಿದರು ಎಂದು ಹೇಳಿದರುಈ ಕಾಲೇಜಿನಲ್ಲಿ ಡಿ.ಎಡ್.ಪ್ರಶಿಕ್ಷಣಾರ್ಥಿಗಳು ಇದ್ದು ಅವರು ಮುಂದಿನ ದಿನಗಳಲ್ಲಿ ಶಿಕ್ಷಕರಾಗಿ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಮಾಡುವ ಜವಾಬ್ಧಾರಿ ತಮ್ಮ ಮೇಲಿದೆ ಎಂದು ವಿವರಿಸಿದರು. ಹಿರಿಯ ವಕೀಲ ಎಂ.ಕೆ.ತೇಜಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಅನೇಕ ಕಾಯಿದೆಗಳು ಜಾರಿ ಯಲ್ಲಿದ್ದು ಅದರಲ್ಲಿ ಶಿಕ್ಷಣ ಪಡೆಯುವ ಹಕ್ಕು ಇದೆ. ಒಂದು ಪಿಡುಗಾದ ರ್‍ಯಾಗಿಂಗ್ ತೊಲಗಿಸಬೇಕು ಎಂದು ತಿಳಿಸಿದರು.ಹಿರಿಯ ವಕೀಲ ಎಸ್.ಸುರೇಶ್ ಚಂದ್ರ ಮಾತನಾಡಿ ಬಾಲ ನ್ಯಾಯ ಕಾಯಿದೆ ಮಕ್ಕಳ ಹಕ್ಕು ಬಗ್ಗೆ ವಿವರಿಸಿ ತಾಲೂಕು ಕಾನೂನು ನೆರವು ಸಮಿತಿಯಿಂದ ಮಹಿಳೆಯರಿಗೆ ಬಡವರಿಗೆ ಎಸ್.ಸಿ.ಎಸ್.ಟಿ.ಜನರಿಗೆ ನ್ಯಾಯಾಲಯದಲ್ಲಿ ಕೇಸು ನಡೆಸಲು ಉಚಿತವಾಗಿ ವಕೀಲರ ನೇಮಿಸಿಕೊಡಲಾಗುವುದು ಹಾಗೂ ಲೋಕ ಅದಾಲತ್ ಮೂಲಕ ಕೇಸುಗಳನ್ನು ರಾಜಿ ಮಾಡಿಸಿ ಪ್ರಕರಣ ಇತ್ಯರ್ಥಗೊಳಿಸಲಾಗುವುದು ಎಂದು ಹೇಳಿದರು.ವಕೀಲ ಬಿ.ಪಿ.ವಿಕಾಸ್ ಫೋಕ್ಸೋ ಕಾಯಿದೆ ಬಗ್ಗೆ ಮಾತನಾಡಿದರು. ಪ್ರಾಂಶುಪಾಲರಾದ ಬಿಂದು, ಸಂದೇಶ್ ಭಾಗವಹಿಸಿದ್ದರು.

-

26ಕೆಟಿಆರ್.ಕೆ.5ಃ ತರೀಕೆರೆಯಲ್ಲಿ ಕಾನೂನು ನೆರವು ಸಮಿತಿ, ತುಂಗಭದ್ರ ವಿದ್ಯಾ ಸಂಸ್ಥೆ ಆಶ್ರಯದಲ್ಲಿ ನಡೆದ ಎಲ್.ಜಿ. ಹಾವನೂರ್ ಜನ್ಮದಿನಾಚರಣೆಯನ್ನು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಊರ್ಮಿಳಾ ವಿ. ಉದ್ಘಾಟಿಸಿದರು. ಹಿರಿಯ ವಕೀಲರಾದ ಎಂ.ಕೆ.ತೇಜಮೂರ್ತಿ, ಎಸ್.ಸುರೇಶ್ ಚಂದ್ರ, ವಕೀಲ ಬಿ.ಪಿ.ವಿಕಾಸ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀಕ್ಷೇತ್ರ ಧರ್ಮಸ್ಥಳದಿಂದ ನಿರ್ಮಿಸಿದ ಮನೆ ನಿರ್ಗತಿಕ ದಂಪತಿಗೆ ವಿತರಣೆ
ಹಕ್ಕುಚ್ಯುತಿ ಹಿಂಪಡೆಯದಿದ್ದರೆ ರೇವಣ್ಣ ವಿರುದ್ಧ ಮರಿಜೋಸೆಫ್‌ ಹೋರಾಟ