ಕನ್ನಡಪ್ರಭ ವಾರ್ತೆ ಮೇಲುಕೋಟೆ
ಕನಗೋನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಮಾಜ ಸೇವಕ ಕೆ.ಸಿ.ಪರಮೇಶ್‌ಗೌಡರು 2ನೇ ಬಾರಿಗೆ ಹಾಗೂ ಉಪಾಧ್ಯಕ್ಷರಾಗಿ ತಿಮ್ಮೇಗೌಡ ಅವಿರೋಧವಾಗಿ ಆಯ್ಕೆಯಾದರು.ಸಂಘದ ಒಟ್ಟು 11 ನಿರ್ದೇಶಕರಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಕೆ.ಸಿ.ಪರಮೇಶ್‌ಗೌಡ ಹಾಗೂ ತಿಮ್ಮೇಗೌಡ ಅವರನ್ನು ಹೊರತುಪಡಿಸಿ ಪಕ್ಷತೀತಾವಾಗಿ ಬೆಂಬಲಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅಧ್ಯಕ್ಷರು-ಉಪಾಧ್ಯಕ್ಷರ ಅವಿರೋಧ ಆಯ್ಕೆ ಘೋಷಿಸಲಾಯಿತು. ಈ ವೇಳೆ ಸಿಹಿ ವಿತರಿಸಿ ಸಂಭ್ರಮಿಸಲಾಯಿತು. ಸಹಕಾರ ಇಲಾಖೆಯ ಕೆ.ಹೇಮಲತಾ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ನೂತನ ಅಧ್ಯಕ್ಷ ಕೆ.ಸಿ.ಪರಮೇಶ್ ಮಾತನಾಡಿ, ಸಂಘದ ಎಲ್ಲಾ ನಿರ್ದೇಶಕರ ಸಹಕಾರದೊಂದಿಗೆ ಡೇರಿಯನ್ನು ಅಭಿವೃದ್ಧಿಗೊಳಿಸುವ ಮೂಲಕ ಮಾದರಿಯನ್ನಾಗಿ ಮಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಗ್ರಾಮದ ರೈತರ ಕಷ್ಠಸುಖಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ ಎಂದರು.ಪಕ್ಷಾತೀತವಾಗಿ ಸಹಕಾರನೀಡಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸುತ್ತೇನೆ. ಸಂಘದ ಷೇರುದಾರರಿಗೆ ಕಾಲಕಾಲಕ್ಕೆ ಬೋನಸ್, ಸಾಲ ವಿತರಣೆ ಮಾಡುವ ಜತೆಗೆ 15 ದಿನಕ್ಕೊಮ್ಮೆ ಹಾಲು ಹಾಕಿದ ಹಣವನ್ನು ಬಟವಾಡೆ ಮಾಡಲಾಗುವುದು. ಮಾಜಿ ಅಧ್ಯಕ್ಷ ಶಿವಲಿಂಗೇಗೌಡರು ಡೇರಿ ಕಟ್ಟಡ ನಿರ್ಮಾಣ ಮಾಡಿಸಿದ್ದರು. ಮುಂದಿನ ದಿನಗಳಲ್ಲಿ ಡೇರಿ ಮೇಲಂತಸ್ಥಿನ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದರು.
ಈ ವೇಳೆ ನಿರ್ದೇಶಕರಾದ ರಾಮಸ್ವಾಮಿ, ಕೆ.ಎಲ್.ಹನುಮಂತೇಗೌಡ,ರಮೇಶ್, ಕೆ.ಎಸ್.ರಾಮಲಿಂಗೇಗೌಡ, ಮಂಗಳಾ, ಮಂಜುಳಾ, ಸರೋಜಮ್ಮ, ವಿಜಯಕುಮಾರ್, ಕಾರ್ಯದರ್ಶಿ ಕುಮಾರ, ಹಾಲು ಪರೀಕ್ಷಕ ಸಿಂಗ್ರೀಗೌಡ, ಸಿಬ್ಬಂದಿ ಇತರರು ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿದರು.ಶ್ರೀ ಕೃಷ್ಣರಾಜೇಂದ್ರ ಸಹಕಾರ ಸಂಘ ಮೈತ್ರಿ ಬೆಂಬಲಿತರಿಗೆ ಗೆಲುವು
ಶ್ರೀರಂಗಪಟ್ಟಣ:ಪಟ್ಟಣದ ಶ್ರೀಕೃಷ್ಣರಾಜೇಂದ್ರ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಬೆಂಬಲಿತ 8 ಮಂದಿ ಆಯ್ಕೆಯಾಗಿದ್ದಾರೆ.
ಸಂಘದಲ್ಲಿ ಒಟ್ಟು 13 ಮಂದಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಉಮೇಶ್ ಕುಮಾರ್, ಸಿ.ವಸಂತಕುಮಾರ್, ಎಸ್.ರಘು, ಜಿ.ವಿ.ನಾರಾಯಣಸ್ವಾಮಿ, ಎಸ್.ಟಿ.ರಾಜು, ಎಸ್.ಕೆ ಕುಬೇರ್‌ಸಿಂಗ್, ಲಕ್ಷಣ್‌ಸಿಂಗ್, ಸಾಯಿ ಲೀಲಾ ಸೇರಿ 8 ಸ್ಥಾನಗಳನ್ನು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾದರು.ಉಳಿದಂತೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಾರಾಯಣ್, ಈ. ಪರಮೇಶ್, ಭಾನುಮತಿ, ಸಿ. ಪ್ರಕಾಶ್ ಹಾಗೂ ಮಹದೇವ ಸೇರಿ 5 ಮಂದಿ ಅಭ್ಯರ್ಥಿಗಳು ಗೆಲುವು ಸಾಧಿಸಿದರು. ತೀವ್ರ ಪೈಪೋಟಿ ನಡೆದಿದ್ದ ಸಂಘದ ಚುನಾವಣೆ ಕಳೆದ ಮಾ.22ರಂದು ಮತದಾನ ನಡೆದಿತ್ತು.
ಮತದಾನದ ಹಕ್ಕು ಪಡೆಯಲು ಕಾಂಗ್ರೆಸ್ ಬೆಂಬಲಿತ ಸದಸ್ಯರು ಕೋರ್ಟ್ ಮೆಟ್ಟಿಲೇರಿ ಮತದಾನದ ಹಕ್ಕು ತಂದು ಮತ ಚಲಾಯಿಸಿದ್ದರು. ಇದನ್ನು ಪ್ರಶ್ನಿಸಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಸದಸ್ಯರು ಸಹ ಕೋರ್ಟ್ ಮೆಟ್ಟಿಲೇರಿದ್ದು, ಕೋರ್ಟ್ ಎಲ್ಲಾ ಮತಗಳ ಎಣಿಕೆ ಮಾಡಲು ಅನುಮತಿ ನೀಡಿ ದಿನಾಂಕ ನಿಗದಿ ಪಡಿಸಿತ್ತು. ಚುನಾವಣಾಧಿಕಾರಿ ವಸೀಂ ಪಾಷ ಕೋರ್ಟ್ ಆದೇಶದಂತೆ ಎಲ್ಲಾ ಮತಗಳ ಎಣಿಕೆ ಮಾಡುವ ಮೂಲಕ ಚುನಾವಣಾ ಕಾರ್ಯ ನಡೆಸಿ ಫಲಿತಾಂಶ ಘೋಷಣೆ ಮಾಡಿದರು.