ಆರಾಧನಾ ಮಹೋತ್ಸವದ ಅಂಗವಾಗಿ ಗುರುವಾರ ಬೆಳಗಿನ ಜಾವದಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಆರಂಭಗೊಂಡಿದ್ದವು. ದಿನವಿಡೀ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧೆಯಿಂದ ನೆರವೇರಿದವು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪುರಸಭಾ ವ್ಯಾಪ್ತಿಯ ಹೊಸಹೊಳಲು ಗ್ರಾಮದಲ್ಲಿ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು.
ಆರಾಧನಾ ಮಹೋತ್ಸವದ ಅಂಗವಾಗಿ ಗ್ರಾಮದ ಪ್ರಮುಖ ರಸ್ತೆಯಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ವಿಗ್ರಹವನ್ನು ಸುಂದರವಾಗಿ ಅಲಂಕರಿಸಿ ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಿ ಭವ್ಯ ಮೆರವಣಿಗೆ ಮಾಡಲಾಯಿತು.
ಮೆರವಣಿಗೆಯಲ್ಲಿ ಗ್ರಾಮದ ನೂರಾರು ಮಹಿಳೆಯರು ಪೂರ್ಣಕುಂಭದೊಂದಿಗೆ ಪಾಲ್ಗೊಂಡು ಭಕ್ತಿಭಾವ ಮೆರೆದು ಸಾಗಿದರು. ಭಕ್ತಿಗೀತೆಗಳು ಹಾಗೂ ಧಾರ್ಮಿಕ ಘೋಷಣೆಗಳು ಮೊಳಗಿದವು. ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ವಿವಿಧ ಬಡಾವಣೆಗಳಿಂದ ಭಕ್ತರು ಆಗಮಿಸಿದ್ದರು.
ಆರಾಧನಾ ಮಹೋತ್ಸವದ ಅಂಗವಾಗಿ ಗುರುವಾರ ಬೆಳಗಿನ ಜಾವದಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಆರಂಭಗೊಂಡಿದ್ದವು. ದಿನವಿಡೀ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧೆಯಿಂದ ನೆರವೇರಿದವು.
ಚೆನ್ನರಾಯಪಟ್ಟಣದ ಅರ್ಚಕರಾದ ಪ್ರಕಾಶ್ ಅವರ ನೇತೃತ್ವದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳಿಗೆ ವಿಶೇಷ ಪೂಜೆ, ಅಭಿಶಕ, ಅಲಂಕಾರ ಹಾಗೂ ಆರಾಧನಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಾಯರ ದರ್ಶನ ಪಡೆದು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಕಾರ್ಯಕ್ರಮದಲ್ಲಿ ಆರ್‌ಟಿಒ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಗ್ರಾಮದ ಮುಖಂಡರು, ಮಹಿಳೆಯರು, ಯುವಕರು ಹಾಗೂ ಭಕ್ತರು ಉಪಸ್ಥಿತರಿದ್ದರು.
ಈ ವೇಳೆ ಗ್ರಾಮದ ಮುಖಂಡರಾದ ಎಚ್.ಆರ್.ವೆಂಕಟೇಶ್, ಜ್ಯೋತಿ, ಐಸಿಎಲ್ ಮಂಜುನಾಥ್, ರಾಘು, ಶೀಲಾ, ಸುನಿಲ್, ರಾಣಿ, ಪುರಸಭಾ ಮಾಜಿ ಸದಸ್ಯರಾದ ಎಚ್.ಎನ್.ಪ್ರವೀಣ್, ಎಚ್.ಆರ್.ಲೋಕೇಶ್, ಸಾಮಿಲ್ ರಘು, ನಂದಕುಮಾರ್, ಶ್ರೀನಿವಾಸ್, ಎಚ್.ಎನ್.ಬಾಲಕೃಷ್ಣ, ಶ್ರೀಧರ್, ಸೌಮ್ಯ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
ಶ್ರೀವ್ಯಾಸರಾಜ ಮಠದಲ್ಲಿ ಶ್ರೀರಾಘವೇಂದ್ರ ಆರಾಧನಾ ಮಹೋತ್ಸವ
ಕನ್ನಡಪ್ರಭ ವಾರ್ತೆ ಮಂಡ್ಯನಗರದ ಶ್ರೀವ್ಯಾಸರಾಜ ಮಠದಿಂದ ಆ.೨೭ರಿಂದ ಆ.೩೧ರವರೆಗೆ ಶ್ರೀರಾಘವೇಂದ್ರ ಗುರುಸಾರ್ವಭೌಮರ ಆರಾಧನಾ ಮಹೋತ್ಸವವನ್ನು ಏರ್ಪಡಿಸಲಾಗಿದೆ ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ.
ಆ.೨೭ರಂದು ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು. ಆ.೨೮ರಂದು ಸಂಜೆ ೬.೩೦ಕ್ಕೆ ಗೋಧೂಳಿ ಲಗ್ನದಲ್ಲಿ ಲಕ್ಷ್ಮೀಪೂಜೆ, ಧಾನ್ಯ ಮತ್ತು ಗೋಪೂಜೆ ನಡೆಯಲಿದೆ. ೭.೩೦ಕ್ಕೆ ಶ್ರೀ ನಂದಿಕೇಶ್ವರ ಭರತನಾಟ್ಯ ಕಲಾಶಾಲೆಯ ಕೆ.ಎಸ್.ಶೈಲಾ ಅವರಿಂದ ಭರತನಾಟ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ.ಆ.೨೯ರಂದು ಶ್ರೀ ಗುರುಸಾರ್ವಭೌಮರ ಪೂರ್ವಾರಾಧನೆ ಪ್ರಯುಕ್ತ ಬೆಳಗ್ಗೆ ೭ಕ್ಕೆ ಪಾದಪೂಜೆ, ಸೇವಾ ಸಂಕಲ್ಪ, ೭.೩೦ಕ್ಕೆ ಅಷ್ಟೋತ್ತರ ಸಹಿತ ಪಂಚಾಮೃತ ಅಭಿಷೇಕ, ೧೦.೩೦ಕ್ಕೆ ಕನಕಾಭಿಷೇಕ, ಸಂಜೆ ೬ಕ್ಕೆ ಪ್ರಾಕಾರೋತ್ಸವ, ೬.೨೫ಕ್ಕೆ ಅಷ್ಟಾವಧಾನ ಸೇವೆ, ೬.೩೦ಕ್ಕೆ ಬೆಂಗಳೂರಿನ ದೂರದರ್ಶನ ಕಲಾವಿದೆ ನಮಿತಾ ದೇಸಾಯಿ ಅವರಿಂದ ಭರತನಾಟ್ಯ, ರಾತ್ರಿ ೯ಕ್ಕೆ ಮಹಾಮಂಗಳಾರತಿ ನಡೆಯಲಿದೆ.
ಆ.೩೦ರಂದು ಗುರು ರಾಘವೇಂದ್ರರ ಮಧ್ಯಾರಾಧನೆ ಪ್ರಯುಕ್ತ ಬೆಳಗ್ಗೆ ೭ಕ್ಕೆ ಪಾದಪೂಜೆ, ಸೇವಾ ಸಂಕಲ್ಪ, ೭.೩೦ಕ್ಕೆ ಪಂಚಾಮೃತಾಭಿಷೇಕ, ೯.೩೦ಕ್ಕೆ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಪಲ್ಲಕ್ಕಿ ಉತ್ಸವ, ಮಹಾರಥೋತ್ಸವ ನಡೆಯಲಿದೆ. ೧೧ ಗಂಟೆಗೆ ಕನಕಾಭಿಷೇಕ, ಸಂಜೆ ೫ಕ್ಕೆ ಶ್ರೀಕೃಷ್ಣ ಭಜನಾ ಮಂಡಳಿಯವರಿಂದ ಭಕ್ತಿಗಾನಸುಧಾ, ೬ಕ್ಕೆ ಶ್ರೀಮನ್ಮಾಧ್ವ ಭಜನಾ ಮಂಡಳಿಯಿಂದ ದೇವರನಾಮ, ೭ಕ್ಕೆ ಶ್ರೀವರಾಹಹರಿವಿಠಲದಾಸರಿಂದ ಶ್ರೀರಾಘವೇಂದ್ರ ವಿಜಯ ಪ್ರವಚನ ಏರ್ಪಡಿಸಲಾಗಿದೆ.ಆ.೩೧ರಂದು ಶ್ರೀಗುರು ರಾಘವೇಂದ್ರರ ಉತ್ತರಾರಾಧನೆ ಅಂಗವಾಗಿ ಬೆಳಗ್ಗೆ ೭ಕ್ಕೆ ಪಾದಪೂಜೆ, ಸೇವಾ ಸಂಕಲ್ಪ, ೭.೩೦ಕ್ಕೆ ಪಂಚಾಮೃತಾಭಿಷೇಕ, ೧೦ಕ್ಕೆ ಕನಕಾಭಿಷೇಕ, ೧೧ಕ್ಕೆ ಮೈಸೂರಿನ ಬಿ.ಪಾಂಡುರಂಗಾಚಾರ್ಯ ಇವರಿಂದ ಅಪೇಕ್ಷಿತ ಪ್ರದಾತಾನ್ಯೋ ರಾಘವೇಂದ್ರಾನ್ನವಿದ್ಯತೆ ಕುರಿತು ಪ್ರವಚನ, ಸಂಜೆ ೬ಕ್ಕೆ ಪ್ರಾಕಾರೋತ್ಸವ, ೬.೧೫ಕ್ಕೆ ಅಷ್ಟಾವಧಾನ ಸೇವೆ, ೬.೩೦ಕ್ಕೆ ಆಕಾಶವಾಣಿ ಕಲಾವಿದ ವಿ.ಮಧೂರು ನಾರಾಯಣ ಸರಳಾಯ ಮತ್ತು ಉಡುಪಿ ಶ್ರೀಕೃಷ್ಣ ಮಠದ ಬಳಗದವರಿಂದ ದಾಸ ಸಿಂಚನ ಕಾರ್ಯಕ್ರಮ ಆಯೋಜಿಸಲಾಗಿದೆ. ಸೆ.೪ ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರಾತ್ರಿ ೯ಕ್ಕೆ ವಿಶೇಷ ಪೂಜಾಲಂಕಾರ ಏರ್ಪಡಿಸಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.