ಕನ್ನಡಪ್ರಭ ವಾರ್ತೆ ಕೆ.ಆರ್. ನಗರಲಾರಿ ಮಾಲೀಕರಿಗೆ ಕೇಂದ್ರ ಸರ್ಕಾರ ಹೊಸದಾಗಿ ಜಾರಿ ಮಾಡಿರುವ ನಿಯಮ ಮರಣ ಶಾಸನವಾಗಿದ್ದು, ಕೂಡಲೇ ಅದನ್ನು ರದ್ದುಪಡಿಸಬೇಕು ಎಂದು ಸಾಲಿಗ್ರಾಮ ಮತ್ತು ಕೆ.ಆರ್. ನಗರ ತಾಲೂಕುಗಳ ಲಾರಿ ಮಾಲೀಕರು ಮತ್ತು ಚಾಲಕರು ಆಗ್ರಹಿಸಿದರು.
ದಿಢೀರ್ ನಿಯಮದಿಂದ ಮಾಲೀಕರು ಮತ್ತು ಚಾಲಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಕೂಡಲೇ ಕೇಂದ್ರ ಸರ್ಕಾರ ಇದನ್ನು ವಾಪಾಸ್ ಪಡೆಯಬೇಕು ಎಂದು ಒತ್ತಾಯಿಸಿದ ಅವರು, ನಿರಂತರವಾಗಿ ಮುಷ್ಕರ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಾವು ಸಹ ಸಾರ್ವಜನಿಕ ಸೇವೆ ಮಾಡುತ್ತಿದ್ದು, ದೇಶದಲ್ಲಿ ಶೇ. 70ರಷ್ಟು ವ್ಯಾಪಾರ ಮತ್ತು ವಹಿವಾಟು ನಡೆಯುತ್ತಿರುವುದು ನಮ್ಮಿಂದಲೇ ಜತೆಗೆ ಪ್ರಸ್ತುತ ಶೇ. 50 ರಷ್ಟು ಚಾಲಕರ ಕೊರತೆಯನ್ನು ದೇಶ ಎದುರಿಸುತ್ತಿದ್ದು, ನಮ್ಮ ಸಂಕಷ್ಟಗಳನ್ನು ಅರಿತುಕೊಂಡು ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಿ ಹೊಸ ನಿಯಮವನ್ನು ರದ್ದು ಪಡಿಸಬೇಕೆಂದು ಹೇಳಿದರು.ಸಾಲಿಗ್ರಾಮ ತಾಲೂಕು ಸಂಘದ ಅಧ್ಯಕ್ಷ ಜಯರಾಮ್, ಪದಾಧಿಕಾರಿಗಳಾದ ಹರೀಶ್, ಮಹೇಶ್, ಎಚ್.ಕೆ. ಸುರೇಶ್, ತಿಮ್ಮೇಗೌಡ, ಫಜಲ್, ಹಿನಾಯತ್, ರಫಿಕ್, ಸಫೀಕ್, ನಾಗರಾಜು, ಶ್ರೀಕಂಠಮೂರ್ತಿ, ಅರಸು, ಜಬೀಉಲ್ಲಾ, ರಮೇಶ್, ವಿರುಪಾಕ್ಷ ಭಾಗವಹಿಸಿದ್ದರು.