ಕುಪ್ಪೆ ಮಹದೇವಸ್ವಾಮಿ
ಪಟ್ಟಣದ ಪುರಸಭೆಯ ಚುನಾಯಿತ ಆಡಳಿತ ಸದಸ್ಯರ ಅಧಿಕಾರವಧಿ ನ. 6 ರಂದು ಗುರುವಾರ ಕೊನೆಗೊಳ್ಳಲಿದೆ.
2019ರ ಮೇ 31ರಂದು ಪುರಸಭೆಯ 23 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ -14, ಜೆಡಿಎಸ್ - 8, ಬಿಜೆಪಿ -1 ಸ್ಥಾನವನ್ನು ಗಳಿಸಿತ್ತು, ಜೆಡಿಎಸ್ ತೆಕ್ಕೆಯಲ್ಲಿದ್ದ ಆಡಳಿತವನ್ನು ಕಾಂಗ್ರೆಸ್ ಕೈ ವಶ ಮಾಡಿಕೊಂಡಿತ್ತು.ಚುನಾವಣೆ ನಡೆದ 18 ತಿಂಗಳು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ರಾಜ್ಯ ಸರ್ಕಾರ ಮೀಸಲಾತಿ ನಿಗದಿ ಮಾಡಿರಲಿಲ್ಲ, ವಿಳಂಬವಾಗಿ ಆನಂತರ ಮೀಸಲಾತಿ ನಿಗದಿಯಾಗಿ 2020ರ ನ. 6 ರಂದು ಅಧ್ಯಕ್ಷರಾಗಿ ಕೆ.ಜಿ. ಸುಬ್ರಮಣ್ಯ ಮತ್ತು ಉಪಾಧ್ಯಕ್ಷೆಯಾಗಿ ಸೌಮ್ಯ ಲೋಕೇಶ್ ಅವಿರೋಧ ಆಯ್ಕೆಯಾದರು.
ಎರಡನೇ ಅವಧಿಯ30 ತಿಂಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಕಟಗೊಳಿಸಲು ವಿಳಂಬ ಮಾಡಿದ್ದರಿಂದ ಹುಣಸೂರು ಉಪವಿಭಾಗಾಧಿಕಾರಿಗಳು 19 ತಿಂಗಳ ಕಾಲ ಪುರಸಭೆಯ ಆಡಳಿತಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದರು.
ಚುನಾಯಿತ ಸದಸ್ಯರ ಅವಧಿ ಪೂರ್ಣಗೊಂಡಿರುವ ಹಿನ್ನೆಲೆ ಮತ್ತೆ ಹುಣಸೂರು ಉಪ ವಿಭಾಗಾಧಿಕಾರಿಗಳು ಆಡಳಿತಾಧಿಕಾರಿಯಾಗಿ ನೇಮಕಗೊಳ್ಳಲಿದ್ದಾರೆ.
ಪುರಸಭೆಯ ಆಡಳಿತದ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ಹೊಸ ಆಡಳಿತ ಮಂಡಳಿಗೆ ಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ 23 ವಾರ್ಡ್ ಗಳಿಗೆ ಸದಸ್ಯ ಸ್ಥಾನ ಸ್ಥಾನಕ್ಕೆ ಸ್ಪರ್ಧಿಸಲು ನೂರಾರು ಮಂದಿ ಸಿದ್ದರಾಗಿದ್ದಾರೆ.
- ಡಿ.ಶಿವಕುಮಾರ್, ಪುರಸಭೆ ಅಧ್ಯಕ್ಷರುಕಳೆದ ಚುನಾವಣೆಯಲ್ಲಿ 10 ನೇ ವಾರ್ಡಿನಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಎರಡನೇ ಬಾರಿ ಪುರಸಭೆಗೆ ಜೆಡಿಎಸ್ ಪಕ್ಷದ ವತಿಯಿಂದ ಸ್ಪರ್ದಿಸಿದ್ದ ನನಗೆ ವಾರ್ಡಿನ ಮತದಾರರು ಆರ್ಶಿವಾದ ಮಾಡಿ ಅಭೂತಪೂರ್ವ ಗೆಲುವು ತಂದಿಕೊಟ್ಟಿದ್ದರು, ಈಗ ಸದಸ್ಯತ್ವ ಅವಧಿ ಮುಗಿದಿದ್ದು ನಾನು ಸಂತಸದಿಂದ ಮಾಜಿ ಸದಸ್ಯನಾಗುತ್ತಿದ್ದು ಸರ್ಕಾರ ವಿಳಂಭ ಮಾಡದೆ ಸಕಾಲದಲ್ಲಿ ಪುರಸಭೆಗೆ ಸದಸ್ಯಸ್ಥಾನಗಳಿಗೆ ಚುನಾವಣೆ ನಡೆಸಿ ಅಭಿವೃದ್ಧಿಗೆ ಕುಂಠಿತವಾಗದಂತೆ ನೋಡಿಕೊಳ್ಳಬೇಕು.
- ಕೆ.ಜಿ. ಸುಬ್ರಮಣ್ಯ, ಪುರಸಭೆ ಸದಸ್ಯರುಪುರಸಭೆ ಸದಸ್ಯರ ಆಡಳಿತ ಅವಧಿ ಮುಕ್ತಾಯಗೊಂಡಿದ್ದು, ಗುರುವಾರ ಈ ಸಂಬಂಧ ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳ ಜತೆ ಚರ್ಚಿಸಿ ಅವರ ಆದೇಶದಂತೆ ನಡೆದುಕೊಳ್ಳುತ್ತೇನೆ.