ಕನ್ನಡ ಪ್ರಭವಾರ್ತೆ ಮುಧೋಳ
ರನ್ನ ವೈಭವ ಅಂಗವಾಗಿ ನಗರದ ರನ್ನ ಕ್ರೀಡಾಂಗಣದ ಆವರಣದಲ್ಲಿ ಫೆ.22ರಿಂದ 24ರವರೆಗೆ ಹಮ್ಮಿಕೊಂಡಿದ್ದ ಪುರುಷ ಹಾಗೂ ಮಹಿಳೆಯರ ಅಂತರರಾಜ್ಯ ಕಬಡ್ಡಿ ಪಂದ್ಯಾವಳಿಯ ಫೈನ್ ಪಂದ್ಯಗಳು ಸೋಮವಾರ ರಾತ್ರಿ ನಡೆದು ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.ಮಹಿಳಾ ವಿಭಾಗದ ಕಬಡ್ಡಿ ಪಂದ್ಯಾವಳಿಯ ಫಲಿತಾಂಶ: ಮಹಿಳೆಯರ ವಿಭಾಗದಲ್ಲಿ ಗುಜರಾಥ ಸ್ವಾಮಿ ನಾರಾಯಣ (ಪ್ರಥಮ), ವೆಸ್ಟರನ್ ರೈಲ್ವೆ ಮುಂಬೈ (ದ್ವಿತೀಯ), ಎಸ್.ಎಸ್.ಹರಿಯಾಣ (ತೃತೀಯ), ಬದ್ರಿಗಾದ್ ಹರಿಯಾಣ (ಚತುರ್ಥ) ಸ್ಥಾನವನ್ನು ಪಡೆದರು. ಮುಂಬಯಿಯ ರಷ್ಮಿ ಪಾಟೀಲ ಬೆಸ್ಟ್ ರೈಡರ್, ಗುಜರಾತಿನ ವನಿಸಿಕಾ ಬೆಸ್ಟ್ ಕ್ಯಾಚರ್, ಗುಜರಾತಿನ ಪ್ರಂಜಲ್ ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಗೆ ಪಾತ್ರರಾದರು.ಪುರುಷ ವಿಭಾಗದಲ್ಲಿ ಪೋಟ್ ಮುಂಬೈ (ಪ್ರಥಮ), ಸ್ವಾಮಿ ನಾರಾಯಣ ಗುಜರಾಥ (ದ್ವಿತೀಯ), ಆರ್.ಡಬ್ಲೂ.ಎಫ್ ಬೆಂಗಳೂರ (ತೃತೀಯ), ಪಿ.ಟಿ.ಬಿ ಪುಣೆ (ಚತುರ್ಥ) ಸ್ಥಾನವನ್ನು ಪಡೆದುಕೊಂಡರು. ಆರ್.ಡಬ್ಲೂ.ಎಫ್ ಬೆಂಗಳೂರಿನ ಆನಂದ ಬೆಸ್ಟ್ ರೈಡರ್, ಬೆಸ್ಟ್ ಕ್ಯಾಚರ್ ಆಗಿ ಗುಜರಾತಿನ ರಾಹುಲ್, ಬೆಸ್ಟ್ ಅಲ್ ರೌಂಡರ್ ಆಗಿ ಮುಂಬಯಿನ ಸಾಹಿಲ್ ಆಯ್ಕೆಯಾಗಿದರು.
ಪುರುಷ ಕಬಡ್ಡಿ ಪಂದ್ಯಾವಳಿಯ ಪ್ರಥಮ ಬಹುಮಾನ ₹1ಲಕ್ಷ ಕೆ.ಟಿ. ಪಾಟೀಲ, ದ್ವಿತೀಯ ಬಹುಮಾನ ₹75 ಸಾವಿರ ಈರಣ್ಣ ಗುರಡ್ಡಿ, ತೃತೀಯ ಬಹುಮಾನ ₹50 ಸಾವಿರ ಸಂಗಪ್ಪ ಸೋರಗಾಂವಿ, ಚತುರ್ಥ ಬಹುಮಾನ ₹25 ಸಾವಿರ ಲಕ್ಷ್ಮಣಗೌಡ ಆರ್.ಪಾಟೀಲ ನೀಡಿದ್ದಾರೆ.ಮಹಿಳಾ ಕಬಡ್ಡಿ ಪಂದ್ಯಾವಳಿಯ ಪ್ರಥಮ ಬಹುಮಾನ ₹1 ಲಕ್ಷ ವಿದ್ಯಾ ವಾಲಿ, ದ್ವಿತೀಯ ಬಹುಮಾನ ₹75 ಸಾವಿರ ಸುಮಿತ್ರಾ ಗುರಡ್ಡಿ, ತೃತೀಯ ಬಹುಮಾನ ₹50 ಸಾವಿರ ಲಲತಿ ಸೋರಗಾಂವಿ, ಚತುರ್ಥ ಬಹುಮಾನ ₹25 ಸಾವಿರ ಸಾವಿತ್ರಿ ಜಂಬಗಿ ನೀಡಿದ್ದರು.
ಕಬಡ್ಡಿ ಪಂದ್ಯದಲ್ಲಿ ವಿಜೇತರಾದ ತಂಡಕ್ಕೆ ಕೊಡುಗೆ ನೀಡಿರುವ ದಾನಿಗಳನ್ನು ಸಚಿವ ಆರ್.ಬಿ. ತಿಮ್ಮಾಪೂರ ಅವರು ಸಂಘಟಕರ ಪರವಾಗಿ ಅಭಿನಂದಿಸಿ, ಸನ್ಮಾನಿಸಿ, ಗೌರವಿಸಿದರು.ಕ್ರೀಡಾ ವಿಜೇತತರಿಗೆ ಪ್ರಶಸ್ತಿ ಮತ್ತು ಬಹುಮಾನ ವಿತರಿಸಲಾಯಿತು. ಕಬಡ್ಡಿ ಪಂದ್ಯಾವಳಿಯ ಸಂಘಟಕರನ್ನು ಸನ್ಮಾನಿಸಿ, ಗೌರವಿಸಿದರು. ಮೂರು ದಿನಗಳಿಂದ ನಡೆದ ಕಬಡ್ಡಿ ಪಂದ್ಯದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಹಲವು ತಂಡಗಳು ಭಾಗವಹಿಸಿದ್ದವು. ಸಹಸ್ರಾರು ಸಂಖ್ಯೆಯಲ್ಲಿ ಕಬಡ್ಡಿ ಪಂದ್ಯವನ್ನು ವೀಕ್ಷಿಸಿ ಆನಂದಿಸಿದರು.