ಕಡಂಗ: ಬೃಹತ್ ಭೂಪರಿವರ್ತನೆ ವಿರೋಧಿಸಿ ಸಿಎನ್‌ಸಿ ಮಾನವ ಸರಪಳಿ

KannadaprabhaNewsNetwork |  
Published : Dec 05, 2024, 12:30 AM IST
ಚಿತ್ರ : 4ಎಂಡಿಕೆ3 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕಡಂಗದಲ್ಲಿ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಸಿತು. | Kannada Prabha

ಸಾರಾಂಶ

ಬೃಹತ್ ಲೇಔಟ್ ಹಾಗೂ ಮೆಗಾ ಟೌನ್‌ಶಿಪ್‌ಗಳಿಗಾಗಿ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮಾಡುವುದನ್ನು ತಕ್ಷಣ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕಡಂಗದಲ್ಲಿ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಸಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗಿನ ಪರಿಸರಕ್ಕೆ ಮಾರಕವಾಗಿರುವ ಬೃಹತ್ ಲೇಔಟ್ ಹಾಗೂ ಮೆಗಾ ಟೌನ್‌ಶಿಪ್‌ಗಳಿಗಾಗಿ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮಾಡುವುದನ್ನು ತಕ್ಷಣ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕಡಂಗದಲ್ಲಿ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಸಿತು.

ನೇತೃತ್ವ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಕರ್ನಾಟಕ ಭೂ ಸುಧಾರಣಾ ಕಾಯ್ದೆ 2020-21ರ ಲೋಪದೋಷಗಳ ದುರ್ಲಾಭ ಪಡೆದು ಕರ್ನಾಟಕದ 29 ಜಿಲ್ಲೆಗಳ, ಭಾರತದ 29 ರಾಜ್ಯಗಳ ಮತ್ತು 8 ಕೇಂದ್ರಾಡಳಿತ ಪ್ರದೇಶಗಳ, ಜಗತ್ತಿನ 193 ದೇಶಗಳ ರಾಜಕಾರಣಿಗಳು, ಅಧಿಕಾರಶಾಹಿಗಳು ಹಾಗೂ ಆರ್ಥಿಕ ಅಪರಾಧಿಗಳು ಕೊಡವ ಲ್ಯಾಂಡ್‌ನಲ್ಲಿ ಬೇನಾಮಿ ಆಸ್ತಿ ಹೊಂದಿದ್ದು, ಈ ಪವಿತ್ರ ನೆಲೆ, ನೆಲ, ಜಲಮೂಲ ಮತ್ತು ಪ್ರಕೃತಿ ಲೂಟಿ ಮಾಡಿ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಮುಂದೊಂದು ದಿನ ಕಡಿಯತ್ ನಾಡಿನ ಪವಿತ್ರ ಮಲೆತಿರಿಕೆ ದೇವ ನೆಲೆಯ ಕುಂದ್ ಹಾಗೂ ಮನಮೋಹಕ ಚೋಮ ಕುಂದ್ ಮತ್ತು ನಯನ ಮನೋಹರ ಬೆಪ್ಪುನಾಡಿನ ಅಸ್ಮಿತೆ ಉಳಿಯುವುದಿಲ್ಲವೆಂದು ಆತಂಕ ವ್ಯಕ್ತಪಡಿಸಿದರು.

ಕೊಡವ ಲ್ಯಾಂಡ್ ಉಳಿವಿಗಾಗಿ ಆದಿಮಸಂಜಾತ ಕೊಡವರ ಭೂಮಿಗೆ ಶಾಸನ ಬದ್ಧ ಭದ್ರತೆ ಕಲ್ಪಿಸುವುದು, ಆದಿಮಸಂಜಾತ ಕೊಡವರ ಸಂಸ್ಕೃತಿ, ಪರಂಪರೆ ಪೂರ್ವಾರ್ಜಿತ ಆಸ್ತಿ ರಕ್ಷಣೆಗೆ ಸ್ವಯಂ ನಿರ್ಣಯದ ಹಕ್ಕು, ಕೊಡವ ಲ್ಯಾಂಡ್ ಮತ್ತು ಎಸ್.ಟಿ ಸ್ಥಾನಮಾನ ಸ್ಥಾಪಿಸಬೇಕಾಗಿದೆ ಎಂದರು.

ಮಾನವ ಸರಪಳಿ ಕಾರ್ಯಕ್ರಮದಲ್ಲಿ ಕೋಡಿರ ವಿನೋದ್, ಪಾಂಡಂಡ ಕಿಟ್ಟು, ಮಾತಂಡ ಕಂಬು ಉತ್ತಯ್ಯ, ಬಲ್ಲಚಂಡ ರವಿ, ಬಲ್ಲಚಂಡ ರಾಮಕೃಷ್ಣ, ಬೋಳಕಾರಂಡ ತಿಲಕ್, ಕೋದಂಡ ಸುರ, ಪಾಂಡಂಡ ಸುಧಿ, ಉದಿಯಂಡ ಚೆಂಗಪ್ಪ, ಚಂಬಂಡ ಜನತ್, ಅರೆಯಡ ಗಿರೀಶ್, ಬೇಪಡಿಯಂಡ ದಿನು ಮತ್ತಿತರರು ಪಾಲ್ಗೊಂಡಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ