ರಾಷ್ಟ್ರೀಯ ಮಕ್ಕಳ ಉತ್ಸವ: ಪೂರ್ವ ಸಿದ್ಧತಾ ಸಭೆ

KannadaprabhaNewsNetwork |  
Published : Aug 03, 2026, 03:00 AM IST
ರಾಷ್ಟ್ರೀಯ ಮಕ್ಕಳ ಉತ್ಸವ- ಶ್ರೀಕೃಷ್ಣ ವೇಷ ಸ್ಪರ್ಧೆ 2026ರ ಪೂರ್ವಭಾವಿ ಸಭೆ ನಡೆಯಿತು | Kannada Prabha

ಸಾರಾಂಶ

ಕಲ್ಕೂರ ಪ್ರತಿಷ್ಠಾನದ ವತಿಯಿಂದ ವರ್ಷಂಪ್ರತಿ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಸಹಯೋಗದೊಂದಿಗೆ ನಡೆಯುವ ‘ರಾಷ್ಟ್ರೀಯ ಮಕ್ಕಳ ಉತ್ಸವ - ಶ್ರೀ ಕೃಷ್ಣ ವೇಷ ಸ್ಪರ್ಧೆ’ 2026ರ ಬಗ್ಗೆ ಪೂರ್ವ ಸಿದ್ಧತಾ ಸಭೆ ‘ಶ್ರೀ ಕೃಷ್ಣ ಚಿಂತನಾ ಕೂಟ’ ಗುರುವಾರ ಮಂಗಳೂರು ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ನಡೆಯಿತು.

ಮಂಗಳೂರು: ಕಲ್ಕೂರ ಪ್ರತಿಷ್ಠಾನದ ವತಿಯಿಂದ ವರ್ಷಂಪ್ರತಿ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಸಹಯೋಗದೊಂದಿಗೆ ನಡೆಯುವ ‘ರಾಷ್ಟ್ರೀಯ ಮಕ್ಕಳ ಉತ್ಸವ - ಶ್ರೀ ಕೃಷ್ಣ ವೇಷ ಸ್ಪರ್ಧೆ’ 2026ರ ಬಗ್ಗೆ ಪೂರ್ವ ಸಿದ್ಧತಾ ಸಭೆ ‘ಶ್ರೀ ಕೃಷ್ಣ ಚಿಂತನಾ ಕೂಟ’ ಗುರುವಾರ ಮಂಗಳೂರು ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ನಡೆಯಿತು.

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಕದ್ರಿಯ ಅರ್ಚಕ ವಿದ್ವಾನ್ ಕೃಷ್ಣ ಅಡಿಗ ದೀಪ ಪ್ರಜ್ವಲನೆಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ.ಎಂ.ಬಿ.ಪುರಾಣಿಕ್ ಮಾರ್ಗದರ್ಶನ ನೀಡಿದರು.

ಪ್ರಮುಖರಾದ ಶಿವಪ್ರಸಾದ್ ಪ್ರಭು, ಪೂರ್ಣಿಮಾ ರಾವ್ ಪೇಜಾವರ, ವಿಜಯಲಕ್ಷ್ಮೀ ಬಿ.ಶೆಟ್ಟಿ, ಡಾ.ಎಂ.ಪ್ರಭಾಕರ ಜೋಶಿ, ಪ್ರೊ.ಜಿ.ಕೆ.ಭಟ್ ಸೇರಾಜೆ, ಪಮ್ಮಿ ಕೊಡಿಯಾಲ್ ಬೈಲ್, ಪ್ರಭಾಕರ ರಾವ್ ಪೇಜಾವರ, ರಾಮಚಂದ್ರ ಭಟ್ ಎಲ್ಲೂರು, ರವಿ ಅಲೆವೂರಾಯ, ಸಮೀರ್ ಪುರಾಣಿಕ್, ಸಂಜಯ್ ಕುಮಾರ್ ಶೆಟ್ಟಿ, ತಾರಾನಾಥ್ ಶೆಟ್ಟಿ ಬೋಳಾರ, ಜಯಲಕ್ಷ್ಮೀ ಟೀಚರ್, ಕವಿತಾ ಪಕ್ಕಳ, ಸುಮಾ ಮಾನ್ವಿ, ರಾಮಕೃಷ್ಣ ರಾವ್, ಕೃಷ್ಣ ಶೆಟ್ಟಿ ಪಾರೆಮಾರ್, ರೊಟೇರಿಯನ್ ವಿಕ್ರಂ ದತ್ತ, ಯೋಗೀಶ್ ಮುಚ್ಚಿಂತಾಯ, ಎಂ.ಎಸ್ ಗುರುರಾಜ್, ಗೀತಾ ಆಚಾರ್, ಚಾಂದಿನಿ ಕಿಶೋರ್ , ರಾಜೇಶ್ವರಿ ಎಲ್., ಶ್ರೀ ಗೌರಿ, ಶಕುಂತಲಾ ಸುಕುಮಾರ್, ಸುಜಾತಾ ಅಶೋಕ್, ಶೋಭಾ ಐತಾಳ್, ವಾರುಣಿ ನಾಗರಾಜ್, ಬಿಂದು, ವಿದ್ಯಾಶ್ರೀ ಕಲ್ಕೂರ ಮತ್ತಿತರರು ಇದ್ದರು.

ದಯಾನಂದ ಕಟೀಲ್ ಸ್ವಾಗತಿಸಿದರು. ಕದ್ರಿ ನವನೀತ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಸುಧಾಕರ ರಾವ್ ಪೇಜಾವರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವ ಕಳ್ಳಸಾಗಾಣಿಕೆಯ ಜಾಗೃತಿ ಮೂಡಿಸುವುದು ಮುಖ್ಯ: ಅರವಿಂದ ಹಾಗರಗಿ
ಸಂಗ್ರಹಿಸಿಟ್ಟಿದ್ದ ಅಕ್ರಮ ಪಡಿತರ ಅಕ್ಕಿ ವಶಕ್ಕೆ