ಕನ್ನಡಪ್ರಭ ವಾರ್ತೆ, ಕಡೂರು
ಶನಿವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ₹40 ಲಕ್ಷ ವೆಚ್ಚದ ಪ್ರಯೋಗಾಲಯ ಕಟ್ಟಡದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ಬ್ಲಾಕ್ (ಬಿಪಿಹೆಚ್ )ಮಟ್ಟದ ಯೋಜನೆ ₹40 ಲಕ್ಷ ವೆಚ್ಚದಲ್ಲಿ ನೂತನ ಪ್ರಯೋಗಾಲಯಕ್ಕೆ ಹಿಂದಿನ ವೈದ್ಯಾಧಿಕಾರಿ ಡಾ. ದೀಪಕ್ ಸೇರಿ ಈ ಜಾಗ ಆಯ್ಕೆ ಮಾಡಿ ಇದೀಗ ಕಾಮ ಗಾರಿಗೆ ಚಾಲನೆ ನೀಡಲಾಗುತ್ತಿದೆ. ಪ್ರತಿದಿನ ಈ ಆಸ್ಪತ್ರೆಗೆ ಸುಮಾರು 8-- 1ಸಾವಿರ ಜನರು ಬರುತ್ತಾರೆ. ನುರಿತ ವೈದ್ಯರು ಕೆಲಸ ಮಾಡುವ ಜೊತೆ ಹೆಚ್ಚುವರಿ ವೈದ್ಯರಿದ್ದು ಉತ್ತಮ ಸೇವೆ ಮಾಡುತ್ತಿದ್ದಾರೆ. ಇಲ್ಲಿರುವ ಸವಲತ್ತು ತಿಳಿಯದೆ ಬಡವರು ಖಾಸಗಿ ಆಸ್ಪತ್ರೆಗಳಿಗೆ ಹೋಗುವುದನ್ನು ತಪ್ಪಿಸಬೇಕಿದೆ ಎಂದರು.
ಎಂ.ಸಿ.ಹೆಚ್ (ತಾಯಿಮಗು) ಆಸ್ಪತ್ರೆಯ ಅಗತ್ಯ ಹೆಚ್ಚು ಇದ್ದು, ಕೇಂದ್ರ ಸರಕಾರದ ಮಾರ್ಗದರ್ಶನ, ನಿಯಮಾವಳಿಗಳ ಅಡಿ ಬರಲಿದೆ. ಬಡವರು ಖಾಸಗಿ ಆಸ್ಪತ್ರೆಗಳಿಗೆ ಹೋಗುವುದನ್ನು ತಪ್ಪಿಸಲು ತಾಯಿ ಮಗು ಆಸ್ಪತ್ರೆ ಮಂಜೂರು ಮಾಡಿಸಲು ಉದ್ದೇಶವಾಗಿದೆ.2014 ರಲ್ಲಿ ತಾಯಿ ಮಗು ಆಸ್ಪತ್ರೆ ಮಂಜೂರಾಗಿತ್ತು. ಅಗತ್ಯ ಜಾಗ ಸಿಗದ ಕಾರಣ ರದ್ದಾಗಿತ್ತು. ಈಗ ಈ ಆಸ್ಪತ್ರೆ ಮಂಜೂರಾತಿಗೆ ಪಟ್ಟಣದ ಗಾಣದಾಳಿನಲ್ಲಿ ಅರಣ್ಯ ಇಲಾಖೆಯಿಂದ 5 ಎಕರೆ ಜಮೀನು ಪಡೆಯಲಾಗಿದೆ.
ಆಸ್ಪತೆಯಲ್ಲಿ ಡಯಾಲಿಸಿಸ್ ಎರಡು ಘಟಕಗಳು ಕಾರ್ಯನಿರ್ವಹಿಸುತ್ತಿವೆ. ತಾವು ಶಾಸಕರಾದ ಮೇಲೆ ಇದೀಗ 8 ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಬೀರೂರು ಆಸ್ಪತ್ರೆಗೂ 4 ಡಯಾಲಿಸಿಸ್ ಘಟಕ ಮಂಜೂರು ಮಾಡಿಸಲಾಗುವುದು ಎಂದರು. ತಾಲೂಕಿನ ಪಿಎಚ್ ಸಿ, ಸಿ ಎಚ್ ಸಿ ಆಸ್ಪತ್ರೆಗಳು ಉತ್ತಮ ಕಾರ್ಯನಿರ್ವಹಿಸುತ್ತಿದ್ದು, ಅಧಿಕಾರಿಗಳು ವೈದ್ಯರ ಸಹಕಾರ ಉತ್ತಮವಾಗಿದೆ ಎಂದು ಅಧಿಕಾರಿ ನೌಕರರ ಕಾರ್ಯವನ್ನು ಶ್ಲಾಘಿಸಿದರು.
ಡೆಂಘೀ, ಚಿಕುನ್ ಗುನ್ಯಾದಂತಹ ಪರೀಕ್ಷೆಗಳು ನಡೆಯಲಿದ್ದು. ನಮ್ಮ ಶಾಸಕರ ಸಹಕಾರದಿಂದ ರಾಷ್ಟ್ರೀಯ ಕಾರ್ಯಕ್ರಮ ಅನುಷ್ಠಾನಕ್ಕೆ ಅನುಕೂಲ ಎಂದರು.
23ಕೆಕೆಡಿಯು 2.