ಕಾರವಾರ: ಭದ್ರು ಕ್ರಿಕೆಟ್ ಕ್ಲಬ್, ಕೈಗಾ ಆಶ್ರಯದಲ್ಲಿ ಕೈಗಾ ವಸತಿ ಸಂಕೀರ್ಣದಲ್ಲಿ ನಡೆದ ದೀಪಕ ಮೆಮೋರಿಯಲ್ ಟ್ರೋಫಿ 2025 ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಈಗಲ್ ಆಯ್ಸಿ ಮಲ್ಲಾಪುರ ತಂಡವು ಕಾಳಿ ಕ್ರಿಕೆಟರ್ಸ್ ಕದ್ರಾ ತಂಡವನ್ನು 3 ವಿಕೆಟ್‌ಗಳಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.ಕಾಳಿ ಕ್ರಿಕೆಟರ್ಸ್ ಕದ್ರಾ ತಂಡವು ರನ್ನರ್ಸ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ದೀಪಕ ಮೆಮೋರಿಯಲ್ ಟ್ರೋಫಿ 2025ರ ಪಂದ್ಯ ಮಾ.2ರಿಂದ ಆರಂಭಗೊಂಡು ಮಾ.31ರಂದು ಮುಕ್ತಾಯಗೊಂಡಿತು. ಈ ಟೂರ್ನಿಯುಲ್ಲಿ ೨೦ ಸ್ಥಳೀಯ ತಂಡಗಳು ಭಾಗವಹಿಸಿದ್ದವು. ನಾಕೌಟ್ ಆಧಾರದ ಮೇಲೆ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.ಈಗಲ್ ಆಯ್ಸಿ ತಂಡದ ಗಣೇಶ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರೆ, ಕಾಳಿ ಕ್ರಿಕೆಟರ್ಸ್ ತಂಡದ ಚೇತನ್ ಪಂದ್ಯಾವಳಿಯ ಉತ್ತಮ ಬ್ಯಾಟ್ಸ್ ಮನ್ ಹಾಗೂ ಗೋಲ್ಡನ್ ಸ್ಟಾರ್ ತಂಡದ ಆದಿತ್ಯ ಉತ್ತಮ ಬಾಲರ್ ಪ್ರಶಸ್ತಿಗೆ ಭಾಜನರಾದರು. ಈಗಲ್ ಆಯ್ಸಿ ತಂಡದ ವಿಶು ಅವರು ಪಂದ್ಯಾವಳಿಯ ಸರಣಿ ಪುರುಷೋತ್ತಮ ಪ್ರಶಸ್ತಿ ಪಡೆದರು.
ಸಮಾರೋಪ ಸಮಾರಂಭದಲ್ಲಿ ಕೈಗಾ 1ನೇ ಹಾಗೂ 2ನೇ ಘಟಕದ ಸ್ಥಾನಿಕ ನಿರ್ದೇಶಕ ಕೆ.ಶ್ರೀರಾಮ್ ಮುಖ್ಯಅತಿಥಿಯಾಗಿ ಹಾಗೂ ತಾಂತ್ರಿಕ ಸೇವಾ ಅಧೀಕ್ಷಕ ವಿ.ನಾಗರಿಕ ಉಪಸ್ಥಿತರಿದ್ದರು. ವಿಶೇಷ ಅತಿಥಿಗಳಾಗಿ ದೀಪಕ ನಾಯ್ಕ ಅವರ ತಾಯಿ ರುಕ್ಮಾ ನಾಯ್ಕ ಹಾಗೂ ಕುಟುಂಬದವರು ಪಾಲ್ಗೊಂಡಿದ್ದರು.ಭದ್ರು ಕ್ರಿಕೆಟ್ ಕ್ಲಬ್ ೧೯೯೩ರಿಂದ ಇಂತಹ ಟೂರ್ನಿಯನ್ನು ಆಯೋಜಿಸುತ್ತಿದ್ದು, ಈ ಪಂದ್ಯಾವಳಿಯನ್ನು ತಮ್ಮ ಸಹೋದ್ಯೋಗಿ ದೀಪಕ ನಾಯ್ಕರ ಅಗಲಿಕೆಯ ನಂತರ ಅವರ ಸ್ಮರಣಾರ್ಥ ಪ್ರತಿವರ್ಷ ಏರ್ಪಡಿಸುತ್ತಿದೆ. ಈ ಪಂದ್ಯಾವಳಿಯ ಸಮಾರಂಭದಲ್ಲಿ ಈ ಹಿಂದೆ ಅಂತಾಷ್ಟ್ರೀಯ ಕರ್ನಾಟಕದ ಕ್ರಿಕೆಟಿಗರಾದ ಬಿ.ಎಸ್. ಚಂದ್ರಶೇಖರ, ಸದಾನಂದ ವಿಶ್ವನಾಥ, ರಘುರಾಮ ಭಟ್, ವಿಜಯ ಭಾರದ್ವಾಜ ಪಾಲ್ಗೊಂಡಿದ್ದರು.