ವಿವೇಕಾನಂದ ಕಾಲೇಜಿನಲ್ಲಿ `ಪ್ರೇರಣಾ ೨೦೨೬ ವಾರ್ಷಿಕ ಶಿಬಿರ

KannadaprabhaNewsNetwork |  
Published : Oct 04, 2026, 03:00 AM IST
ಫೋಟೋ: ೧ಪಿಟಿಆರ್-ಕ್ಯಾಂಪ್ ವಿವೇಕಾನಂದ ಕಾಲೇಜಿನಲ್ಲಿ `ಪ್ರೇರಣಾ ೨೦೨೬ ವಾರ್ಷಿಕ ಶಿಬಿರ ನಡೆಯಿತು. | Kannada Prabha

ಸಾರಾಂಶ

ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ ಇದರ ಭವಿಷ್ ಮತ್ತು ಯಶಸ್ ಘಟಕ ಮತ್ತು ಕಲ್ಲಡ್ಕ ಶ್ರೀ ರಾಮ ಪ್ರಥಮ ದರ್ಜೆ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆಯುವ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮ

ಪುತ್ತೂರು: ಭಾರತೀಯ ಇತಿಹಾಸ, ಈ ಮಣ್ಣಿನ ಗ್ರಂಥಗಳು ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಪ್ರೇರಣೆಯಾಗಿದ್ದು, ಅದಕ್ಕೆಗುರುಗಳು ಮುಖ್ಯ ಕಾರಣರಾಗಿದ್ದಾರೆ. ಗುರುಗಳ ಮಾರ್ಗದರ್ಶನವಿದ್ದರೆ ನಾವು ಮಾಡುವ ಪ್ರತಿಯೊಂದು ಕೆಲಸವೂಪರಿಪೂರ್ಣವಾಗಲು ಸಾಧ್ಯ. ಸಮಾಜದ ವಿವಿಧ ಕ್ಷೇತ್ರಗಳಲ್ಲಿರುವವರನ್ನು ತಯಾರು ಮಾಡುವವರು ಗುರುಗಳಾಗಿದ್ದು, ಆರ್ಥಿಕವಾಗಿ ಶಿಕ್ಷಕ ವೃತ್ತಿ ಹಿಂದುಳಿದಿದ್ದರೂ ಸಮಾಜದಲ್ಲಿ ಇವರು ಮುಂದುವರೆದಿದ್ದಾರೆ ಎಂದು ವಿಶ್ರಾಂತ ಶಿಕ್ಷಕ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕ ಸುಬ್ರಹ್ಮಣ್ಯ ಭಟ್ ಕಜಂಪಾಡಿ ಹೇಳಿದರು.

ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ ಇದರ ಭವಿಷ್ ಮತ್ತು ಯಶಸ್ ಘಟಕ ಮತ್ತು ಕಲ್ಲಡ್ಕ ಶ್ರೀ ರಾಮ ಪ್ರಥಮ ದರ್ಜೆ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆಯುವ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಅಧ್ಯಕ್ಷೀಯ ನುಡಿಗಳನ್ನಾಡಿ, ವಿದ್ಯಾರ್ಥಿಗಳು ಮುಂದೆ ಶಿಕ್ಷಕರಾಗಿ ರಾಷ್ಟ್ರೀಯ ಚಿಂತನೆಗಳನ್ನು ಸಮಾಜದಲ್ಲಿ ಬಿತ್ತರಿಸಬೇಕು. ಶಿಕ್ಷಕರ ಮುಖ್ಯ ಗುರಿ ಉದ್ಯೋಗದ ಬದಲಾಗಿ ರಾಷ್ಟ್ರೀಯ ಸೇವೆ ಮಾಡುವುದರ ಕಡೆಗಿರಬೇಕು ಎಂದು ಹೇಳಿದರು.

ಕಾಲೇಜು ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಎಸ್ ಮಾತನಾಡಿ, ಭವಿಷ್ಯದ ಶಿಕ್ಷಕರನ್ನು ರೂಪಿಸುವ ಸಲುವಾಗಿ ಆಯೋಜಿಸಿರುವ ಭವಿಷ್ ಘಟಕ ವಿದ್ಯಾರ್ಥಿಗಳ ಭವಿಷ್ಯವನ್ನು ಬೆಳೆಸುವುದರ ಜೊತೆಗೆ, ಉತ್ತಮ ಮಾರ್ಗದರ್ಶನದ ಮೂಲಕ ಧನಾತ್ಮಕವಾಗಿ ಯಶಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವಂತೆ ಮಾಡುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಪತಿ ಕಲ್ಲೂರಾಯ ಮಾತನಾಡಿ, ಶಿಕ್ಷಕರ ಮುಖ್ಯ ಗುಣ ವಿದ್ಯಾರ್ಥಿಗಳನ್ನು ಉತ್ತಮ ಹಂತಕ್ಕೆ ಕೊಂಡೊಯ್ಯುದಾಗಿರಬೇಕು. ಹಾಗಾಗಿ ಇಂತಹ ಪ್ರೇರಣಾ ಶಿಬಿರ ವಿದ್ಯಾರ್ಥಿಗಳನ್ನು ಶಿಕ್ಷಕ ವೃತ್ತಿಯತ್ತ ಪ್ರೇರೇಪಿಸುತ್ತದೆ ಎಂದು ಹೇಳಿದರು.ಶಿಕ್ಷಕ ಮತ್ತು ರಂಗಕರ್ಮಿ ಚಂದ್ರಶೇಖರ ಸುಳ್ಯಪದವು ಹಾಗು ರಾಮಕುಂಜ ವಿದ್ಯಾಸಂಸ್ಥೆಯ ವಿಶ್ರಾಂತ ಪ್ರಾಂಶುಪಾಲ ಗಣರಾಜ ಕುಂಬ್ಳೆ ಇವರಿಂದ ವಿಶೇಷ ಮಾಹಿತಿ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮವನ್ನು ಭವಿಷ್ ಘಟಕದ ಸಂಯೋಜಕ ಡಾ. ಪ್ರಮೋದ್ ಎಮ್ ಜಿ. ಸ್ವಾಗತಿಸಿ, ಯಶಸ್ ಘಟಕದ ಸಂಯೋಜಕ ಗೋವಿಂದರಾಜ್ ಶರ್ಮ ವಂದಿಸಿ, ಭವಿಷ್ ಘಟಕದ ವಿಧ್ಯಾರ್ಥಿನಿ ಚೈತನ್ಯ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ
ಭ್ರಷ್ಟರ ಕೈಯಲ್ಲಿ ಸಿಕ್ಕು ಕಸಾಪ ಸಂಸ್ಥೆಯ ನೈತಿಕತೆ ಹಾಳು: ಪ್ರೊ.ಎಸ್.ಜಿ.ಸಿದ್ದರಾಮಯ್ಯ