ಕಲಾ ಮಂಜೂಷ: ರೋಟರಿ ಉಡುಪಿಗೆ ಸಮಗ್ರ ಪ್ರಶಸ್ತಿ

KannadaprabhaNewsNetwork |  
Published : Nov 12, 2025, 03:00 AM IST
10ಕಲಾಕಲಾಮಂಜೂಷವನ್ನು ಕೃಷ್ಣಮೂರ್ತಿ ಆಚಾರ್ಯ ಉದ್ಘಾಟಿಸಿದರು | Kannada Prabha

ಸಾರಾಂಶ

ವಲಯ ನಾಲ್ಕರ ರೋಟರಿ ಕುಟುಂಬ ಸದಸ್ಯರಿಗಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಸ್ಪರ್ಧೆ - ಕಲಾ ಮಂಜೂಷಾವನ್ನು ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ವಲಯ ನಾಲ್ಕರ ರೋಟರಿ ಕುಟುಂಬ ಸದಸ್ಯರಿಗಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಸ್ಪರ್ಧೆ - ಕಲಾ ಮಂಜೂಷಾವನ್ನು ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ರೋಟರಿ ಸದಸ್ಯರ ಪ್ರತಿಭೋದ್ದೀಪನಕ್ಕೆ ಇಂತಹ ವೇದಿಕೆಗಳು ನಿಜಕ್ಕೂ ಅತ್ಯಂತ ಸೂಕ್ತವಾಗಿವೆ ಎಂದರು.

ಮುಖ್ಯ ಅತಿಥಿ, ನಿಯೋಜಿತ ಜಿಲ್ಲಾ ಗವರ್ನರ್ ಬಿ.ಎಂ. ಭಟ್, ರೋಟರಿ ಅಭಿಯಾನದಲ್ಲಿ ಸ್ನೇಹ ಮತ್ತು ಒಡನಾಟಕ್ಕೆ ಒತ್ತು ನೀಡುವ ಕಾರ್ಯಕ್ರಮಗಳ ಔಚಿತ್ಯವನ್ನು ಸೋದಾರೋಹಣವಾಗಿ ವಿವರಿಸಿದರು.

ಆತಿಥೇಯ ಸಂಸ್ಥೆಯ ಅಧ್ಯಕ್ಷ ಸೂರಜ್ ಕುಮಾರ್ ಅಧ್ಯಕ್ಷತೆ ವಹಿಸಿದ್ದು, ವಲಯದ ಅಸಿಸ್ಟೆಂಟ್ ಗವರ್ನರ್ ಅಮಿತ್ ಅರವಿಂದ್ ಅಭ್ಯಾಗತರಾಗಿದ್ದರು. ಡಾ. ಸುದರ್ಶನ್ ಭಟ್, ನಿರ್ವಹಿಸಿದ ಕಾರ್ಯಕ್ರಮದ ವೇದಿಕೆಯಲ್ಲಿ ವಲಯ ಫೆಸಿಲಿಟೇಟರ್, ವಲಯ ಸೇನಾನಿಗಳು ಹಾಗೂ ಸಂಯೋಜಕರು ಉಪಸ್ಥಿತರಿದ್ದರು.ನಂತರ ನಡೆದ ಜಾನಪದ ಗೀತೆ, ಸಿನಿಗೀತೆ, ಯುಗಳ ಗೀತೆ, ಏಕವ್ಯಕ್ತಿ ನೃತ್ಯ, ಸಮೂಹ ಗಾಯನ, ಸಮೂಹ ನೃತ್ಯ, ಏಕ ಪಾತ್ರಾಭಿನಯ, ಕಿರುನಾಟಕ ಸ್ಪರ್ಧೆಗಳಲ್ಲಿ ರೋಟರಿ ಉಡುಪಿಯು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಐಸಿರಿ ಪರ್ಕಳ ಕ್ಲಬ್ ದ್ವಿತೀಯ ಸ್ಥಾನ, ರೋಟರಿ ಮಣಿಪಾಲ ತಂಡವು ಮೂರನೆಯ ಸ್ಥಾನಕ್ಕೆ ಭಾಜನವಾಯಿತು. ವಲಯದ ಎಲ್ಲ ಎಂಟು ಕ್ಲಬ್‌ಗಳು ಸ್ಪರ್ಧೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದವು.ಸಂಜೆ ನಡೆದ ಕಲಾ ಮಂಜೂಶದ ಸಮಾರೋಪ ಸಮಾರಂಭದಲ್ಲಿ ರೋಟರಿ ಜಿಲ್ಲಾ ಮಾಜಿ ಗವರ್ನರ್ ಡಾ. ಜಯಗೌರಿ ಅಭಿನಂದನಾ ಭಾಷಣ ಮಾಡಿದರು. ರೋಟರಿ ಜಿಲ್ಲಾ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ವಿನಯ್ ಹಾಗೂ ಉಪಾಧ್ಯಕ್ಷ ಸುರೇಂದ್ರ ನಾಯಕ್ ವಿಜೇತರಿಗೆ ಬಹುಮಾನ ವಿತರಿಸಿದರು.

ಸಹಾಯಕ ಗವರ್ನರ್ ಅಮಿತ್ ಅರವಿಂದ್ ಸಮಾರೋಪ ಭಾಷಣಗೈದರು. ಆತಿಥೇಯ ರೋಟರಿ ಕ್ಲಬ್ ಉಡುಪಿಯ ಕಾರ್ಯದರ್ಶಿ ಅಶೋಕ್ ಕೋಟ್ಯಾನ್ ವಂದಿಸಿದರು. ರಾಘವೇಂದ್ರ ಕುತ್ತೆತ್ತೂರು ಕಾರ್ಯಕ್ರಮ ನಿರ್ವಹಿಸಿದರು. ಅಧ್ಯಕ್ಷರಾದ ವೈ. ಸೂರಜ್ ಕುಮಾರ್ ಅಧ್ಯಕ್ಷತೆ ವಹಿಸಿದ್ದು, ಸಂಘಟನಾ ಸಮಿತಿಯ ಸಭಾಪತಿಗಳಾದ ಡಾ. ಸುರೇಶ್ ಶೆಣೈ ಉಪಸ್ಥಿತರಿದ್ದರು.

PREV

Recommended Stories

ಪರಪ್ಪನ ಅಗ್ರಹಾರ ಜೈಲಿಗೆ ಅಂಶು ಕುಮಾರ್‌ ಅಧೀಕ್ಷಕ
ಬಟ್ಟೆ ವ್ಯಾಪಾರ ಸೋಗಲ್ಲಿ 1 ಕೋಟಿಯ ಬುಲೆಟ್‌ ಬೈಕ್‌ ಕದ್ದ