ನಾಡಿನ ಸಂಸ್ಕೃತಿ ಇತಿಹಾಸ ನೆನಪಿಸಿದ ಕಲಾ ಸಂಗಮ

KannadaprabhaNewsNetwork | Published : Dec 27, 2024 12:48 AM

ಸಾರಾಂಶ

ಇಂದು ನಾವು ಆಧುನಿಕ ಯುಗದಲ್ಲಿ ಬದುಕುತ್ತಿದ್ದೇವೆ. ತಂತ್ರಜ್ಞಾನವು ಎಷ್ಟು ವೇಗವಾಗಿ ಹೋಗುತ್ತದೆಯೋ ಅಷ್ಟು ನಮ್ಮ ಮಾನವನ ದೇಹದ ಮೇಲೆ ಅಡ್ಡ ಪರಿಣಾಮ ಬೀರುವುದು ಸಾಮಾನ್ಯ

ಗದಗ: ನಾಡಿನ ಇತಿಹಾಸದ ಪುಟ ತೆರೆದು ನೋಡಿದಾಗ ಇಲ್ಲಿ ಕಲೆ,ಸಂಗೀತ, ಸಾಹಿತ್ಯ, ನೃತ್ಯ, ನಾಟಕ ಇನ್ನು ಮುಂತಾದ ಕಲೆಯ ಜತೆಗೆ ವಿಶೇಷವಾದ ಮೂಲ ನಾಡಿನ ಸಂಸ್ಕೃತಿ ಅದು ಜನಪದ ಸಂಸ್ಕೃತಿ. ಅದು ಜನರ ಬಾಯಿಂದ ಬಾಯಿಗೆ ಬಂದದ್ದಾಗಿದೆ ಎಂದು ಹುಯಿಲಗೋಳ ಗ್ರಾಪಂ ಅಧ್ಯಕ್ಷ ಟಿಪ್ಪು ಸುಲ್ತಾನ ನದಾಫ ಹೇಳಿದರು.

ಅವರು ಗದಗ ತಾಲೂಕಿನ ಹುಯಿಲಗೋಳ ಗ್ರಾಮದಲ್ಲಿ ಜೇನುಗೂಡು ಜಾನಪದ ಕಲಾತಂಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರ ಸಹಯೋಗದೊಂದಿಗೆ ನಡೆದ ಕಲಾ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಿವೃತ್ತ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಡಾ. ಸುರೇಶ ಕುಂಬಾರ ಮಾತನಾಡಿ, ಇಂದು ನಾವು ಆಧುನಿಕ ಯುಗದಲ್ಲಿ ಬದುಕುತ್ತಿದ್ದೇವೆ. ತಂತ್ರಜ್ಞಾನವು ಎಷ್ಟು ವೇಗವಾಗಿ ಹೋಗುತ್ತದೆಯೋ ಅಷ್ಟು ನಮ್ಮ ಮಾನವನ ದೇಹದ ಮೇಲೆ ಅಡ್ಡ ಪರಿಣಾಮ ಬೀರುವುದು ಸಾಮಾನ್ಯ. ಅದರಂತೆ ನಾವು ಮೂಲ ದೇಶಿಯ ಆಹಾರ ಪದ್ಧತಿ, ದೇಶೀಯ ಸಂಸ್ಕೃತಿ ನಾವೆಲ್ಲ ಉಳಿಸಿ ಬೆಳೆಸಬೇಕಿದೆ ಎಂದರು.

ಗ್ರಾಪಂ ಸದಸ್ಯ ರಮೇಶ ಬೆಳಗಟ್ಟಿ, ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯ ಕಿರೇಸೂರ ಮುಂತಾದವರು ಮಾತನಾಡಿದರು.

ಗೊಜನೂರ ಗ್ರಾಪಂ ಅಧ್ಯಕ್ಷ ಮಂಜುನಾಥ ಚಲವಾದಿ, ಹುಯಿಲಗೋಳ ಗ್ರಾಪಂ ಸದಸ್ಯ ಪಂಚಾಕ್ಷರಯ್ಯ ಹಿರೇಮಠ, ಮಿಲಿಂದ ಕಾಳೆ, ಚನ್ನಬಸಪ್ಪ ಹೂಗಾರ, ಮಹೇಶಗೌಡ ಪಾಟೀಲ, ಮಾಜಿ ಸದಸ್ಯ ಶೇಖಪ್ಪ ಹಂಚನಾಳ, ಶಿವಾನಂದ ಹಂಚನಾಳ, ರಾಮಜೀ ಹಂಚನಾಳ, ಸಂಗಪ್ಪ ಮಾರನಬಸರಿ, ಡಾ. ಹಡಪದ, ನೇಸರಕುಮಾರ ಬೆಳಗಟ್ಟಿ, ಸಿದ್ದಪ್ಪ ಗಂಗಪ್ಪನವರ, ರಮೇಶ ಪುರದ, ದೇವಪ್ಪ ಮಾದರ, ಮಂಜುಳಾ ಕಲಕೇರಿ, ಲಕ್ಷ್ಮೀ ಚಲವಾದಿ, ರೇಣುಕಾ ಗುಡಿಮನಿ, ಅಶೋಕ ಕಡಿಯವರ, ಹನಮಂತ ಈರಣ್ಣವರ, ಮಾರುತಿ ಕಡಿಯವರ, ವಿಜಯ ಗಡಗಿ, ಪ್ರಭು ಬಡಿಗೇರ, ಸುರೇಶ ಬನ್ನಿಕೊಪ್ಪ, ರಾಘವೇಂದ್ರ ಮೀಸಣ್ಣವರ, ನಿಂಗರಾಜ ಹುಣಶೀಮರದ ಮುಂತಾದವರು ಪಾಲ್ಗೊಂಡಿದ್ದರು.

ಜೇನುಗೂಡು ಕಲಾ ತಂಡದ ಅಧ್ಯಕ್ಷ ಬಸವರಾಜ ಈರಣ್ಣವರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ನಂತರ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶ್ರೀನಿವಾಸ ಸುಬ್ಬಣ್ಣವರ ನಿರೂಪಿಸಿದರು. ಮಾರುತಿ ಕಾಳೆ ವಂದಿಸಿದರು.

Share this article