ಕಲ್ಬುರ್ಗಿ ಲೋಕತಂತ್ರ ಬಚಾವ್, ಅರಾಜಕತೆ ಹಠಾವ್‌ ಅಭಿಯಾನ

KannadaprabhaNewsNetwork |  
Published : Nov 23, 2026, 01:15 AM IST
ಪೋಟೋ: ೨೨-೧೧ ಸಿಟಿಪಿಅರ್ ೧ಚಿತ್ತಾಪುರ ತಾಲೂಕಿನ ಇಂಗನಕಲ್ಲ್ ಗ್ರಾಮದಲ್ಲಿ ಭಾರತೀಯ ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸ್ಮನಿ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರ ೪೮ನೇ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶಾಲಾ ಮಕ್ಕಳಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ನೊಟ್‌ಬುಕ್, ಪೆನ್ನು, ಕಂಪಾಸ್ ಪುಸ್ತಕ ವಿತರಿಸಿದರು. | Kannada Prabha

ಸಾರಾಂಶ

ಸ್‌ಐಆರ್‌ ಪ್ರಕ್ರಿಯೆ ಕುರಿತು ಕಾಂಗ್ರೆಸ್ ನಡೆಸುತ್ತಿರುವ ಅಪಪ್ರಚಾರಕ್ಕೆ ತಿರುಗೇಟು ನೀಡಲು ಬಿಜೆಪಿ ಹಮ್ಮಿಕೊಂಡಿರುವ ಲೋಕತಂತ್ರ ಬಚಾವ್, ಅರಾಜಕತೆ ಹಠಾವೋ ಅಭಿಯಾನದ ಅಂಗವಾಗಿ ನ.25ರಂದು ನಗರದಲ್ಲಿ ಬೃಹತ್ ಪಾದಯಾತ್ರೆ ನಡೆಯಲಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಲ್ಗೊಳ್ಳಲಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಎಸ್‌ಐಆರ್‌ ಪ್ರಕ್ರಿಯೆ ಕುರಿತು ಕಾಂಗ್ರೆಸ್ ನಡೆಸುತ್ತಿರುವ ಅಪಪ್ರಚಾರಕ್ಕೆ ತಿರುಗೇಟು ನೀಡಲು ಬಿಜೆಪಿ ಹಮ್ಮಿಕೊಂಡಿರುವ ಲೋಕತಂತ್ರ ಬಚಾವ್, ಅರಾಜಕತೆ ಹಠಾವೋ ಅಭಿಯಾನದ ಅಂಗವಾಗಿ ನ.25ರಂದು ನಗರದಲ್ಲಿ ಬೃಹತ್ ಪಾದಯಾತ್ರೆ ನಡೆಯಲಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಲ್ಗೊಳ್ಳಲಿದ್ದಾರೆ.ಎಸ್‌ಐಆರ್‌ ಪ್ರಕ್ರಿಯೆ ಕುರಿತು ಕಾಂಗ್ರೆಸ್ ನಡೆಸುತ್ತಿರುವ ಅಪಪ್ರಚಾರಕ್ಕೆ ತಿರುಗೇಟು ನೀಡಲು ಬಿಜೆಪಿ ಹಮ್ಮಿಕೊಂಡಿರುವ ಲೋಕತಂತ್ರ ಬಚಾವ್, ಅರಾಜಕತೆ ಹಠಾವೋ ಅಭಿಯಾನದ ಅಂಗವಾಗಿ ನ.25ರಂದು ನಗರದಲ್ಲಿ ಬೃಹತ್ ಪಾದಯಾತ್ರೆ ನಡೆಯಲಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಲ್ಗೊಳ್ಳಲಿದ್ದಾರೆ.ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಕಲಬುರಗಿ ವಿಭಾಗೀಯ ಉಸ್ತುವಾರಿ ಅರುಣ್ ಶಹಾಪುರ ಹಾಗೂ ರಾಜ್ಯ ಉಪಾಧ್ಯಕ್ಷ ರಾಜೂಗೌಡ ಮಾಹಿತಿ ನೀಡಿದರು. ತಮ್ಮ ತವರೂರಿನಲ್ಲಿ ಎಸ್‌ಐಆರ್‌ಗೆ ವಿರೋಧೀಸಿದ್ದ ಖರ್ಗೆ, ಕಾಂಗ್ರೆಸ್‌ಗೆ ಠಕ್ಕರ್‌ ನೀಡಲು ಆಯೋಜಿಸಿರುವ ಲೋಕತಂತ್ರ ಬಚಾವ್, ಅರಾಜಕತೆ ಹಠಾವೋ ಅಭಿಯಾನದಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಪಾಲ್ಗೊಳ್ಳುತ್ತಿರುವುದು ರಾಜಕೀಯವಾಗಿ ಗಮನ ಸೆಳೆದಿದೆ. ಮಧ್ಯಾಹ್ನ 3 ಗಂಟೆಗೆ ನಗರೇಶ್ವರ ಶಾಲೆ ಬಳಿಯಿಂದ ಪಾದಯಾತ್ರೆ ಆರಂಭವಾಗಲಿದೆ. ವಿವಿಧ ಮಾರ್ಗಗಳ ಮೂಲಕ ಸಾಗುವ ಮೆರವಣಿಗೆ ಜಗತ್ ವೃತ್ತ ತಲುಪಲಿದ್ದು, ಬಳಿಕ ಅಲ್ಲಿಯೇ ಬಹಿರಂಗ ಸಭೆ ನಡೆಯಲಿದೆ. ಜಿಲ್ಲೆಯಾದ್ಯಂತದಿಂದ ಸುಮಾರು 15 ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.*ಜನರಲ್ಲಿ ಅರಿವು ಮೂಡಿಸುವ ಉದ್ದೇಶ: ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ. SIRನ ಕಾರ್ಯವಿಧಾನ ಹಾಗೂ ಅದರ ಅಗತ್ಯತೆಯ ಬಗ್ಗೆ ಜನರಿಗೆ ಮಾಹಿತಿ ನೀಡುವ ಮೂಲಕ ಈ ಪ್ರಕ್ರಿಯೆ ಕುರಿತು ಮೂಡಿರುವ ಗೊಂದಲ ನಿವಾರಿಸಲು ಪಕ್ಷ ಮುಂದಾಗಿದೆ ಎಂದು ಅರುಣ್ ಶಹಾಪುರ ಹೇಳಿದರು.ಎಸ್‌ಐಆರ್‌ ಮೂಲಕ ಅರ್ಹ ಮತದಾರರ ಹೆಸರುಗಳನ್ನು ಖಾತರಿಪಡಿಸುವುದರ ಜತೆಗೆ ಒಂದಕ್ಕಿಂತ ಹೆಚ್ಚು ಕಡೆ ದಾಖಲಾಗಿರುವ ಹೆಸರುಗಳು, ಅನರ್ಹ ಹಾಗೂ ಬೋಗಸ್ ನೋಂದಣಿಗಳನ್ನು ಪರಿಶೀಲಿಸಲಾಗುತ್ತದೆ. ಇಂತಹ ಪರಿಷ್ಕರಣೆ ದೇಶದಲ್ಲಿ ಹಿಂದೆ ನಡೆದಿದ್ದು, ಪ್ರಸಕ್ತ ಕ್ರಮವನ್ನೂ ಅದೇ ಹಿನ್ನೆಲೆಯಲ್ಲಿ ನೋಡಬೇಕು ಎಂದು ಅವರು ಹೇಳಿದರು.ಕಲಬುರಗಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ರಾಜನಾಥ್ ಸಿಂಗ್ ಆಗಮಿಸುತ್ತಿರುವುದು ವಿಶೇಷ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಉಸ್ತುವಾರಿ ಹಾಗೂ ಸಹ ಉಸ್ತುವಾರಿ ನಾಯಕರು, ಮಾಜಿ ಸಚಿವರು ಸೇರಿದಂತೆ ಪಕ್ಷದ ಹಲವು ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ ಜನತೆ ಹಾಗೂ ಮಾಧ್ಯಮ ಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕು ಎಂದು ಅರುಣ್ ಶಹಾಪುರ ಮನವಿ ಮಾಡಿದರು.*ಇವಿಎಂ ಕುರಿತು ರಾಜೂಗೌಡ ವಾಗ್ದಾಳಿ: ಇವಿಎಂ ಕುರಿತು ಕಾಂಗ್ರೆಸ್ ನಿರಂತರವಾಗಿ ಅನುಮಾನ ವ್ಯಕ್ತಪಡಿಸುತ್ತಿರುವುದನ್ನು ರಾಜೂಗೌಡ ಪ್ರಶ್ನಿಸಿದರು. ಕರ್ನಾಟಕದಲ್ಲಿ ಇದೇ ಚುನಾವಣಾ ವ್ಯವಸ್ಥೆಯ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದನ್ನು ಅವರು ಉಲ್ಲೇಖಿಸಿ, ಚುನಾವಣಾ ಫಲಿತಾಂಶದ ಸಂದರ್ಭದಲ್ಲಿ ಮಾತ್ರ ಇವಿಎಂ ಬಗ್ಗೆ ಪ್ರಶ್ನೆ ಎತ್ತುವುದು ಸರಿಯಲ್ಲ ಎಂದರು.ಇವಿಎಂ ಮೇಲೆ ನಂಬಿಕೆ ಇಲ್ಲದಿದ್ದರೆ ಅಧಿಕಾರಕ್ಕೆ ಬಂದವರು ರಾಜೀನಾಮೆ ನೀಡಿ ಮತ್ತೊಮ್ಮೆ ಚುನಾವಣೆ ಎದುರಿಸಲಿ. ಜನರ ತೀರ್ಪನ್ನು ಒಪ್ಪಿಕೊಳ್ಳುವ ಮನೋಭಾವ ರಾಜಕೀಯ ಪಕ್ಷಗಳಲ್ಲಿರಬೇಕು ಎಂದು ಹೇಳಿದರು.ಕಲಬುರಗಿ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ವೇಳೆ ಒಂದೇ ವ್ಯಕ್ತಿಯ ಹೆಸರು ಬೇರೆ ಬೇರೆ ಕ್ಷೇತ್ರಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಪರಿಶೀಲಿಸಲಾಗಿದೆ. ಜೇವರ್ಗಿ, ಆಳಂದ, ಅಫಜಲಪುರ ಸೇರಿದಂತೆ ಕೆಲವೆಡೆ ಇಂತಹ ಹೆಸರುಗಳನ್ನು ನಿಯಮಾನುಸಾರ ಸರಿಪಡಿಸಲಾಗಿದೆ. ವೈಯಕ್ತಿಕವಾಗಿ ಬೇರೆಡೆ ಮತದಾರರಾಗಿರುವವರು ಒಂದು ಕ್ಷೇತ್ರದಲ್ಲಿ ಮಾತ್ರ ಹೆಸರು ಉಳಿಸಿಕೊಳ್ಳುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜೂಗೌಡ ವಿವರಿಸಿದರು.ಶಾಸಕ ಬಸವರಾಜ ಮತ್ತಿಮಡು, ಡಾ. ಬಿ.ಜಿ. ಪಾಟೀಲ್, ನಗರ ಅಧ್ಯಕ್ಷ ಚಂದು ಪಾಟೀಲ್, ಅಶೋಕ್ ಬಗಲಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರು, ರಾಜಕುಮಾರ್ ಪಾಟೀಲ್ ತೇಲ್ಕೂರ್, ದತ್ತಾತ್ರೇಯ ಪಾಟೀಲ್ ರೇವೂರ, ಅಮರನಾಥ್ ಪಾಟೀಲ್, ಶರಣಪ್ಪ ತಳವಾರ, ಶಿವರಾಜ್ ಪಾಟೀಲ್ ರದ್ದೇವಾಡಗಿ, ಶೋಭಾ ಬಾಣಿ ಹಾಗೂ ಮಹದೇವ ಬೆಳಮಗಿ ಉಪಸ್ಥಿತರಿದ್ದರು.ಎಸ್‌ಐಆರ್‌ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಪ್ರಕ್ರಿಯೆಯಲ್ಲ. ಅರ್ಹ ಮತದಾರರನ್ನು ಉಳಿಸಿ, ಅನರ್ಹ ಹಾಗೂ ಬೋಗಸ್ ಹೆಸರುಗಳನ್ನು ಗುರುತಿಸುವುದು ಇದರ ಉದ್ದೇಶ. ಪ್ರಕ್ರಿಯೆ ಕುರಿತು ಜನರಲ್ಲಿ ಮೂಡಿರುವ ಗೊಂದಲ ನಿವಾರಿಸಿ ವಾಸ್ತವಾಂಶ ತಿಳಿಸುವುದಕ್ಕಾಗಿ ಲೋಕತಂತ್ರ ಬಚಾವ್, ಅರಾಜಕತೆ ಹಠಾವೋ ಅಭಿಯಾನ ನಡೆಸಲಾಗುತ್ತಿದೆ ಎಂದು ಬಿಜೆಪಿ ಕಲಬುರಗಿ ವಿಭಾಗೀಯ ಉಸ್ತುವಾರಿ ಅರುಣ್ ಶಹಾಪುರ ಹೇಳಿದರು.ಒಂದು ಸುಳ್ಳನ್ನು ನೂರು ಬಾರಿ ಹೇಳಿದರೂ ಸತ್ಯವಾಗುವುದಿಲ್ಲ. ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸುವವರು ಇದೇ ವ್ಯವಸ್ಥೆಯ ಮೂಲಕ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ನಂಬಿಕೆ ಇಲ್ಲದಿದ್ದರೆ ರಾಜೀನಾಮೆ ನೀಡಿ ಮತ್ತೆ ಜನರ ಬಳಿಗೆ ಹೋಗಲಿ. ಚುನಾವಣಾ ವ್ಯವಸ್ಥೆಯ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುವುದು ನಮ್ಮ ಜವಾಬ್ದಾರಿ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ- ರಾಜೂಗೌಡ, ---ಫೋಟೊ-----

ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹಾಗೂ ಎಐಸಿಸಿ ಅಧ್ಯಕ್ಷ ಖರ್ಗೆ ಭಾವಚಿತ್ರ ಬಳಸಲು ಕೋರಿಕೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿ ಬೋರ್‌ವೆಲ್‌ ನೀರು ಬಿಕರಿ: ಚಿಕ್ಕಣ್ಣ
ಹೆಚ್ಚುವರಿ ಹಣ ಪಾವತಿಗೆ ಸೆಸ್ಕಾಂ ನೋಟಿಸ್‌