ಕಲಘಟಗಿ ಪಟ್ಟಣ ಪಂಚಾಯಿತಿ ಬಿಜೆಪಿ ತೆಕ್ಕೆಗೆ

KannadaprabhaNewsNetwork |  
Published : Aug 31, 2024, 01:43 AM IST
4564 | Kannada Prabha

ಸಾರಾಂಶ

ಅಧ್ಯಕ್ಷ ಸ್ಥಾನ ಬಯಸಿ ಜೆಡಿಎಸ್‌ನ ಶಕುಂತಲಾ ಬೋಳಾರ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ಸಿನ ವೃಷಬೇಂದ್ರ ಪಟ್ಟಣಶೆಟ್ಟಿ ಸ್ಪರ್ಧಿಸಿದ್ದರು. ಬಿಜೆಪಿ ಬೆಂಬಲಿತರ ಪರ 11 ಮತ ಹಾಗೂ ಜೆಡಿಎಸ್ ಮತ್ತು ಕಾಂಗ್ರೆಸ್ ಪರ ಐದು ಮತಗಳು ಬಿದ್ದವು.

ಕಲಘಟಗಿ:

ಕಳೆದ ಒಂದೂವರೆ ವರ್ಷದಿಂದ ಖಾಲಿ ಇದ್ದ ಕಲಘಟಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಆಯ್ಕೆಗೆ ಶುಕ್ರವಾರ ಚುನಾವಣೆ ನಡೆದಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷರಾಗಿ ಶಿಲ್ಪಾ ಪಾಲ್ಕರ, ಉಪಾಧ್ಯಕ್ಷರಾಗಿ ಗಂಗಾಧರ ತಿಪ್ಪಣ್ಣಗೌಳಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಬಯಸಿ ಜೆಡಿಎಸ್‌ನ ಶಕುಂತಲಾ ಬೋಳಾರ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ಸಿನ ವೃಷಬೇಂದ್ರ ಪಟ್ಟಣಶೆಟ್ಟಿ ಸ್ಪರ್ಧಿಸಿದ್ದರು. ಬಿಜೆಪಿ ಬೆಂಬಲಿತರ ಪರ 11 ಮತ ಹಾಗೂ ಜೆಡಿಎಸ್ ಮತ್ತು ಕಾಂಗ್ರೆಸ್ ಪರ ಐದು ಮತಗಳು ಬಿದ್ದವು. ಅತೀ ಹೆಚ್ಚು ಮತ ಪಡೆದ ಬಿಜೆಪಿಯ ಶಿಲ್ಪಾ ಹಾಗೂ ಗಂಗಾಧರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದರು. ತಹಸೀಲ್ದಾರ್ ವೀರೇಶ ಮುಳುಗುಂದಮಠ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ವಿಜಯೋತ್ಸವ:

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಚುನಾವಣೆಯಲ್ಲಿ ಆಯ್ಕೆ ಆಗುತ್ತಿದಂತೆ ನಾಯಕರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಹೂಮಾಲೆ ಹಾಕಿ ಅಭಿನಂದಿಸಿದರು.

ಈ ವೇಳೆ ಮಾಜಿ ಎಂಎಲ್‌ಸಿ ನಾಗರಾಜ ಛಬ್ಬಿ, ಜಿಲ್ಲಾ ಬಿಜೆಪಿ ಗ್ರಾಮೀಣ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ತಾಲೂಕಾಧ್ಯಕ್ಷ ಬಸವರಾಜ ಶೆರೆವಾಡ, ಮುಖಂಡರಾದ ಶಶಿಧರ ನಿಂಬಣ್ಣವರ, ಐ.ಸಿ. ಗೋಕುಲ, ಫಕ್ಕೀರೇಶ ನೇಸರೇಕರ, ಅಣ್ಣಪ್ಪ ಓಲೇಕಾರ, ಮಹಾಂತೇಶ ತಹಸೀಲ್ದಾರ್, ಸದಾನಂದ ಚಿಂತಾಮಣಿ, ಮದನ ಪಾಟೀಲ, ಬಸವರಾಜ ಹೊನ್ನಳ್ಳಿ, ಸುರೇಶ ಶೀಲವಂತರ, ಬಸವರಾಜ ಮಾದರ, ಶ್ರೀಧರ ದ್ಯಾವಪ್ಪನವರ, ಪ್ರಮೋದ ಪಾಲ್ಕರ, ಪರಶುರಾಮ ಹುಲಿಹೊಂಡ, ಚಂದ್ರಗೌಡ ಪಾಟೀಲ, ಪುಂಡಲೀಕ ಜಾಧವ, ವಿನಾಯಕ ಗೌಳಿ, ಗಣೇಶ ವಾಲಿಕಾರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!