ಗದಗ: ನಗರದ ಶ್ರೀ ಕಾಳಿದಾಸ ಶಿಕ್ಷಣ ಸಮಿತಿಯ 25ನೇ ವರ್ಷಾಚರಣೆಯ ಅಂಗವಾಗಿ 25 ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಸ್ವಾಗತಾರ್ಹ. ವರ್ಷಪೂರ್ತಿಯ ಕಾರ್ಯಕ್ರಮಗಳಿಗೆ ಜೂ. 7ರಂದು ಕೊಪ್ಪಳದ ಗವಿಸಿದ್ಧೇಶ್ವರ ಶ್ರೀಗಳು ಚಾಲನೆ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣಗೌಡ್ರ ಪಾಟೀಲ ಹೇಳಿದರು.
ಆರ್.ಡಿ. ಕಡ್ಲಿಕೊಪ್ಪ ಮಾತನಾಡಿ, ಪರಿಸರ ದಿನಾಚರಣೆ ಅಂಗವಾಗಿ ಈ ಪ್ರದೇಶದ ಮನೆಮನೆಗಳಿಗೆ ಸಸಿಗಳನ್ನು ನೀಡಿ ಅವುಗಳನ್ನು ರಕ್ಷಣೆ ಮಾಡುವಂತೆ ಮನವಿ ಮಾಡಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕೀರಪ್ಪ ಹೆಬಸೂರ ಮಾತನಾಡಿ, ರಜತ ಮಹೋತ್ಸವದ ಅಂಗವಾಗಿ ಆರೋಗ್ಯಶಿಬಿರ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಪರಿಸರ ದಿನಾಚರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಈ ವೇಳೆ ಎಸ್.ಕೆ. ಮ್ಯಾಗೇರಿ, ಬಿ.ಬಿ. ಬಾವಿಕಟ್ಟಿ, ಯಲ್ಲಪ್ಪ ಗುರಿಕಾರ, ಶಶಿಧರ ರೊಳ್ಳಿ, ನಾಗಪ್ಪ ಗುಗ್ಗರಿ, ಆರ್.ಎಂ. ನಿಂಬನಾಯ್ಕರ, ಎಸ್.ಡಿ. ಸಿಂಗಟಾಲಕೇರಿ, ಎಸ್.ಎಸ್. ಮುದಿಯಜ್ಜನವರ, ಆರ್.ಎಸ್. ಕುರಿಯವರ, ಮೋಹನ ಇಮರಾಪುರ, ಹನುಮಂತಪ್ಪ ಗೊಜನೂರ, ಎಚ್.ಬಿ. ಪೋತಿ, ಬಿ.ಎಚ್. ಹ್ಯಾಟಿ, ಎಸ್.ಎಸ್. ಕರಡಿ, ಡಿ.ವೈ. ವಡಗೇರಿ, ಎ.ಬಿ. ಹುಗ್ಗೆಣ್ಣವರ, ವಿ.ಸಿ. ಚವಡಿಶೆಟ್ರ ಇದ್ದರು. ವೈ.ಬಿ. ಬಾನಾಪುರ ಸ್ವಾಗತಿಸಿದರು. ನೀಲಕಂಠ ಮರಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಬಿ. ಕಂಬಳಿ ವಂದಿಸಿದರು.