958ರಿಂದ 1990ರ ದಶಕದವರೆಗೂ ಯಕ್ಷಗಾನದ ನವಯುಗ ಪ್ರಾರಂಭಿಸಿದ ಯಕ್ಷಗಾನ ರಸಿಕರ ಮನೆಮಾತಾದ ವ್ಯಕ್ತಿ ಕೀರ್ತಿಶೇಷ ಕಾಳಿಂಗ ನಾವುಡರು, ಇವರು ಬದುಕಿದ್ದು ಕೆಲವೇ ವರುಷಗಳು, ಮಾಡಿದ್ದು ಹಲವು ಸಾಧನೆ. ಹೇಳಲು ಅಸಾಧ್ಯವಾದ ಯುಗಪ್ರವರ್ತಕರ ಸಾಧನೆ. ಹಲವಾರು ರಾಗಗಳನ್ನು ಯಕ್ಷಗಾನಕ್ಕೆ ಮೊದಲು ಅಳವಡಿಸಿ ತನ್ನ ಸ್ಥಿರವಾದ ಕಂಚಿನ ಕಂಠದಿಂದ ಎಲ್ಲರ ಮನಸೂರೆಗೊಂಡು ಇಂದು ಎಲ್ಲ ಯಕ್ಷಗಾನ ಕಲಾವಿದರ ಆದರ್ಶವ್ಯಕ್ತಿಯಾಗಿ ಶಕ್ತಿಯಾಗಿ ಬೆಳೆಯಲು ಸಹಕಾರಿಯಾದ ಮರೆಯ ಮಹಾಚೇತನನಲ್ಲಿ ಲೀನವಾದ ಕಾಳಿಂಗ ಎಂಬ ನಾವುಡರ ದೇಹ.
1958ರಿಂದ 1990ರ ದಶಕದವರೆಗೂ ಯಕ್ಷಗಾನದ ನವಯುಗ ಪ್ರಾರಂಭಿಸಿದ ಯಕ್ಷಗಾನ ರಸಿಕರ ಮನೆಮಾತಾದ ವ್ಯಕ್ತಿ ಕೀರ್ತಿಶೇಷ ಕಾಳಿಂಗ ನಾವುಡರು, ಇವರು ಬದುಕಿದ್ದು ಕೆಲವೇ ವರುಷಗಳು, ಮಾಡಿದ್ದು ಹಲವು ಸಾಧನೆ. ಹೇಳಲು ಅಸಾಧ್ಯವಾದ ಯುಗಪ್ರವರ್ತಕರ ಸಾಧನೆ. ಹಲವಾರು ರಾಗಗಳನ್ನು ಯಕ್ಷಗಾನಕ್ಕೆ ಮೊದಲು ಅಳವಡಿಸಿ ತನ್ನ ಸ್ಥಿರವಾದ ಕಂಚಿನ ಕಂಠದಿಂದ ಎಲ್ಲರ ಮನಸೂರೆಗೊಂಡು ಇಂದು ಎಲ್ಲ ಯಕ್ಷಗಾನ ಕಲಾವಿದರ ಆದರ್ಶವ್ಯಕ್ತಿಯಾಗಿ ಶಕ್ತಿಯಾಗಿ ಬೆಳೆಯಲು ಸಹಕಾರಿಯಾದ ಮರೆಯ ಮಹಾಚೇತನನಲ್ಲಿ ಲೀನವಾದ ಕಾಳಿಂಗ ಎಂಬ ನಾವುಡರ ದೇಹ. ಆ ಹೆಸರು ಗಗನದೆತ್ತರಕ್ಕೂ ಬೆಳೆಸಿ ಇಂದು ಯಾವ ಯಕ್ಷಗಾನ ಪಾತ್ರಧಾರಿ ಹಾಗೂ ಹಿಮ್ಮೇಳದವರಲ್ಲಿ ಕೇಳಿದರೆ ನಿಮಗೆ ಯಕ್ಷಗಾನಕ್ಕೆ ಬರಲು ಪ್ರೇರಕ ಶಕ್ತಿ ಯಾರು? ಎಂದು ಪ್ರಶ್ನೆ ಮಾಡಿದರೆ ಯಕ್ಷಗಾನ ದೇವರೆಂದೇ ಪ್ರಸಿದ್ಧಿ ಪಡೆದ ಕಾಳಿಂಗ ನಾವುಡರು ಎಂದು ಹೇಳುವ ವಾಸ್ತವ ಸತ್ಯವಾಗಿದೆ.
ಕಾಳಿಂಗಎಂಬ ಶಬ್ದ ಕೇಳಿದರೇ ಮೈಯೆಲ್ಲಾ ರೋಮಾಂಚನ, ಇವರು ರಂಗದಲ್ಲಿ ಆಳವಡಿಸಿದ ರಂಗ ನಿರ್ದೇಶನ, ರಂಗದ ನಡೆ ಈಗಿನ ಭಾಗವತರು ಅನುಸರಿಸಿಕೊಂಡು ಹೋಗುತ್ತಾರೆ. ಕಾಳಿಂಗ ನಾವುಡರು ಯಕ್ಷಗಾನದಲ್ಲಿ ಪಾತ್ರಧಾರಿಗಳನ್ನು ಮಾತಾಡಿಸುದೇ ಒಂದು ವಿಶೇಷ, ಶನೀಶ್ವರ ಮಹಾತ್ಮೆಯ ನಂದಿ ಶೆಟ್ಟಿಯಾಗಿ ಬೆಳಿಯೂರು ಕೃಷ್ಣಮೂರ್ತಿ ಮಾಡುತ್ತಿದ್ದರು, ಚಲುವೆ ಚಿತ್ರಾವತಿಯ ಅಜ್ಜಿಯಾಗಿ ಕಿನ್ನಿಗೋಳಿ ಮುಖ್ಯಪ್ರಾಣರು ಮಾಡುತ್ತಿದ್ದರು, ಗದಾಯುದ್ಧ ಪ್ರಸಂಗದ ಬೇಹಿನಚರನಾಗಿ ಕುಂಜಾಲು ರಾಮಕೃಷ್ಣರು ಪಾತ್ರ ನಿರ್ವಹಿಸುತ್ತಿದ್ದರು, ನಾಗಶ್ರಿಯ ಅಂಬಿಗ ಕೈರವನಾಗಲಿ ಕಿನ್ನಿಗೋಳಿ, ಮುಂತಾದ ಪ್ರಸಂಗದ ಹಾಸ್ಯಗಾರರನ್ನು ಮಾತಾಡಿಸುದೇ ಒಂದು ತಮಾಷೆ ಹಾಗೂ ಗಂಭೀರತೆಯ ಧ್ವನಿ ನಾವುಡರಿಗೆ ಇತ್ತು. ಅವರು ಹಾಡುವ ಸ್ವರವು ಇಂಪಾಗಿ ಕೇಳಿದರೂ, ಮಾತಾಡಿಸುವಾಗ ಆ ಗಂಭೀರ ಸ್ವರದ ನಾವುಡರು ವಿಶೇಷತೆಯನ್ನು ಕಾಳಿಂಗ ನಾವುಡರಲ್ಲಿ ನಾವು ಗಮನಿಸಬಹುದು. ನೀಲ ಗಗನದೊಳು ಮೇಘಗಳ ಕಂಡಾಗಲೇ ನಲಿಯುತ ನವಿಲು ಕುಣಿಯುತ್ತಿದೆ ನೋಡ... ಎಂಬ ಪದವಾಗಲಿ, ಎಲ್ಲೆಲ್ಲೂ ಸೊಬಗಿದೆ ಎಲ್ಲೆಲ್ಲೂ ಸೊಗಸಿದೆ ಮಾಮರವು ಪೂತಿದೆ ಸೊಬಗೇರಿ ನಿಂತಿದೆ..., ಇಂತು ಷಡುರಥರು ಹಿಮ್ಮೇಟ್ಟುತಿರಲಾಗ ದ್ರೋಣ|ನಂತರಂಗದಿ ರವಿಜಗೆಂದ... , ಅಂಗನಾಮಣಿ ನಿಲ್ಲು ನಿಲ್ಲೆಲೆ ಮನದಿಂಗಿತವ ಅರುಹೆ ಕೇಳಲೇ ಧರಣಿ ಮಂಡಲ ಮಧ್ಯದೊಳಗೆ...., ಮುಂತಾದ ಕಾಳಿಂಗ ನಾವುಡರ ಹಾಡು ಇಂದಿಗೂ ಕಿವಿಯಲ್ಲಿ ಗುನುಗುತ್ತಿರುವುದು ನಮ್ಮ ಸೌಭಾಗ್ಯ. ಆಡು ಮುಟ್ಟದ ಸೊಪ್ಪಿಲ್ಲ ನಾವುಡರು ಹಾಡಿದ ರಾಗಗಳಿಲ್ಲ ಎಂಬ ಮಾತು ನೂರಕ್ಕೆ ನೂರು ಸತ್ಯವಾಗಿದೆ. ಅಭೇರಿ, ಹಂಸಧ್ವನಿ, ರೇವತಿ, ಕಲಾವತಿ, ಚಾಂದ್, ಬಿಹಾಗ್, ಸಾವೇರಿ, ಮುಂತಾದ ಹೊಸ ರಾಗಗಳ ಸಂಶೋಧನೆ ಮಾಡಿ ಯಕ್ಷಗಾನಕ್ಕೆ ಮೊದಲಬಾರಿ ಪ್ರಯೋಗಿಸಿ ಯಶಸ್ಸು ಕಂಡ ಮಹನೀಯ ಕಾಳಿಂಗ ನಾವುಡರು. ಇಂದಿನ ಹೆಚ್ಚಿನ ಪ್ರಸಿದ್ಧ ಭಾಗವತರು ತಮ್ಮ ಹೆಸರಿನ ಎದುರಿನಲ್ಲಿ ಅಭಿನವ ಕಾಳಿಂಗ ನಾವುಡ ಎಂಬ ಹೆಸರನ್ನು ಹಾಕುವುದು, ಮತ್ತೆ ಕಾಳಿಂಗ ನಾವುಡರ ಸ್ವರವನ್ನು ಅನುಕರಿಸುವುದು, ನಾವುಡರ ಶೈಲಿಯನ್ನು ಒಂದೆರಡು ಪದ್ಯ ಹಾಡಿ ಅವರ ಸ್ವರವನ್ನು ಅನುಕರಣೆಗೈದು ಬಹು ಬೇಗನೆ ಪ್ರಸಿದ್ಧಿ ಪಡೆಯುವುದು, ಮುಂತಾದ ಸರ್ಕಸ್ ಈಗಿನ ಪೀಳಿಗೆಯ ಭಾಗವತರು ಹೆಚ್ಚಾಗಿದ್ದಾರೆ. ಅಲ್ಲದೇ ಇಂದು ನಾವುಡರ ಅನುಕರಣೆ ಪದ ಪ್ರಸಿದ್ಧಿ ಪಡೆಯಲು ಉತ್ತಮ ದಾರಿಯಾಗಿದೆ. ನಾವುಡರನ್ನು ಇವರು ತಮ್ಮ 10 ವರ್ಷದ ಹುಡುಗನ ಒಳಗೆ ನೋಡಿರುವರೇನೋ ಅಷ್ಟೇ? ಆ ಸಣ್ಣ ಪ್ರಾಯದಲ್ಲಿ ನಾವುಡರನ್ನು ನೋಡಿ ಇಂದು ನಾವುಡರ ಅನುಕರಣೆ, ಅನುಸರಣೆ ಮಾಡಿ ಹಲವಾರು ಭಾಗವತರು ಪ್ರಸಿದ್ಧಿ ಹೊಂದಿದ್ದಾರೆ. ಹೀಗೆ ನಾವುಡರನ್ನು ಕಳೆದು 32 ವರುಷ ಸಂದಿತು. ಇಂದಿನ ಮಂಗಳೂರು ವಿಶ್ವ ವಿದ್ಯಾನಿಲಯ ಅಥವಾ ಮೈಸೂರು ವಿಶ್ವ ವಿದ್ಯಾನಿಲಯವು ನಾವುಡರ ಶೈಲಿ ಎಂದು ಹೊಸ ರಾಗಗಳ ಹುಟ್ಟಿ ಹಾಕಿದ ನಾವುಡರ ಪರಂಪರೆಯನ್ನು ಯಕ್ಷಗಾನಕ್ಕೆ ಅಂಗೀಕಾರ ತಂದರೆ ಉತ್ತಮವಾಗುವುದು ಎಂದು ನಮ್ಮ ಅಂಬೋಣ. ಆದರೂ ನಾವುಡರು ಹಾಕಿಕೊಟ್ಟ ಯಕ್ಷಗಾನದ ಚೌಕಟ್ಟು, ರಂಗದ ನಡೆ, ಪದಗಳು, ರಾಗಗಳು, ಇಂದಿಗೂ ಜೀವಂತವಾಗಿದೆ. ಹೀಗೆ 36ನೇ ವರುಷ ನಾವುಡರು ತೀರಿದರು ಇಂದು ಸಹ ಅವರ ಹಾಡುಗಳು ಜನರ ಮನಸಿನಲ್ಲಿ ಗುನುಗುಟ್ಟುತ್ತದೆ. ನಾವುಡರು ಇನ್ನು ಸಾವಿರ ವರುಷ ಯಕ್ಷಗಾನ ಕಲೆ ಇದ್ದರು ನಾವುಡರು ಎಂದಿಗೂ ಅಮರಾಗುತ್ತಾರೆ.- ಚಾರ ಪ್ರದೀಪ ಹೆಬ್ಬಾರ್, ಯಕ್ಷಗಾನ ಪ್ರಸಂಗಕರ್ತರು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.