ನಾಪೋಕ್ಲು: ಇಲ್ಲಿಗೆ ಸಮೀಪದ ಹರವನಾಡು ಗ್ರಾಮದ ಶೆಡ್ ನಲ್ಲಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ರಕ್ಷಿಸಲಾಯಿತು.
----------------------------------------
ಕೊಡವ ಕಥಾ ಸಂಕಲನ ಆಹ್ವಾನಮಡಿಕೇರಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಕೊಡವ ಕಥಾ ಸಂಕಲನವನ್ನು ಹೊರತರಲು ಉದ್ದೇಶಿಸಲಾಗಿದೆ. ಈ ಪ್ರಯುಕ್ತ ಕಥೆಗಾರರಿಂದ ಸ್ವರಚಿತ ಕಥೆಗಳನ್ನು ಆಹ್ವಾನಿಸಲಾಗಿದೆ.ಈವರೆಗೆ ಎಲ್ಲಿಯೂ ಪ್ರಕಟವಾಗಿರದ, ಸ್ವರಚಿತ ಕಥೆಗಳು ಎ4 ಅಳತೆಯ ಹಾಳೆಯಲ್ಲಿ 10 ಪುಟ ಮೀರದಂತಿರತಕ್ಕದ್ದು. ಅಂದರೆ, ಒಂದು ಬದಿಯಲ್ಲಿ 22 ಗೆರೆ ಮೀರದಂತಿದ್ದು, ಕಥೆಗಾರರು ಸ್ವತಃ ಟೈಪ್ ಮಾಡಿ ಕಳುಹಿಸಿದರೆ ಉತ್ತಮ.
ಕಥೆಗಾರರು ತಮಗೆ ಉತ್ತಮವೆಂದು ಕಂಡು ಬರುವ ಒಂದು ಕಥೆಯನ್ನು ಮಾತ್ರ ಕಳುಹಿಸುವುದು. ಕಥಾ ಸಂಕಲನದಲ್ಲಿ ಒಂದಷ್ಟು ಕಥೆಗಾರರ ಒಂದೊಂದು ಕಥೆಯನ್ನು ಮಾತ್ರ ಪ್ರಕಟಿಸುವುದು. ಒಂದಕ್ಕಿಂತ ಹೆಚ್ಚಿನ ಕಥೆಗಳನ್ನು ಕಳುಹಿಸಿದರೆ ಅಂತಹವರ ಯಾವುದೇ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ.ಆಯ್ಕೆಯಾದ ಕಥೆಗಳಿಗೆ ಅಕಾಡೆಮಿ ನಿಯಮದಂತೆ ಸಂಭಾವನೆಯನ್ನು ನೀಡಲಾಗುವುದು ಎಂದು ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯನವರು ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗೆ ಕಚೇರಿ ಮೊಬೈಲ್ ಸಂಖ್ಯೆ 8762942976 ನ್ನು ಸಂಪರ್ಕಿಸಬಹುದು. ಕಥೆಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಜೂನಿಯರ್ ಕಾಲೇಜು ರಸ್ತೆ, ಮ್ಯಾನ್ಸ್ ಕಾಂಪೌಂಡ್ ಹತ್ತಿರ, ಸ್ಕೌಟ್ಸ್ ಮತ್ತು ಗೈಡ್ಸ್ ಭವನ, ಮಡಿಕೇರಿ ಇಲ್ಲಿಗೆ ಕಳುಹಿಸಬೇಕು. ಕಥೆಯನ್ನು ಕಳುಹಿಸಲು ಡಿ. 31 ಕೊನೆ ದಿನವಾಗಿದೆ.