ಕಲೋತ್ಸವದಿಂದ ಮಾನವೀಯ ಸಂಬಂಧಗಳಿಗೆ ನೆಲೆ

KannadaprabhaNewsNetwork |  
Published : Sep 21, 2024, 01:48 AM IST
ಪೊಟೋ-ಪಟ್ಟಣದ ಆಕ್ಸಫರ್ಡ ಶಾಲೆಯಲ್ಲಿ ನಡೆದ ಕಲಿಕೋತ್ಸವದಲ್ಲಿ ಬಿಇಓ ನಾಣಕಿ ನಾಯಕ ಮಾತನಾಡಿದರು. | Kannada Prabha

ಸಾರಾಂಶ

ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹಲವಾರು ತೊಂದರೆಗಳು ಎದುರಾಗುತ್ತಿರುವುದು ನೋವಿನ ಸಂಗತಿಯಾಗಿದೆ

ಲಕ್ಷ್ಮೇಶ್ವರ: ಮಕ್ಕಳಲ್ಲಿರುವ ಸೂಪ್ತ ಪ್ರತಿಭೆ ಹೊರಹೊಮ್ಮಲು ಅವಕಾಶ ನೀಡಿದಾಗ ಮಾತ್ರ ಅವರಲ್ಲಿ ಆತ್ಮಸ್ಥರ್ಯ ಇಮ್ಮಡಿಗೊಂಡು ಸಾಧನೆ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಬಿಇಓ ಎಚ್.ನಾಣಕಿನಾಯಕ ಹೇಳಿದರು.

ಪಟ್ಟಣದ ಆಕ್ಸ್‌ಪರ್ಡ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ದಕ್ಷಿಣ ಮತ್ತು ಉರ್ದು ಕ್ಲಸ್ಟರ್ ಮಟ್ಟದ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹಲವಾರು ತೊಂದರೆಗಳು ಎದುರಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ರೀತಿ-ನೀತಿ ಮತ್ತು ಮಾನವೀಯ ಮೌಲ್ಯ ಮರೆಯಾಗುತ್ತಿವೆ. ಮಕ್ಕಳಲ್ಲಿ ಈ ಗುಣ ಬೆಳೆಸುವ ಪಠ್ಯಕ್ರಮ ರೂಪುಗೊಳ್ಳಬೇಕಾಗಿದೆ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಎಚ್.ಪಾಟೀಲ ಹಾಗೂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಚ್.ಎಸ್.ರಾಮನಗೌಡರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಪ್ತ ಪ್ರತಿಭೆ ಅನಾವರಣ ಹಾಗೂ ಉತ್ತೇಜನ ನೀಡುವುದು ಕಲೋತ್ಸವದ ಪ್ರಮುಖ ಆಶಯವಾಗಿದೆ. ಶಿಕ್ಷಣ ಮಕ್ಕಳ ವಿಧ್ಯಾರ್ಜನೆಗೆ ಮಾತ್ರ ಸೀಮಿತವಾಗಿರದೆ ಅವರಲ್ಲಿನ ಪ್ರತಿಭೆ ಹೊರಹಾಕಿ, ನೈತಿಕವಾಗಿ ವಿಕಾಸ ಹೊಂದಲು ಸಹಾಯ ಮಾಡುವ ಮಹತ್ತರ ಕಾರ್ಯ ಎಂದು ಹೇಳಿದರು.

ಕಲಿಕೋತ್ಸವದಲ್ಲಿ ವಿಜೇತ ಮಕ್ಕಳಿಗೆ ಬಿ.ಆರ್.ಪಿ ಈಶ್ವರ ಮೆಡ್ಲೇರಿ ಮತ್ತು ಬಿ.ಎಂ.ಯರಗುಪ್ಪಿ ಬಹುಮಾನ ವಿತರಣೆ ಮಾಡಿದರು.

ಚಿದಾನಂದ ಬೇವಿನಮರದ, ಎಸ್.ಡಿ.ಲಮಾಣಿ, ಮುಖ್ಯೋಪಾಧ್ಯಾಯಿನಿ ಪ್ರಗತಿ ತಾವರೆ ಹಾಗೂ ಎಸ್.ಕೆ.ಹವಾಲ್ದಾರ ಇದ್ದರು.

ಲಕ್ಷ್ಮೇಶ್ವರ ದಕ್ಷಿಣ ಸಿಆರ್ ಪಿ ಸತೀಶ ಬೋಮಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಸು ದೀಪಾಳಿ, ಸಿಆರ್ ಪಿ ಉಮೇಶ ನೇಕಾರ, ಎನ್.ಎ. ಮುಲ್ಲಾ, ಜ್ಯೋತಿ ಗಾಯಕವಾಡ, ಶಿಕ್ಷಕ ಜಿ.ಬಿ. ಸುಗಜಾನರ, ಎಸ್.ಎಚ್.ಪೂಜಾರ, ನವೀನ ಅಂಗಡಿ, ಎಚ್.ಡಿ.ನಿಂಗರೆಡ್ಡಿ, ಜೆ.ವಿ. ಶೆಟ್ಟರ್, ಜಿ.ಎನ್. ಮೆಳ್ಳಳ್ಳಿ, ಎಂ.ಎಸ್. ಹುಣಸಿಮರದ, ಎಸ್.ಸಿ. ಹೂವಿನ, ಉಮೇಶ ಹೊಸಮನಿ, ಸಂತೋಷ ಮಲ್ಲಿಗವಾಡ ಹಾಗೂ ಸಂಬಂಧಿಸಿದ ಶಾಲಾ ಮಕ್ಕಳು ಮತ್ತು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು