ಯಲಬುರ್ಗಾ: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅನಾವರಣಕ್ಕೆ ಕಲೋತ್ಸವ ಅತ್ಯುತ್ತಮ ವೇದಿಕೆಯಾಗಿದೆ ಎಂದು ಬಿಆರ್‌ಪಿ ಶರಣಗೌಡ ಪಾಟೀಲ್ ಹೇಳಿದರು.
ಮಕ್ಕಳನ್ನು ಪಠ್ಯಕ್ಕೆ ಸೀಮಿತ ಮಾಡದೆ, ಅವರಲ್ಲಿನ ಪ್ರತಿಭೆ ಹೊರತರಲು ಶಿಕ್ಷಣದ ಸಮಗ್ರ ಭಾಗವಾಗಿ ಪ್ರತಿಭಾ ಕಾರಂಜಿ ಹೆಚ್ಚು ಸೂಕ್ತವಾಗಿದೆ. ಪ್ರತಿಭಾ ಕಾರಂಜಿಯಲ್ಲಿ ಪ್ರತಿಯೊಬ್ಬ ಮಕ್ಕಳು ಉತ್ಸಾಹದಿಂದ ಪಾಲ್ಗೊಳ್ಳಬೇಕು. ಸೋಲು ಗೆಲುವು ಎನ್ನದೆ ಸ್ಪರ್ಧೆಯಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಮಕ್ಕಳ ಪಾಲಕರು ಮತ್ತು ಶಿಕ್ಷಕರು ಮಕ್ಕಳ ಪ್ರತಿಭೆಯನ್ನು ಹೊರ ತರಲು ಪ್ರೋತ್ಸಾಹಿಸಬೇಕು ಎಂದರು.
ಪ್ರೌಡಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ಬಳಿಗಾರ, ಸಿಆರ್‌ಪಿ ನಾಗರಾಜ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ರತ್ನಮ್ಮ ವಣಗೇರಿ ಉದ್ಘಾಟಿಸಿದರು.ಈ ಸಂದರ್ಭ ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ಹಾದಿಮನಿ, ಗ್ರಾಪಂ ಸದಸ್ಯ ಶರಣಪ್ಪ ಮುಧೋಳ, ಶಶಿಕಲಾ ದಮ್ಮೂರು, ಲಲಿತಾ ದಮ್ಮೂರು, ಭೀರಪ್ಪ ಹೊಸಮನಿ, ಅಪ್ಪಾಜಿ ಬಸಾಪುರ, ಸಂಗಯ್ಯ ಹಿರೇಮಠ, ನಾಗಪ್ಪ ಧರ್ಮರ, ಜಗದೀಶ ಬಳಿಗಾರ, ಶರಣಗೌಡ ಪಾಟೀಲ್, ಶಿವಪ್ಪ ಈಬೇರಿ, ಹನುಮಪ್ಪ ದೊಣ್ಣೆಗುಡ್ಡ, ಹನುಮಗೌಡ ಮಾಲಿಪಾಟೀಲ್, ಶೇಖಪ್ಪ ವಣಗೇರಿ, ಶರಣಗೌಡ ಮಾಲಿಪಾಟೀಲ, ಶಿಕ್ಷಕರಾದ ಬಸವರಾಜ ಬಿಲ್ಲರ, ನಾಗರಾಜ ನಡುಲಕೇರಿ, ಸಕ್ರಪ್ಪ ಕುಷ್ಟಗಿ, ಹುಲಗಪ್ಪ ಹಿರೇಮನಿ ಸೇರಿದಂತೆ ಮತ್ತಿತರರು ಇದ್ದರು.