ಎನ್.ಹಲಸಹಳ್ಳಿಯಲ್ಲಿ ಕಲ್ಯಾಣ ಬಸವಣ್ಣ ಮಠ ಉದ್ಘಾಟನೆ

KannadaprabhaNewsNetwork |  
Published : Apr 30, 2025, 12:31 AM IST
29ಕೆಎಂಎನ್ ಡಿ18 | Kannada Prabha

ಸಾರಾಂಶ

ಬುದ್ಧ, ಬಸವಣ್ಣ, ಅಂಬೇಡ್ಕರ್ ಈ ತ್ರಿಶಕ್ತಿಗಳು ನಮಗೆ ಜ್ಞಾನಾರ್ಜನೆ ಕೊಟ್ಟಿದ್ದಾರೆ. ಅದನ್ನು ಮರೆತು ಎತ್ತಲೋ ನಾವು ಸಾಗುತ್ತಿದ್ದೇವೆ. ಆ ವಿಚಾರಗಳನ್ನು ಜನ ಮಾನಸದಲ್ಲಿ ಬಿತ್ತಿ ಪ್ರೀತಿಯಿಂದ ಪರಸ್ಪರ ನಾವೆಲ್ಲರೂ ಮನುಷ್ಯರು.

ಕನ್ನಡಪ್ರಭ ವಾರ್ತೆ ಹಲಗೂರು

ಎನ್.ಹಲಸಹಳ್ಳಿಯಲ್ಲಿ ಕಲ್ಯಾಣ ಬಸವಣ್ಣ ಸೇವಾ ಟ್ರಸ್ಟ್ ವತಿಯಿಂದ ಕಲ್ಯಾಣ ಬಸವಣ್ಣ ಮಠವನ್ನು ಉದ್ಘಾಟಿಸಲಾಯಿತು.

ಗುರುವಿನಪುರದ ಶ್ರೀಜಗದೀಶ ಶಿವಾಚಾರ್ಯ ಸ್ವಾಮಿಗಳು ಮಠವನ್ನು ಉದ್ಘಾಟಿಸಿ ನಂತರ ಧ್ವಜಾರೋಹಣ ನೆರವೇರಿಸಿದರು.

ಶ್ರೀಶೈಲ ಮಸೂತೆ ಮಾತನಾಡಿ, ಟ್ರಸ್ಟ್ ಮೂಲಕ ಸಮತ ಸಂದೇಶ, ಅನುಭವ ಪೀಠ ಎಂಬ ಸಂಸ್ಥೆ ಉದ್ಘಾಟನೆಗೊಂಡಿದೆ. ಬಹು ಸಂಸ್ಕೃತಿಯುಳ್ಳ ದೇಶದ ಮೂಲ ನಿವಾಸಿಗಳು ನಾವು. ಮನುಷ್ಯರನ್ನು ಮನುಷ್ಯರ ಹಾಗೆ ಗೌರವಿಸಬೇಕೆಂಬ ಜ್ಞಾನವನ್ನು ನಮ್ಮ ಪೂರ್ವಜರು ಕೊಟ್ಟಿದ್ದಾರೆ ಎಂದರು.

ಬುದ್ಧ, ಬಸವಣ್ಣ, ಅಂಬೇಡ್ಕರ್ ಈ ತ್ರಿಶಕ್ತಿಗಳು ನಮಗೆ ಜ್ಞಾನಾರ್ಜನೆ ಕೊಟ್ಟಿದ್ದಾರೆ. ಅದನ್ನು ಮರೆತು ಎತ್ತಲೋ ನಾವು ಸಾಗುತ್ತಿದ್ದೇವೆ. ಆ ವಿಚಾರಗಳನ್ನು ಜನ ಮಾನಸದಲ್ಲಿ ಬಿತ್ತಿ ಪ್ರೀತಿಯಿಂದ ಪರಸ್ಪರ ನಾವೆಲ್ಲರೂ ಮನುಷ್ಯರು. ಮಾನವ ಜಾತಿ ಒಂದೇ ಎಂಬ ಪಂಪನ ಮಾತು, ಇವನಾರವ ಇವನಾರವ ಎಂದೆನಿಸಯ್ಯ ಇವ ನಮ್ಮವ, ಇವನಮ್ಮವನೆಂದೆನಿಸಯ್ಯಾ ಎಂಬ ಬಸವಣ್ಣನವರ ಮಾತು, ಎದ್ದು ನಿಂತು ಈ ರೀತಿ ಮಾತನಾಡಲು ಧ್ವನಿ ಕೊಟ್ಟು ಸಂವಿಧಾನಾತ್ಮಕವಾಗಿ ಕಾನೂನು ವ್ಯವಸ್ಥೆ ಕಲ್ಪಿಸಿದ ಅಂಬೇಡ್ಕರರ ಸಂವಿಧಾನವನ್ನು ಉಳಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸಮತ ಸಂದೇಶ ಅನುಭವ ಮಂಟಪದ ಪೀಠಾಧಿಪತಿ ಓಂಕಾರೇಶ್ವರ ಸ್ವಾಮೀಜಿ, ದರ್ಶನ ಬಿ.ಸೋಮಶೇಖರ್, ಪುಟ್ಟಸ್ವಾಮಿ, ಚನ್ನಪ್ಪ, ಮಾರ್ಕಲ್ ನಟರಾಜು, ಸಿದ್ದಲಿಂಗಮೂರ್ತಿ ಕೆ.ಜಿ.ಆನಂದಕುಮಾರ್ ಕೆ.ಬಿ, ಎಚ್.ಎನ್.ವೀರಭದ್ರಯ್ಯ, ಸುಂದರಪ್ಪ ಲಿಂಗಪಟ್ಟಣ, ಅನ್ನದಾನಯ್ಯ, ಮಂಜು ವಿಶ್ವಕರ್ಮ, ಸಿದ್ದಲಿಂಗ ಸ್ವಾಮಿ, ಚೆಲುವರಾಯಸ್ವಾಮಿ, ಮರಿಗೌಡ, ಬಿಲ್ಲಯ್ಯ, ಚೌಡಯ್ಯ ಹಾಗೂ ಇತರ ಗಣ್ಯರು ಹಾಜರಿದ್ದರು.

ಇಂದು ವಿಶ್ವಗುರು ಬಸವೇಶ್ವರರ ಜಯಂತಿ

ಮಂಡ್ಯ: ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮೇ 30 ರಂದು ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಶ್ರೀ ವಿಶ್ವಗುರು ಬಸವೆಶ್ವರರ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ.

ಶ್ರೀ ದುರ್ದಂಡೇಶ್ವರ ಮಹಾಂತ ಶಿವಯೋಗಿಗಳ ಮಠದ ಡಾ. ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದು, ಮಳವಳ್ಳಿಯ ಬಿ.ಜಿ.ಪುರ ಮಠದ ಶ್ರೀ ಚಂದ್ರಶೇಖರ ಸ್ವಾಮಿಗಳು ದಿವ್ಯ ಸಮ್ಮುಖ ವಹಿಸಲಿದ್ದಾರೆ.

ಸಂಸದರು, ಸಚಿವರು, ಶಾಸಕರು , ಜಿಲ್ಲಾ ಅಧಿಕಾರಿಗಳು, ನಿಗಮ ಮಂಡಳಿ, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಭಾಗವಹಿಸುವರು. ನಿವೃತ್ತ ಸಂಸ್ಕೃತ ಉಪನ್ಯಾಸಕ ಡಾ.ಎಸ್. ಶಿವರಾಜಪ್ಪ ಅವರು ವಿಶ್ವಗುರು ಬಸವೆಶ್ವರರ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!