ಸೆ.19 ರಂದು ಕಮಲ್ ಶ್ರೀದೇವಿ ಚಿತ್ರ ಬಿಡುಗಡೆ: ಸಚ್ಚಿನ್ ಚಲುವರಾಯಸ್ವಾಮಿ

KannadaprabhaNewsNetwork |  
Published : Sep 17, 2025, 01:05 AM IST
15ಕೆಎಂಎನ್ ಡಿ25 | Kannada Prabha

ಸಾರಾಂಶ

ಮನರಂಜನೆಗಾಗಿ ಮಾಡಿರುವ ಈ ಚಿತ್ರದಲ್ಲಿ ಒಳ್ಳೆಯ ಸಂದೇಶವಿದೆ. ಕಮಲ್-ಶ್ರೀದೇವಿ ಪಾತ್ರವನ್ನಿಟ್ಟುಕೊಂಡು ಕಥೆಯನ್ನು ಹೆಣೆಯಲಾಗಿದೆ. ಕುಟುಂಬ ಸಮೇತ ಕುಳಿತು ನೋಡಬಹುದಾದ ಸಿನಮಾದಲ್ಲಿ ಸಂಗೀತಾ ಭಟ್ ನಾಯಕಿಯಾಗಿ ಉತ್ತಮವಾಗಿ ಅಭಿನಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ರಾಜ್ಯಾದ್ಯಂತ ಸೆ.19ರಂದು ಬಿಡುಗಡೆಯಾಗುತ್ತಿರುವ ಕಮಲ್ ಶ್ರೀದೇವಿ ಚಲನಚಿತ್ರವನ್ನು ಸಿನಿಪ್ರೇಕ್ಷಕರು ಸಿನಿಮಾ ಮಂದಿರಗಳಲ್ಲಿ ವೀಕ್ಷಣೆ ಮಾಡಿ ಪ್ರೋತ್ಸಾಹಿಸಬೇಕು ಎಂದು ಚಿತ್ರದ ನಾಯಕನಟ ಹಾಗೂ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪುತ್ರ ಸಚ್ಚಿನ್ ಮನವಿ ಮಾಡಿದರು.

ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವ ಎನ್.ಚಲುವರಾಯಸ್ವಾಮಿ ಅರ್ಪಿಸುವ ಸ್ವರ್ಣಾಂಬಿಕ ಪಿಕ್ಚರ್ಸ್ ಬ್ಯಾನರ್ ಅಡಿ ಬಿ.ಕೆ.ಧನಲಕ್ಷ್ಮಿ ನಿರ್ಮಾಣ, ರಾಜವರ್ಧನ್ ಸಹ ನಿರ್ಮಾಣದ ಕಮಲ್ ಶ್ರೀದೇವಿ ಚಿತ್ರವು ರಾಜ್ಯದ 150ಕ್ಕೂ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದರು.

ಮನರಂಜನೆಗಾಗಿ ಮಾಡಿರುವ ಈ ಚಿತ್ರದಲ್ಲಿ ಒಳ್ಳೆಯ ಸಂದೇಶವಿದೆ. ಕಮಲ್-ಶ್ರೀದೇವಿ ಪಾತ್ರವನ್ನಿಟ್ಟುಕೊಂಡು ಕಥೆಯನ್ನು ಹೆಣೆಯಲಾಗಿದೆ. ಕುಟುಂಬ ಸಮೇತ ಕುಳಿತು ನೋಡಬಹುದಾದ ಸಿನಮಾದಲ್ಲಿ ಸಂಗೀತಾ ಭಟ್ ನಾಯಕಿಯಾಗಿ ಉತ್ತಮವಾಗಿ ಅಭಿನಯಿಸಿದ್ದಾರೆ. ಈಗಾಗಲೇ ಟೀಸರ್ ಮತ್ತು ಒಂದು ಹಾಡನ್ನು ಬಿಡುಗಡೆ ಮಾಡಲಾಗಿದೆ. ಕನ್ನಡ ಸಿನಿ ಪ್ರಿಯರಲ್ಲಿ ವಿಶೇಷ ಕುತೂಹಲ ಹುಟ್ಟುಹಾಕಿದೆ ಎಂದರು.

ಕಿಶೋರ್, ರಮೇಶ್ ಇಂದಿರಾ, ಅಕ್ಷತಾ, ಕಾರ್ತಿಕ್, ಪ್ರತಾಪ್, ಸಂಗೀತಾಭಟ್, ಹರ್ಷಿತಾಭೂಪಯ್ಯ, ಉಮೇಶ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಪ್ರತಿಯೊಂದು ಪಾತ್ರಕ್ಕೂ ಒಳ್ಳೆಯ ಅರ್ಥವಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಹರೀಶ್, ಸಮರ್ಥ್, ನರೇಶ್, ಸಹನಟ ಪ್ರತಾಪ್ ಮತ್ತು ಕುಶಾಲ್‌ಗೌಡ ಗೋಷ್ಠಿಯಲ್ಲಿದ್ದರು.

ಸುರಕ್ಷತಾ ಸಾಮಗ್ರಿ ಇಲ್ಲದೆ ಕಾರ್ಮಿಕರಿಂದ ಕೆಲಸ

ಶ್ರೀರಂಗಪಟ್ಟಣ:

ಶ್ರೀರಂಗಪಟ್ಟಣ ದಸರಾ ಅಂಗವಾಗಿ ಪಟ್ಟಣದ ಶ್ರೀರಂಗನಾಥ ದೇವಾಲಯದ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಿಸುತ್ತಿರುವ ಕಾರ್ಮಿಕರಿಗೆ ಆಯೋಜಕರು, ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಸುರಕ್ಷತಾ ಸಾಮಗ್ರಿ ನೀಡದೆ ಕೆಲಸ ಮಾಡಿಸಿಕೊಳ್ಳುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸೆ.25ರಿಂದ ದಿನಗಳ ಕಾಲ ನಡೆಯುವ ಶ್ರೀರಂಗಪಟ್ಟಣ ದಸರಾ ವೇದಿಕೆ ನಿರ್ಮಾಣದ ಕಾರ್ಯ ಭರದಿಂದ ಸಾಗಿದೆ. ಸುಮಾರು 40 ರಿಂದ 80 ಅಡಿ ಎತ್ತರದ ಬೃಹದಾಕಾರದ ಭಾರಿ ಗಾತ್ರದ ಕಬ್ಬಿಣದ ಪೈಪ್ ಅಳವಡಿಸಿ, ಪ್ಲಾಷ್ಟಿಕ್ ಮಿಶ್ರಿತವಾದ ಮೇಲ್ಚಾವಣಿ ಹೊದಿಸಲು ಜೋಡಣೆ ಕಾರ್ಯ ಭರದಿಂದ ಸಾಗುತ್ತಿದೆ.

ಈ ಜರ್ಮನ್ ಟೆಂಟ್ ಅಳವಡಿಕೆಯಲ್ಲಿ ಹೊರ ರಾಜ್ಯದ ಕಾರ್ಮಿಕರು ತೊಡಗಿದ್ದಾರೆ. ಇವರಿಗೆ ಆಯೋಜಕರಾಗಲೀ ಅಥವಾ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಾಗಲೀ ಕನಿಷ್ಠ ಹೆಲ್ಮೆಟ್, ಸೇಪ್ಟಿ ಬೆಲ್ಟ್ ಸೇರಿದಂತೆ ಯಾವುದೇ ಸುರಕ್ಷತಾ ಸಾಮಗ್ರಿಗನ್ನು ನೀಡಿಲ್ಲ. ಒಂದು ವೇಳೆ ಅನಾಹುತ ಸಂಭವಿಸಿ ಸಾವು ನೋವಾದರೆ ಯಾವು ಹೊಣೆ ಎಂಬ ಚರ್ಚೆಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿಬರುತಿದೆ.

ಆಯೋಜಕರು ಅಥವಾ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಕಾರ್ಮಿಕರಿಗೆ ಅಗತ್ಯ ಸುರಕ್ಷತಾ ಸಾಮಾಗ್ರಿಗಳನ್ನ ಕೊಟ್ಟು ಕೆಲಸ ಮಾಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ