ಕನ್ನಡ ಸಾಹಿತ್ಯಕ್ಕೆ ಕಂಬಾರರ ಕೊಡುಗೆ ಅಪಾರ

KannadaprabhaNewsNetwork | Published : Dec 1, 2023 12:45 AM

ಸಾರಾಂಶ

ಕಂಬಾರರು ಕನ್ನಡ ರಂಗಭೂಮಿಗೆ ಸೀಮಿತವಾಗದೆ ಭಾರತೀಯ ರಂಗಭೂಮಿಯಲ್ಲಿ ವಿಶಿಷ್ಟ ಚಾಪು ಮೂಡಿಸಿದ್ದಾರೆ. ಜಾನಪದ ಮತ್ತು ಆಧುನಿಕ ನಾಟಕೀಯ ಪ್ರಕಾರಗಳ ಮಿಶ್ರಣ ಮಾಡುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಕನ್ನಡಪ್ರ‍ಭ ವಾರ್ತೆ ಹೂವಿನಹಡಗಲಿ

ಡಾ. ಚಂದ್ರಶೇಖರ ಕಂಬಾರರ ನಾಟಕಗಳು ಸಮಕಾಲೀನ ಸಮಸ್ಯೆಗಳೊಂದಿಗೆ ಪರಸ್ಪರ ಸಂಬಂಧ ಹೊಂದಿವೆ. ಅವರ ಕವಿತೆಗಳು ಆಧುನಿಕ ಜೀವನಶೈಲಿಯನ್ನು ಬೆಳೆಸುತ್ತವೆ. ಆದ್ದರಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ದೊಡ್ಡದಿದೆ ಎಂದು ಪ್ರಾಧ್ಯಾಪಕ ಡಾ. ಕೆ. ಸತೀಶ ತಿಳಿಸಿದರು.

ಪಟ್ಟಣದ ಶಾಂತಮ್ಮ ಕೋಡಿಹಳ್ಳಿ ಮುದುಕಪ್ಪನವರ ನಿವಾಸದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಕಾವ್ಯ ಪೂರ್ಣಿಮಾ ಬೆಳದಿಂಗಳ ಕವಿ ಕಾವ್ಯ ದರ್ಶನ ಸಂಗೀತ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಕಂಬಾರರು ಕನ್ನಡ ರಂಗಭೂಮಿಗೆ ಸೀಮಿತವಾಗದೆ ಭಾರತೀಯ ರಂಗಭೂಮಿಯಲ್ಲಿ ವಿಶಿಷ್ಟ ಚಾಪು ಮೂಡಿಸಿದ್ದಾರೆ. ಜಾನಪದ ಮತ್ತು ಆಧುನಿಕ ನಾಟಕೀಯ ಪ್ರಕಾರಗಳ ಮಿಶ್ರಣ ಮಾಡುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಹಿರಿಯ ವಕೀಲ ಕೈಲಾಸನಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಾಹಿತ್ಯಕ್ಕೆ ಕನ್ನಡಿಗರ ಕೊಡುಗೆ ಅಪಾರ. ನಮ್ಮ ನೆಲ ಜಲ ಭಾಷೆಯ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಸಂಸ್ಕೃತಿ ಅಚಾರ ವಿಚಾರಧಾರೆಗಳು ಸಂಪನ್ಮೂಲಗಳಾಗಬೇಕು ಎಂದರು.

ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡ ಕೋಡಿಹಳ್ಳಿ ಮುದುಕಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್‌.ಜಿ. ಪಾಟೀಲ, ಸಾಹಿತಿ ಶೋಭಾ ಮಲ್ಕಿಒಡೆಯರ್ ಸೇರಿದಂತೆ ಇತರರಿದ್ದರು. ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಟಿ.ಪಿ. ವೀರೇಂದ್ರ ವಹಿಸಿದ್ದರು. ಹಿರೇಮಲ್ಲನಕೆರೆ ಮಠದ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕವಿಗೋಷ್ಠಿಯಲ್ಲಿ ರಾಮಪ್ಪ ಕೋಟಿಹಾಳ, ಪ್ರಕಾಶ್ ಮಲ್ಕಿಒಡೆಯರ್, ಟಿ.ಎಂ. ನಾಗರತ್ನ, ಪಿ.ಎಂ. ಬಸವಲಿಂಗಯ್ಯ ಸ್ವಾಮಿ, ಎಲ್. ಖಾದರ್ ಬಾಷಾ, ಬಿ.ವೈ. ಜ್ಯೋತಿ, ರೋಷನ್ ಜಮೀರ್, ಶಂಕರ್ ಬೆಟಗೇರಿ, ಎಂ. ದಯಾನಂದ, ಹಡಗಲಿ ಬಸವರಾಜ, ಬಿ. ರಾಘವೇಂದ್ರ ಸೇರಿದಂತೆ ಹಲವು ಕವಿಗಳು ಕವಿತೆ ವಾಚಿಸಿದರು.

ಶಾರದ ಕೋಡಿಹಳ್ಳಿ ಪ್ರಾರ್ಥಿಸಿದರು, ಕೋಡಿಹಳ್ಳಿ ಕೋಟ್ರೇಶ ಸ್ವಾಗತಿಸಿದರು, ಎಚ್.ಜಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಎಂ. ಚನ್ನವೀರಸ್ವಾಮಿ ವಂದಿಸಿದರು. ಗಡ್ಡಿ ಶಿವಕುಮಾರ, ಭೀಮಾನಾಯ್ಕ ನಿರ್ವಹಿಸಿದರು.

Share this article