ಕೀರ್ತನೆಗಳಿಂದ ಜಾಗೃತಿ ಮೂಡಿಸಿದ ಕನಕದಾಸರು

KannadaprabhaNewsNetwork |  
Published : Nov 20, 2024, 12:31 AM IST
19ಮಾಗಡಿ1 : ಮಾಗಡಿ- ಬೆಂಗಳೂರು ಮುಖ್ಯ ರಸ್ತೆಯ ತಾವರೆಕೆರೆಯ ಪಾರಂಪರಿಕ ಆಧ್ಯಾತ್ಮ ಕೇಂದ್ರ ಹಠಯೋಗಿ ಕಾಳಪ್ಪ ಸ್ವಾಮಿ ಮಠದಲ್ಲಿ ನಡೆದ ಕಾರ್ತಿಕ ಮಾಸದ ದೀಪೋತ್ಸವ ಹಾಗೂ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಹುಬ್ಬಳ್ಳಿಯ ಸಿದ್ಧಾರೂಢ ಮಠದ  ಬಸವಾನಂದ ಸ್ವಾಮೀಜಿ ಚಾಲನೆ ನೀಡಿದರು. | Kannada Prabha

ಸಾರಾಂಶ

ಮಾಗಡಿ: ಕವಿಗಳಾಗಿ, ದಾರ್ಶನಿಕರಾಗಿ, ದಾಸರಾಗಿ ಬದುಕನ್ನು ಅನನ್ಯ ಅನುಭವಗಳಿಂದ ಗ್ರಹಿಸಿ ದರ್ಶಿಸಿದವರು ಕನಕದಾಸರು ಎಂದು ಹುಬ್ಬಳ್ಳಿಯ ಸಿದ್ಧಾರೂಢ ಮಠದ ಬಸವಾನಂದ ಸ್ವಾಮೀಜಿ ತಿಳಿಸಿದರು.

ಮಾಗಡಿ: ಕವಿಗಳಾಗಿ, ದಾರ್ಶನಿಕರಾಗಿ, ದಾಸರಾಗಿ ಬದುಕನ್ನು ಅನನ್ಯ ಅನುಭವಗಳಿಂದ ಗ್ರಹಿಸಿ ದರ್ಶಿಸಿದವರು ಕನಕದಾಸರು ಎಂದು ಹುಬ್ಬಳ್ಳಿಯ ಸಿದ್ಧಾರೂಢ ಮಠದ ಬಸವಾನಂದ ಸ್ವಾಮೀಜಿ ತಿಳಿಸಿದರು.

ಮಾಗಡಿ- ಬೆಂಗಳೂರು ಮುಖ್ಯ ರಸ್ತೆಯ ತಾವರೆಕೆರೆಯ ಪಾರಂಪರಿಕ ಆಧ್ಯಾತ್ಮ ಕೇಂದ್ರ ಹಠಯೋಗಿ ಕಾಳಪ್ಪ ಸ್ವಾಮಿ ಮಠದಲ್ಲಿ ಹಮ್ಮಿಕೊಂಡಿದ್ದ ಕಾರ್ತಿಕ ಮಾಸದ ದೀಪೋತ್ಸವ ಹಾಗೂ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ಕನಕದಾಸರು ತಮ್ಮ ಕೀರ್ತನೆಗಳಿಂದ ಸಮಾಜದಲ್ಲಿ ಜಾಗೃತಿ‌ ಮೂಡಿಸಿದರು. ನಳಚರಿತೆ, ರಾಮಧಾನ್ಯಚರಿತೆ, ಮೋಹನ ತರಂಗಿಣಿ ಕೃತಿಗಳು ಕನ್ನಡ ಸರಸ್ವತ ಲೋಕಕ್ಕೆ ಕನಕದಾಸರು ನೀಡಿರುವ ಶ್ರೇಷ್ಠ ಕೊಡುಗೆಗಳು ಎಂದು ತಿಳಿಸಿದರು.

ತಾವರೆಕೆರೆ ಹಠಯೋಗಿ ಕಾಳಪ್ಪಸ್ವಾಮಿ ಮಠದ ರೇವಣಸಿದ್ದಯ್ಯ ಗುರು ಮಾತನಾಡಿ, ಸಮಾಜದ ವರ್ಗ ಸಂಘರ್ಷಗಳನ್ನು ಮೀರಿ ಸ್ವಯಂ ಪ್ರತಿಭೆಯಿಂದ ಅಸಾಧಾರಣ ಅನುಭವಗಳನ್ನು ಪಡೆದು ಸಾಹಿತ್ಯ ರಚಿಸಿ ಕೀರ್ತನೆಗಳನ್ನು ಬರೆದು ದಾಸ ಸಾಹಿತ್ಯವನ್ನು ಮೀರಿ ಕನ್ನಡ ಸಾಹಿತ್ಯ ಲೋಕಕ್ಕೆ ವಿಶೇಷ ಅನುಭವದ ಮೊತ್ತವನ್ನು ದಾಖಲಿಸಿದವರು ಕನಕದಾಸರು. ಮಾನವ ಕುಲ ಒಂದೇ ಎಂಬ ಭಾವವನ್ನು ಅರಿಯಲು ಜಾತಿ ಭಾವಗಳನ್ನು ತೊರೆದು ಸಾಮರ್ಥ್ಯಕ್ಕೆ ಮನ್ನಣೆ ದೊರಕಬೇಕೆಂದು ಹೋರಾಡಿ ಆಧ್ಯಾತ್ಮದಲ್ಲೂ ಸಂಘರ್ಷಗಳನ್ನು ಆರೋಗ್ಯಕರವಾಗಿ ಕಟ್ಟಿಕೊಟ್ಟವರು ಕನಕದಾಸರು. ಮನುಕುಲದ ರಾಯಭಾರಿ ಎಂದು ಪರಿಭಾವಿಸಬೇಕು. ಯಾವುದೇ ಜಾತಿಗೆ ಸೀಮಿತ ಮಾಡಬಾರದು. ಅದು ನಾವು ಕನಕದಾಸರ ಚಿಂತನೆಗಳಿಗೆ ನೀಡುವ ಗೌರವ. ಶಾಲಾ- ಕಾಲೇಜುಗಳಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ಗ್ರಂಥಾಲಯಗಳಲ್ಲಿ ಕನಕದಾಸರ ಸಾಹಿತ್ಯದ ಪುಸ್ತಕಗಳು ಹೆಚ್ಚು ದೊರಕುವಂತಾಗಬೇಕೆಂದು ತಿಳಿಸಿದರು.

ಕಾರ್ತಿಕ ಸೋಮವಾರದ ಪ್ರಯುಕ್ತ ದೀಪೋತ್ಸವ ಏರ್ಪಡಿಸಲಾಗಿತ್ತು. ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಯಾದಗಿರಿ ಜಿಲ್ಲೆಯ ಶಹಾಪುರ ಪ್ರಣವಲಿಂಗ ಮಹಾಸ್ವಾಮಿಗಳು, ಶಿವಮೊಗ್ಗದ ರಾಮಲಿಂಗೇಶ್ವರ ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿಕ್ಷಕ ಟಿ.ಎನ್.ಚಿಕ್ಕವೀರಯ್ಯ, ಪೂಜಾರ್ ಕೃಷ್ಣಪ್ಪ ಮುಖಂಡರಾದ ನರಸಿಂಹಯ್ಯ, ರೇವಣ್ಣ, ರವಿಕಿರಣ, ನಾರಾಯಣ, ಅನಿಲ್, ಚಂದ್ರಶೇಖರ್, ಚಿಕ್ಕ ರಾಜು, ಚೇತನ್, ವಿದ್ಯಾರ್ಥಿಗಳಾದ ಜ್ಞಾನ ಸಿರಿ, ಅಕ್ಷರ ಸೇರಿದಂತೆ ಇತರರು ಭಾಗವಹಿಸಿದ್ದರು.

ಫೋಟೋ:

ಮಾಗಡಿ- ಬೆಂಗಳೂರು ಮುಖ್ಯ ರಸ್ತೆಯ ತಾವರೆಕೆರೆಯ ಪಾರಂಪರಿಕ ಆಧ್ಯಾತ್ಮ ಕೇಂದ್ರ ಹಠಯೋಗಿ ಕಾಳಪ್ಪಸ್ವಾಮಿ ಮಠದಲ್ಲಿ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಲಾಯಿತು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ