ಕನಕದಾಸರ ಬರಹ, ಬದುಕು ಸಮಾಜಕ್ಕೆ ಮಾದರಿ: ಮರಿರಾಮಣ್ಣ

KannadaprabhaNewsNetwork |  
Published : Nov 28, 2026, 12:45 AM IST
ಹಗರಿಬೊಮ್ಮನಹಳ್ಳಿಯ ಪುರಸಭೆಯ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಕನಕದಾಸರ ಜಯಂತಿಯಲ್ಲಿ ಪುರಸಭೆಯ ಮಾಜಿ ಅಧ್ಯಕ್ಷ ಎಂ. ಮರಿರಾಮಣ್ಣ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಜಾತಿ ರಹಿತ ಆರೋಗ್ಯಕರ ಸಮಾಜದ ನಿರ್ಮಾಣದ ಕನಸು ಕಂಡ ಕನಕದಾಸರು ಈ ನಿಟ್ಟಿನಲ್ಲಿ ತತ್ವ ಹಾಗೂ ಸಂದೇಶ ಸಾರಿದ್ದಾರೆ

ಹಗರಿಬೊಮ್ಮನಹಳ್ಳಿ: ತಮ್ಮ ಕೀರ್ತನೆ ಮತ್ತು ಮೊನಚಾದ ಬರಹಗಳ ಮೂಲಕ ರಾಜ್ಯದ ದಾಸ ಸಾಹಿತ್ಯ ವೈಚಾರಿಕವಾಗಿ ಶ್ರೀಮಂತಗೊಳಿಸಿದ ಹಾಗೂ ಅತ್ಯುನ್ನತ ಜೀವನ ಮೌಲ್ಯ ಜಗತ್ತಿಗೆ ಸಾರಿದ ಕನಕದಾಸರ ಜೀವನ ಸಮಾಜಕ್ಕೆ ಮಾದರಿಯಾಗಿದೆ ಎಂದು ಪುರಸಭೆಯ ಮಾಜಿ ಅಧ್ಯಕ್ಷ ಎಂ.ಮರಿರಾಮಣ್ಣ ಅಭಿಪ್ರಾಯಪಟ್ಟರು.

ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಕನಕದಾಸರ ಜಯಂತಿಯ ನಿಮಿತ್ತ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಪೂಜೆ ಸಲ್ಲಿಸಿ ಮಾತನಾಡಿದರು.

ಜಾತಿ ರಹಿತ ಆರೋಗ್ಯಕರ ಸಮಾಜದ ನಿರ್ಮಾಣದ ಕನಸು ಕಂಡ ಕನಕದಾಸರು ಈ ನಿಟ್ಟಿನಲ್ಲಿ ತತ್ವ ಹಾಗೂ ಸಂದೇಶ ಸಾರಿದ್ದಾರೆ. ಅವರ ಮಾನವೀಯ ಮೌಲ್ಯ ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಕನಕದಾಸರ ಕೀರ್ತನೆ ಸಾಮಾಜಿಕ ಸಮಾನತೆ ಎತ್ತಿ ಹಿಡಿಯುವ ಜತೆಗೆ ಸಮಾಜದ ಅಂಕುಡೊಂಕು ತಿದ್ದುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ಪ್ರತಿಪಾದಿಸಿದರು.

ಪುರಸಭೆ ಸದಸ್ಯೆ ಮಂಜುಳಾ ಕೃಷ್ಣಾನಾಯ್ಕ, ಸೆರೆಗಾರ್ ಹುಚ್ಚಪ್ಪ, ಚಿಂತ್ರಪಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಗುಂಡ್ರು ಹನಮಂತಪ್ಪ ಹಾಗೂ ಪುರಸಭೆಯ ಸಿಬ್ಬಂದಿ ಮಾರುತಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನಕದಾಸರ ಸಮಾನತೆ, ಮಾನವೀಯ ಸಂದೇಶ ಇಂದಿಗೂ ಪ್ರಸ್ತುತ: ಜಯರಾಮ್
ಕನಕದಾಸರ ಸಮಾಜಮುಖಿ ಸಂದೇಶಗಳು ಸಾರ್ವಕಾಲಿಕ ಸತ್ಯ-ಶಾಸಕ ಮಾನೆ