ಕನಕದಾಸರ ಸಾಹಿತ್ಯ ವಿಶ್ವಮಾನ್ಯವಾಗಿದೆ-ವಿದ್ಯೇಶತೀರ್ಥ ಸ್ವಾಮೀಜಿ

KannadaprabhaNewsNetwork |  
Published : Feb 01, 2025, 12:01 AM IST
31ಎಚ್‌ವಿಆರ್‌7 | Kannada Prabha

ಸಾರಾಂಶ

ಕನಕದಾಸರ ಸಾಹಿತ್ಯ ವಿಶ್ವಮಾನ್ಯವಾಗಿದೆ. ಈ ಸಾಹಿತ್ಯಕ್ಕೆ ಯಾವುದೇ ಜಾತಿ- ಮತಗಳ ತಾರತಮ್ಯ ಮಾಡದೇ ಅದನ್ನು ಉಳಿಸಿ ಬೆಳೆಸಬೇಕು ಎಂದು ಉಡುಪಿ ಭಂಡಾರಕೇರಿ ಮಠದ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು.

ಬ್ಯಾಡಗಿ: ಕನಕದಾಸರ ಸಾಹಿತ್ಯ ವಿಶ್ವಮಾನ್ಯವಾಗಿದೆ. ಈ ಸಾಹಿತ್ಯಕ್ಕೆ ಯಾವುದೇ ಜಾತಿ- ಮತಗಳ ತಾರತಮ್ಯ ಮಾಡದೇ ಅದನ್ನು ಉಳಿಸಿ ಬೆಳೆಸಬೇಕು ಎಂದು ಉಡುಪಿ ಭಂಡಾರಕೇರಿ ಮಠದ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು.ತಾಲೂಕಿನ ಕಾಗಿನೆಲೆಯ ಆದಿಕೇಶವನ ಸನ್ನಿಧಿಯ ಎದುರು ಇರುವ ಭಂಡಾರಕೇರಿ ಮಠದ ಪರಂಪರೆಯ 26ನೇ ಹಿರಿಯ ಯತಿ ಶ್ರೀ ರಾಜವಂದ್ಯತೀರ್ಥರ ಮೂಲವೃಂದಾವನ ಸನ್ನಿಧಾನದಲ್ಲಿ ಶುಕ್ರವಾರ ಆರಾಧನಾ ಉತ್ಸವ ನೆರವೇರಿಸಿ ಅನುಗ್ರಹ ಸಂದೇಶ ನೀಡಿದರು.ಕನಕದಾಸರ ಸಾಹಿತ್ಯದ ಪ್ರಚಾರ, ಪ್ರಸಾರ ಮತ್ತು ಸಂರಕ್ಷಣೆಯಲ್ಲಿ ಯಾವುದೇ ಭೇದ ಭಾವ ಸಲ್ಲದು. ಅವರು ಪದ- ಪದ್ಯಗಳಲ್ಲಿ ನೀಡಿರುವ ಸಂದೇಶ ಜಗತ್ತಿನ ಎಲ್ಲ ದೇಶ- ಕಾಲಕ್ಕೂ ಅನ್ವಯವಾಗುತ್ತದೆ ಎಂದು ಸ್ವಾಮೀಜಿ ನುಡಿದರು.ಭಕ್ತ ಕನಕದಾಸರು ಯಾವುದೇ ಒಂದು ಸಮುದಾಯದ ನಾಯಕರು ಎಂಬಂತೆ ಬಿಂಬಿಸಬಾರದು. ಅವರು ಮತ್ತು ಅವರ ಸಾಹಿತ್ಯ ನಮ್ಮ ನಾಡಿನ ಬಹುದೊಡ್ಡ ಸಂಪತ್ತು. ಮಠ- ಮಾನ್ಯಗಳಂತೆ ಸರ್ಕಾರವೂ ಕನಕ ಸಾಹಿತ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಇನ್ನಷ್ಟು ಮಾಡಬೇಕು. ಹರಿದಾಸ ಸಾಹಿತ್ಯ ವಾಹಿನಿಗೆ ಅನನ್ಯ ಕೊಡುಗೆ ನೀಡಿದ ಕನಕದಾಸರಿಗೆ ಆರಾಧ್ಯ ದೈವನಾದ ಆದಿ ಕೇಶವನ ಸನ್ನಿಧಿ ಎದುರೇ ನಮ್ಮ ಪರಂಪರೆಯ ಹಿರಿಯ ಸನ್ಯಾಸಿ ಶ್ರೀ ರಾಜವಂದ್ಯ ತೀರ್ಥರ ವೃಂದಾವನವೂ ಇರುವುದು ಬಹಳ ವಿಶೇಷ. ಯಾವ ಸಂಚಾರ ವ್ಯವಸ್ಥೆಯೂ ಇಲ್ಲದ ಕಾಲದಲ್ಲಿ ಕಾಲ್ನಡಿಗೆಯಲ್ಲೇ ದೇಶ ಸಂಚಾರ ಮಾಡುತ್ತಿದ್ದ ಸಂದರ್ಭ ನಮ್ಮ ಹಿರಿಯ ಯತಿಗಳು ಈ ಕ್ಷೇತ್ರದಲ್ಲಿ ವೃಂದಾವನಸ್ಥರಾಗಿದ್ದಾರೆ. ಈ ಸನ್ನಿಧಿಯನ್ನು (ಶಿಲಾಮಂಟಪ) ಕಳೆದ ವರ್ಷ ನವೀಕರಣಗೊಳಿಸಿ ವೃಂದಾವನ ಸಂರಕ್ಷಣೆ ಮಾಡಲಾಗಿದೆ. ನಾಡಿನ ಸಂಸ್ಕೃತಿ ಮತ್ತು ಮಾಧ್ವ ಪರಂಪರೆಗೆ ಇದು ಪ್ರತೀಕವಾಗಿದೆ ಎಂದು ಶ್ರೀಗಳು ನುಡಿದರು.

ಹಿರಿಯ ಯತಿಗಳ ವೃಂದಾವನದ ಎದುರು ಶ್ರೀಗಳು ಸಂಸ್ಥಾನ ಪೂಜೆ ನೆರವೇರಿಸಿದರು. ಮಹಾ ಮಂಗಳಾರತಿ ಸಮರ್ಪಿಸಿ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು. ಶ್ರೀಮಠದ ಶಿಷ್ಯರು ಮತ್ತು ಭಕ್ತರು ಹಾಜರಿದ್ದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌