ಕನಕಗಿರಿಯ ಅಚ್ಚಮ್ಮ ಬಾವಿ ಸ್ವಚ್ಛತೆ

KannadaprabhaNewsNetwork |  
Published : Feb 04, 2025, 12:33 AM IST
೩ಕೆಎನ್‌ಕೆ-೧                                     ಕನಕಗಿರಿ ರಾಣಿ ಅಚ್ಚಮ್ಮನ ಬಾವಿಯನ್ನು ಕಿಷ್ಕಿಂದಾ ಚಾರಣ ಬಳಗದವರು ಸ್ವಚ್ಛಗೊಳಿಸಿದರು.  | Kannada Prabha

ಸಾರಾಂಶ

೧೭ನೇ ಶತಮಾನದ ಸಾಮಂತ ಅರಸ ಇಮ್ಮಡಿ ಉಡಚನಾಯಕನ ಪತ್ನಿ ರಾಣಿ ಅಚ್ಚಮ್ಮಳ ಸವಿನೆನಪಿಗಾಗಿ ನಿರ್ಮಿಸಿದ್ದ ಐತಿಹಾಸಿಕ ಸ್ಮಾರಕ(ಬಾವಿ)ವನ್ನು ಕಿಷ್ಕಿಂದಾ ಚಾರಣ ಬಗಳದಿಂದ ಈಚೆಗೆ ಸ್ವಚ್ಛಗೊಳಿಸಲಾಯಿತು.

ಕಿಷ್ಕಿಂದಾ ಚಾರಣ ಬಗಳದಿಂದ ಕಾರ್ಯ

ಕನ್ನಡಪ್ರಭ ವಾರ್ತೆ ಕನಕಗಿರಿ

೧೭ನೇ ಶತಮಾನದ ಸಾಮಂತ ಅರಸ ಇಮ್ಮಡಿ ಉಡಚನಾಯಕನ ಪತ್ನಿ ರಾಣಿ ಅಚ್ಚಮ್ಮಳ ಸವಿನೆನಪಿಗಾಗಿ ನಿರ್ಮಿಸಿದ್ದ ಐತಿಹಾಸಿಕ ಸ್ಮಾರಕ(ಬಾವಿ)ವನ್ನು ಕಿಷ್ಕಿಂದಾ ಚಾರಣ ಬಗಳದಿಂದ ಈಚೆಗೆ ಸ್ವಚ್ಛಗೊಳಿಸಲಾಯಿತು.

ಲಿವ್ ವಿಥ್ ಹುಮ್ಯಾನಿಟಿ ಟ್ರಸ್ಟ್ ಅಧ್ಯಕ್ಷ ಚನ್ನಬಸವ ಮುದಗಲ್ ಮಾತನಾಡಿ, ನಮ್ಮ ಟ್ರಸ್ಟ್‌ನಡಿ ಕಿಷ್ಕಿಂದಾ ಚಾರಣ ಬಳಗದಿಂದ ಗಂಗಾವತಿ ತಾಲೂಕಿನ ವಾಣಿ ಭದ್ರೇಶ್ವರ, ಕೊಪ್ಪಳದ ಮಳೆ ಮಲ್ಲೇಶ್ವರ ದೇಗುಲ, ಅಶೋಕ ಶಾಸನ ಸಂರಕ್ಷಣೆ ಸೇರಿದಂತೆ ನಾನಾ ಕಡೆಗಳಲ್ಲಿನ ಐತಿಹಾಸಿಕ ಸ್ಮಾರಕ ಹಾಗೂ ಅವಿತು ಹೋಗಿರುವ ಬಾವಿಗಳ ಸ್ವಚ್ಛತೆಯನ್ನು ನಿರಂತರವಾಗಿ ಮಾಡುತ್ತ ಬರಲಾಗಿದೆ. ವಿಜಯನಗರ ಸಾಮ್ರಾಜ್ಯದ ಸಾಮಂತ ಅರಸ ಇಮ್ಮಡಿ ಉಡಚನಾಯಕನ ಪತ್ನಿ ರಾಣಿ ಅಚ್ಚಮ್ಮಳ ಸವಿನೆನಪಿಗಾಗಿ ಈ ಬಾವಿಯನ್ನು ನಿರ್ಮಿಸಲಾಗಿದೆ. ಇಲ್ಲಿ ಅನಂತ ಪದ್ಮನಾಭ, ಶೇಷ, ಗಜಲಕ್ಷ್ಮೀ, ಗಣಪತಿ ಸೇರಿದಂತೆ ನಾನಾ ಉಬ್ಬು ಶಿಲ್ಪಗಳು ಗಮನ ಸೆಳೆಯುವಂತಿವೆ. ಬಾವಿಯ ಸುತ್ತಲೂ ಮುಳ್ಳುಗಿಡಗಳು ಬೆಳೆದಿದ್ದರಿಂದ ಇಲ್ಲಿ ಯಾರೂ ಸುಳಿಯುತ್ತಿರಲಿಲ್ಲ. ಈಗ ನಮ್ಮ ಚಾರಣ ಬಳಗದ ಕಾರ್ಯಕರ್ತರು ಬಾವಿಯ ಸುತ್ತಲೂ ಇರುವ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿದ್ದರಿಂದ ಸ್ಮಾರಕದ ವೀಕ್ಷಣೆಗೆ ಅನುಕೂಲವಾಗಿದೆ. ಚಾರಣದ ಜತೆಗೆ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ಐತಿಹ್ಯ ಕೇಂದ್ರಗಳ ಶ್ರಮದಾನ ಕಾರ್ಯ ನಿರಂತರವಾಗಿ ಹಮ್ಮಿಕೊಳ್ಳುತ್ತೇವೆ ಎಂದರು.ಅರ್ಜುನ, ಚನ್ನಬಸವ ಮುದಗಲ್, ಪ್ರಕಾಶ, ಅಯ್ಯಣ್ಣ, ಸುರೇಶ ಕಡಿ, ವಿನಯ ಪತ್ತಾರ, ಸುರೇಶ ಸಮಗಂಡಿ, ಸಂತೋಷ ಕುಂಬಾರ, ಆಕಾಶ, ರಮೇಶ ನಾಯಕ, ದೇವರಾಜ, ಮುತ್ತಣ್ಣ, ಮಧುಸೂದನ, ಭೀಮರಾವ್ ಮರಾಠಿ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ