)
ಎಂ. ಪ್ರಹ್ಲಾದ ಕನಕಗಿರಿ
ವಿದ್ಯುತ್ ದೀಪಾಲಂಕಾರದಿಂದ ದೇಗುಲದ ಗೋಪುರಗಳು, ಮಧ್ಯ ಮಂಟಪ, ಹೊರ-ಒಳ ಭಾಗದ ದೇಗುಲದ ಕಟ್ಟಡಗಳು ಕಂಗೊಳಿಸುತ್ತಿವೆ. ಬಸ್ ನಿಲ್ದಾಣದಿಂದ ದೇಗುಲಕ್ಕೆ ಬರುವ ಮುಖ್ಯರಸ್ತೆ ಹಾಗೂ ರಾಜಬೀದಿಯಲ್ಲಿನ ಪಂಪಾಪತಿ, ಗಜಲಕ್ಷ್ಮೀ, ತೇರಿನ ಹನುಮಪ್ಪ, ರಾಮಲಿಂಗೇಶ್ವರ ಸೇರಿ ನಾನಾ ದೇಗುಲಗಳು ಕೂಡಾ ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿವೆ.
ದಾಸೋಹಕ್ಕೆ ಚಾಲನೆ:ಪ್ರತಿ ವರ್ಷವೂ ಸಹ ಸಚ್ಚಿದಾನಂದ ಅವಧೂತರ ಮಠದಲ್ಲಿ ಎರಡು ದಿನಗಳ ಕಾಲ ನಡೆಯುವ ದಾಸೋಹಕ್ಕೆ ದಾಸಪ್ಪನವರಿಂದ ಶಂಖ, ಜಾಗಟೆಯ ನಾದ ಮೊಳಗಿಸಿ ಚಾಲನೆ ನೀಡಲಾಯಿತು.
ಪಾದಯಾತ್ರಿಕರ ಸಂಖ್ಯೆ ಹೆಚ್ಚಳ:ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಕುಡದರಹಾಳು, ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಇಬ್ರಾಹಿಂಪುರ, ಜಿಲ್ಲೆಯ ತಾಲೂಕುಗಳಿಂದ ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿದರು.
ದೀರ್ಘದಂಡ ನಮಸ್ಕಾರ: ಭಕ್ತರ ಇಷ್ಟಾರ್ಥಗಳು ಈಡೇರಿದ್ದರಿಂದ ದೇಗುಲದಲ್ಲಿ ನೂರಾರು ಭಕ್ತರು ದೀರ್ಘದಂಡ ನಮಸ್ಕಾರ ಹಾಕಿ ತಮ್ಮ ಹರಿಕೆ ತೀರಿಸಿ ಧನ್ಯತೆ ಮೆರೆದರು. ನೆರೆಯ ಜಿಲ್ಲೆಯ ಭಕ್ತರೂ ದೀರ್ಘದಂಡ ನಮಸ್ಕಾರ ಹಾಕಿ ಕನಕಾಚಲಪತಿಗೆ ನಮಿಸಿದರು.
ಈ ನಡುವೆ ರಥ ಕಟ್ಟುವ ಕೆಲಸಗಾರರು ತೇರಿಗೆ ತಳಿರು ತೋರಣಗಳಿಂದ ಶೃಂಗರೀಸುವ ಕೆಲಸ ನಡೆಸಿದ್ದು, ಭಕ್ತರಲ್ಲಿ ರಥೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಮಾ. 11ರ ಬುಧವಾರದಂದು ಸಂಜೆ ೪ ಗಂಟೆಗೆ ರಥೋತ್ಸವವು ಮೂಲಾ ನಕ್ಷತ್ರದಲ್ಲಿ ಪ್ರಾರಂಭಗೊಳ್ಳಲಿದೆ.