ಕನಕಪುರ: ಶಿಕ್ಷಕನ ವಿರುದ್ಧ ವಿದ್ಯಾರ್ಥಿಗಳಳ ಪ್ರತಿಭಟನೆ

KannadaprabhaNewsNetwork |  
Published : Jun 23, 2025, 11:46 PM ISTUpdated : Jun 23, 2025, 11:47 PM IST
ಕೆ ಕೆ ಪಿ ಸುದ್ದಿ 03: ಶಾಲೆಯ ಸಹ ಶಿಕ್ಷಕರ ವಿರುದ್ಧ ಚೌಕಸಂದ್ರ ಗ್ರಾಮದ ಸರ್ಕಾರಿ ಶಾಲಾ ಮಕ್ಕಳು ಪ್ರತಿಭಟನೆ.  | Kannada Prabha

ಸಾರಾಂಶ

ಚೌಕಸಂದ್ರ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಹ ಶಿಕ್ಷಕ ಉಮೇಶ್ ವಿರುದ್ಧ ಇಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಕನಕಪುರ

ಶಾಲಾ ಶಿಕ್ಷಕರ ದುಂಡಾವರ್ತನೆ ವಿರೋಧಿಸಿ ಶಾಲಾ ಆವರಣದಲ್ಲಿ ಕುಳಿತು ಮಕ್ಕಳು ಪ್ರತಿಭಟನೆ ನಡೆಸಿದ ಘಟನೆ ಚೌಕಸಂದ್ರ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಕಸಬಾ ಹೋಬಳಿ ಟಿ.ಬೇಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌಕಸಂದ್ರ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಹ ಶಿಕ್ಷಕ ಉಮೇಶ್ ವಿರುದ್ಧ ಇಂದು ವಿದ್ಯಾರ್ಥಿಗಳು ಶಾಲೆಯ ಮುಂಭಾಗ ಕುಳಿತು ಶಿಕ್ಷಕರ ವರ್ಗಾವಣೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.

ಘಟನೆಯ ವಿವರ:

ಶಾಲೆಯ ಸಹ ಶಿಕ್ಷಕರು ಪ್ರತಿನಿತ್ಯ ಶಾಲೆಗೆ ವಿಳಂಬವಾಗಿ ಬರುವುದು ಹಾಗೂ ತಮ್ಮ ಮನ ಬಂದಂತೆ ಹೊರಡುವುದು ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಹಾಗೂ ಮನಸ್ಸು ಇಚ್ಛೆ ತಳಿಸುವುದು ಸೇರಿದಂತೆ ಹಲವು ಆರೋಪಗಳು ವಿದ್ಯಾರ್ಥಿಗಳಿಂದ ಕೇಳಿ ಬರುತ್ತಿದೆ. ಇನ್ನು ಶಿಕ್ಷಕನ ಈ ದುಂಡಾವರ್ತನೆಯ ಕುರಿತು ಮಕ್ಕಳು ತಮ್ಮ ಪೋಷಕ ರಿಗೆ ತಿಳಿಸಲು, ಪೋಷಕರು ಶಾಲೆಗೆ ತೆರಳಿ ಶಿಕ್ಷಕರನ್ನು ಮಕ್ಕಳ ಆರೋಪಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿದರೆ ನಾನಿರುವುದೇ ಹೀಗೆ ನಿಮಗೆ ಬೇಡವಾದಲ್ಲಿ ನನ್ನನ್ನು ವರ್ಗಾವಣೆ ಮಾಡಿಸಿ ಬೇರೆ ಶಿಕ್ಷಕರನ್ನು ನಿಮ್ಮ ಗ್ರಾಮದ ಶಾಲೆಗೆ ನೇಮಿಸಿಕೊಳ್ಳಿ ಎಂಬ ಉಡಾಫೆಯ ಉತ್ತರ ನೀಡುತ್ತಾರೆ ಎಂಬ ಆರೋಪ ಶಿಕ್ಷಕರ ವಿರುದ್ಧ ವ್ಯಕ್ತವಾಗಿದೆ.

ರಾಜ್ಯ ಸರ್ಕಾರವು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಒಂದೆಡೆ ಅಭಿಯಾನ ನಡೆಸಿದರೆ, ಇಂತಹ ವ್ಯಕ್ತಿತ್ವವುಳ್ಳ ಶಿಕ್ಷಕರ ನಡೆಯಿಂದಾಗಿ ಸಾಕಷ್ಟು ಬಡವರು ಸಹ ಸಾಲ ಸೋಲಾ ಮಾಡಿಯಾದರೂ ಸರಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಆಸೆಯಿಂದ ಖಾಸಗಿ ಶಾಲೆಗಳತ್ತ ಮುಖ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ನಿಜಕ್ಕೂ ಶೋಚನೀಯವೇ ಸರಿ.

ಇಂತಹ ಘಟನೆಗಳನ್ನು ಕಂಡಾಗ ಸರ್ಕಾರವು ಶಾಲಾ ಶಿಕ್ಷಕರಿಗೆ, ಆಯಾ ಗ್ರಾಮಗಳಲ್ಲಿನ ಪೋಷಕರ ಮನವೊಲಿಸಿ ಪ್ರತಿ ಯೊಂದು ಮಗುವು ಸಹ ಸ್ಥಳೀಯ ಸರ್ಕಾರಿ ಶಾಲೆಗಳಿಗೆ ದಾಖಲಾಗುವಂತೆ ಮನವೊಲಿಸುವ ಜವಾಬ್ದಾರಿಯನ್ನು ನೀಡಿ ಹೆಚ್ಚಿನ ಹೊಣೆಗಾರಿಕೆ ವಹಿಸಬೇಕು ಎಂಬುದು ಜನರು ಹಾಗೂ ಕನ್ನಡಪರ ಹೋರಾಟಗಾರರ ಅಭಿಪ್ರಾಯವಾಗಿದೆ.ಕೋಟ್‌......

ಸರ್ಕಾರಿ ಶಾಲೆಗಳು ಹಾಗೂ ಶಿಕ್ಷಕರ ಹೆಸರಿಗೆ ಮಸಿ ಬೆಳೆಯುವ ಕೆಲಸ ಮಾಡುವಂತಹ ಇಂತಹ ದುಷ್ಟ ಶಿಕ್ಷಕರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ನಿರ್ಧಾಕ್ಷಿಣ್ಯ ಶಿಸ್ತು ಕ್ರಮ ಜರುಗಿಸುವ ಮೂಲಕ ಕಲಿಕೆಯ ವಯಸ್ಸಿನ ಮಕ್ಕಳ ಮನಸ್ಸಿನಲ್ಲಿ ಉತ್ತಮ ಭಾವನೆ ಮೂಡಿಸುವಂತಹ ಕೆಲಸವನ್ನು ಮಾಡಬೇಕಿದೆ.

- ಪ್ರಕಾಶ್ ಕುಣಿಗಲ್, ಸಂಸ್ಥಾಪಕ ರಾಜ್ಯಾಧ್ಯಕ್ಷರು, ಕನ್ನಡ ಕಲಿಗಳ ವೇದಿಕೆ

PREV

Recommended Stories

ತ್ಯಾಗರಾಜ ಕೋ ಆಪರೇಟಿವ್‌ ಬ್ಯಾಂಕ್‌ನಿಂದ ರಸಪ್ರಶ್ನೆ ಸ್ಪರ್ಧೆ
ಕುತಂತ್ರ-ಅಸೂಯೆಯಿಂದ ಟನಲ್‌ ರಸ್ತೆಗೆ ಬಿಜೆಪಿ ವಿರೋಧ : ಡಿ.ಕೆ.ಸು