- ಮೈಸೂರು ನಿರ್ದೇಶಕನ ಚಿತ್ರಕ್ಕೆ ಸಂದ ಗರಿ
ಚಿದಾನಂದ ನಾಯ್ಕ್ ಮತ್ತು ತಂಡ ದೆಹಲಿಯಲ್ಲಿರುವ ಭಾರತೀಯ ಚಲನಚಿತ್ರ ಶಾಲೆಯನ್ನು ಪ್ರತಿನಿಧಿಸಿ, ತಮ್ಮ ಸ್ವಂತ ವೆಚ್ಚದಲ್ಲಿ ತಯಾರಿಸಿ ನಾಮನಿರ್ದೇಶನ ಮಾಡಿದ್ದರು. ಈ ಚಿತ್ರವನ್ನು ಕಾನ್ಸ್ ಚಿತ್ರೋತ್ಸವದಲ್ಲಿ ಚಲನಚಿತ್ರ ಶಾಲೆಗಳಿಗೆ ನೀಡುವ ಲಾ ಸಿನೆಫ್ ಪ್ರಶಸ್ತಿ ವಿಭಾಗದಲ್ಲಿ ಪರಿಗಣಿಸಲಾಗಿತ್ತು. ತೀರ್ಪುಗಾರರು ಮಂಗಳವಾರ ಚಲನಚಿತ್ರವನ್ನು ವೀಕ್ಷಿಸಿದ್ದರು.ಪ್ರಶಸ್ತಿ ಗೆದ್ದಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಕಾನ್ಸ್ ಸ್ಮರಣಿಕೆ ಹಾಗೂ 13.5 ಲಕ್ಷ ರು. (15 ಸಾವಿರ ಯೂರೋ) ಬಹುಮಾನ ಪಡೆದುಕೊಂಡಿದೆ. ಇದಕ್ಕೂ ಮೊದಲು 2020ರಲ್ಲಿ ಭಾರತದ ಕ್ಯಾಟ್‌ಡಾಗ್ ಚಿತ್ರಕ್ಕೆ ಲಾ ಸಿನೆಫ್ ಪ್ರಶಸ್ತಿ ಒಲಿದಿತ್ತು.ಚಿತ್ರದಲ್ಲಿ ಏನಿದೆ? ಸನ್‌ಫ್ಲವರ್ಸ್ ವರ್ ದಿ ಫಸ್ಟ್ ಒನ್ಸ್ ಟು ನೋ ಚಿತ್ರದಲ್ಲಿ ಕನ್ನಡದ ಬಂಜಾರ ಸಮುದಾಯದ ಹಳ್ಳಿಯೊಂದರಲ್ಲಿ ಹುಂಜವೊಂದರ ಕಳ್ಳತನವಾದಾಗ ಅಂಧಕಾರದಲ್ಲಿ ವೃದ್ಧೆಯೊಬ್ಬರು ಪರಿತಪಿಸುವ ಕುರಿತು ತೋರಿಸಲಾಗಿದೆ. ಚಿತ್ರ 16 ನಿಮಿಷ ಇದೆ.