)
ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು), ವಿದ್ಯಾರ್ಥಿಗಳ ಕ್ಲಬ್ ನ.21ರಂದು ಜ್ಞಾನ ಸಂಗಮದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಹಬ್ಬ-26 ಅನ್ನು ಆಯೋಜಿಸಿದೆ.
ಸಂಜೆ 4 ಗಂಟೆಗೆ ವೈದ್ಯೆ ಡಾ.ಸುಜಾತಾ ಎಂ. ಜಾಲಿ, ಕಲಾವಿದರಾದ ಕಾಡಪ್ಪ ಪ.ಗಾಡಿವಡ್ಡರ್, ಡಾ.ಡಿ.ಎಸ್.ಚೌಗಲೆ ಅವರನ್ನು ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಅಭಿನಂದಿಸಲಿದ್ದಾರೆ.
ಸಂಜೆ 5 ಗಂಟೆಗೆ ಸರಿಗಮಪ ಖ್ಯಾತಿಯ ಗಾಯಕ- ಗಾಯಕಿಯರಾದ ಶ್ರೀಹರ್ಷ ಎಂ.ಆರ್. ಮತ್ತು ಕುಮಾರಿ ಅಂಕಿತಾ ಕುಂಡು ಅವರು ತಮ್ಮ ಸುಮಧುರ ಗಾಯನದ ಮೂಲಕ ಸಂಗೀತ ರಸಿಕರನ್ನು ರಂಜಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕುಲಸಚಿವ ಡಾ.ಪ್ರಸಾದ್ ಬಿ. ರಾಂಪುರೆ, ವಿಟಿಯು ಕುಲಸಚಿವರು (ಮೌಲ್ಯಮಾಪನ) ಡಾ.ಯು.ಜೆ.ಉಜ್ವಲ್, ವಿತ್ತಾಧಿಕಾರಿ ಡಾ.ಪ್ರಶಾಂತ ನಾಯಕ ಭಾಗವಹಿಸಿದ್ದಾರೆ ಎಂದು ವಿಟಿಯು ಪ್ರಕಟಣೆ ತಿಳಿಸಿದೆ.