ಮನಸ್ಸು ಪ್ರಫೂಲ್ಲಗೊಳಿಸುವ ಭಾಷೆ ಕನ್ನಡ: ಸೂರಿ ಶ್ರೀನಿವಾಸ್

KannadaprabhaNewsNetwork |  
Published : Dec 10, 2025, 12:15 AM IST
ತರೀಕೆರೆಯಲ್ಲಿ ಕನ್ನಡ ರಾಜ್ಯೋತ್ಸವ-ಕನ್ನಡ ನಿತ್ಯೋತ್ಸವ ಕಾರ್ಯಕ್ರಮ | Kannada Prabha

ಸಾರಾಂಶ

ತರೀಕೆರೆಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗುತ್ತಿದೆ. ಕನ್ನಡ ಭಾಷೆ ಮನಸ್ಸು ಅರಳಿಸುವ ಕಾರ್ಯ ನಿರ್ವಹಿಸುತ್ತದೆ ಎಂದು ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.

- ತರೀಕೆರೆಯಲ್ಲಿ ಕನ್ನಡ ರಾಜ್ಯೋತ್ಸವ-ಕನ್ನಡ ನಿತ್ಯೋತ್ಸವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗುತ್ತಿದೆ. ಕನ್ನಡ ಭಾಷೆ ಮನಸ್ಸು ಅರಳಿಸುವ ಕಾರ್ಯ ನಿರ್ವಹಿಸುತ್ತದೆ ಎಂದು ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.

ಮಂಗಳವಾರ ತರೀಕೆರೆ-ಅಜ್ಜಂಪುರ ತಾಲೂಕು ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಷನ್ ಹಾಗೂ ಶ್ರೀ ವಾಸ್ತುಶಿಲ್ಪ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ, ತರೀಕೆರೆ ಕಸಾಪ ಸಂಯಕ್ತಾಶ್ರಯದಲ್ಲಿ ಪಟ್ಟಣದ ಶ್ರೀ ಶೃಂಗೇರಿ ಶಾರದ ಸಭಾ ಭವನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ-ಕನ್ನಡ ನಿತ್ಯೋತ್ಸವದಲ್ಲಿ ಮಾತನಾಡಿದರು.

ನವೆಂಬರ್ ನಲ್ಲಿ ಕನ್ನಡ ರಾಜ್ಯೋತ್ಸವ ನಡೆಯುತ್ತದೆ, ಕನ್ನಡ ನಿತ್ಯೋತ್ಸವ ವರ್ಷಪೂರ್ತಿ ಕಾರ್ಯಕ್ರಮ ನಡೆಯುತ್ತದೆ. ತರೀಕೆರೆ-ಅಜ್ಜಂಪುರ ತಾಲೂಕು ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಷನ್ ಹಾಗೂ ಶ್ರೀ ವಾಸ್ತುಶಿಲ್ಪ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಕ್ಕೆ ಅಭಿನಂದನೆ. ಇಲ್ಲಿ ನುಡಿ ಜಾತ್ರೆ, ಕನ್ನಡ ಕಟ್ಟುವ ಕೆಲಸ ನಡೆದಿದೆ. ಎಂಜಿನಿಯರ್ಸ್ ಪರಿ ಕಲ್ಪನೆ ಮತ್ತು ಕಾರ್ಮಿಕರ ನೈಪುಣ್ಯತೆಯಿಂದ ನಾವೆಲ್ಲಾ ನೆಮ್ಮದಿಯಿಂದ ಇದ್ದೇವೆ. ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯುತ್ತಿದೆ. ಶ್ರಮಜೀವಿಗಳು ಕಟ್ಟಿದ ಲಕ್ಕವಳ್ಳಿ ಅಣೆಕಟ್ಟು ಎಲ್ಲರ ನೆನಪಿನಲ್ಲಿದೆ ಎಂದು ಹೇಳಿದರು.ಮಹನೀಯರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ದ.ರಾ.ಬೇಂದ್ರೆ ಅವರ ಮಾತೃಭಾಷೆ ಬೇರೆಯಾದರೂ ಈ ಮಹನೀಯರು ಕನ್ನಡದ ಬಗ್ಗೆ ವಿಶೇಷ ಒಲವು ತೋರಿ ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡಕ್ಕೆ ಕೈ ಎತ್ತಿದರೆ ಉಚ್ಚ್ರಾಯ ಸ್ಥಿತಿಗೆ ಬರುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತು ತಿರುಗಿನೋಡುವಂತೆ ಈ ಕಾರ್ಯಕ್ರಮ ಅದ್ಧೂರಿಯಾಗಿ ಮಾಡಿದ್ದೀರಿ. ಸರ್ವರೂ ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರಾಗಬೇಕು ಎಂದು ಕೋರಿದರು.ಪುರಸಭೆ ಅಧ್ಯಕ್ಷ ವಸಂತಕುಮಾರ್ ಮಾತನಾಡಿ ಕನ್ನಡ ರಾಜ್ಯೋತ್ಸವ ಮತ್ತು ನಿತ್ಯೋತ್ಸವವನ್ನು ಅದ್ಧೂರಿಯಾಗಿ ಮಾಡಿದ್ದೀರಿ ಕನ್ನಡ ರಾಜ್ಯೋತ್ಸವ ಮತ್ತು ನಿತ್ಯೋತ್ಸವದ ಪ್ರಯುಕ್ತ ಪುರಸಭಾ ಕಚೇರಿಯಲ್ಲಿ ಒಂದು ಗಂಟೆ ಹೆಚ್ಚು ಹೊತ್ತು ಕಾರ್ಯ ನಿರ್ವಹಿಸುತ್ತೇನೆ. ಎಲ್ಲರಿಗೂ ಶುಭಾಷಯ ತಿಳಿಸಿದ ಅವರು ಸುಶ್ರಾವ್ಯವಾಗಿ ಗೀತೆ ಹಾಡಿದರು.ತರೀಕೆರೆ-ಅಜ್ಜಂಪುರ ತಾಲೂಕು ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಟಿ.ಆರ್.ಮುರುಳಿ ಮಾತನಾಡಿ ಸಂಘ 55 ಜನ ಸದಸ್ಯರನ್ನು ಹೊಂದಿದೆ. ಸಂಘದಿಂದ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನೋತ್ಸವ ಆಚರಿಸಲಾಗುತ್ತಿದೆ. ಸರ್ ಎಂ.ವಿಶ್ವೇಶ್ವರಯ್ಯ ಕಂಚಿನ ಪುತ್ಥಳಿಯನ್ನು ಸ್ಥಾಪಿಸಲಾಗಿದೆ. ಹಿರಿಯ ಕಟ್ಟಡ ಕಾರ್ಮಿಕರನ್ನು ಸನ್ಮಾನಿಸಲಾಗುತ್ತಿದೆ ಎಂದು ಹೇಳಿದರು.

ಹೊಸನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥರು ಶ್ರೀಪತಿ ಹಳಗುಂದ ಉಪನ್ಯಾಸ ನೀಡಿ ಕನ್ನಡ ನಿತ್ಯೋತ್ಸವ ವರ್ಷಪೂರ್ತಿ ನಡೆಯುವಂತಹ ಕಾರ್ಯಕ್ರಮ. ಕನ್ನಡ ಭಾಷೆಯನ್ನು ಹೆಚ್ಚು ಬಳಸಿ , ಮಕ್ಕಳಿಗೆ ಕನ್ನಡ ಹೇಳಿಕೊಡಿ. ವಿಶ್ವದ 20 ಪ್ರತಿಷ್ಠಿತ ಭಾಷೆಗಳಲ್ಲಿ ಕನ್ನಡ ಭಾಷೆಯೂ ಒಂದಾಗಿದೆ. ಕನ್ನಡದಲ್ಲಿ ಬಹುದೊಡ್ಡ ಭಾವೈಕ್ಯತೆ ಇದೆ ಎಂದು ಹೇಳಿದರು.

ತರೀಕೆರೆ-ಅಜ್ಜಂಪುರ ತಾಲೂಕು ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಶನ್ ಅಧ್ಯಕ್ಷ ಟಿ.ಯು.ವಸಂತ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಶನ್ ಸಂಸ್ಥಾಪಕ ಅಧ್ಯಕ್ಷ ಎಚ್.ಸಿ.ಗೋಪಾಲಕೃಷ್ಣ, ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್, ಹಿರಿಯ ಕಾರ್ಮಿಕ ನಿರೀಕ್ಷಕ ಎಚ್.ಕೆ.ಪ್ರಭಾಕರ್ ಮಾತನಾಡಿದರು.

ಶ್ರೀ ವಾಸ್ತುಶಿಲ್ಪ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಅಧ್ಯಕ್ಷ ಬಾಲಸುಬ್ರಮಣಿ ಆರ್. ಪುಷ್ಪಾರ್ಚನೆ ನೆರವೇರಿಸಿದರು. ಶ್ರೀ ವಾಸ್ತುಶಿಲ್ಪ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಸದ್ವಿದ್ಯಾ ಶಾಲೆ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ತರೀಕೆರೆ ಅಜ್ಜಂಪುರ ತಾಲೂಕು ಸಿವಿಲ್ ಎಂಜಿನಿಯರ್ಸ್ ಸಂಘದ ಉಪಾಧ್ಯಕ್ಷ ಕೆ.ಎಂ.ಚೇತನ ಕುಮಾರ್, ಜಶವಂತ ಗೌಡ, ಸಂಘದ ಪದಾಶಿಕಾರಿಗಳು, ಸದಸ್ಯರು, ಶ್ರೀ ವಾಸ್ತುಶಿಲ್ಪ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಉಪಾಧ್ಯಕ್ಷ ಬೋಜರಾಜ್, ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

9ಕೆಟಿಆರ್.ಕೆ4ಃ

ತರೀಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ವಸಂತಕುಮಾರ್, ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ತರೀಕೆರೆ-ಅಜ್ಜಂಪುರ ತಾಲೂಕು ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಟಿ.ಯು. ವಸಂತಕುಮಾರ್, ತಾಲೂಕು ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಶನ್ ಸಂಸ್ಥಾಪಕ ಅಧ್ಯಕ್ಷ ಎಚ್.ಸಿ.ಗೋಪಾಲಕೃಷ್ಣ, ಶ್ರೀ ವಾಸ್ತುಶಿಲ್ಪ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಅಧ್ಯಕ್ಷ ಬಾಲಸುಬ್ರಮಣಿ ಆರ್.

ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಲವರ ಕೈಯಲ್ಲಿ ಮಾತ್ರ ಎಐ ಶಕ್ತಿ ಕೇಂದ್ರೀಕೃತ: ಅಂಬಾ ಕಕ್
ಮಹಿಳಾ ದೌರ್ಜನ್ಯ ತಡೆಗೆ ಕಾನೂನು ಜಾಗೃತಿ ಅಗತ್ಯ