ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ವ್ಯವಹಾರಕ್ಕೆ ಕನ್ನಡ ಬಳಸಿ
ಹಿಂದೆ ಕೆಜಿಎಫ್ ಮತ್ತು ಬಂಗಾರಪೇಟೆಯಲ್ಲಿ ಹೆಚ್ಚು ತಮಿಳು ಚಲನಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದವು. ಆಗ ಹೋರಾಟಗಳನ್ನು ಮಾಡಿದ ಹಿನ್ನೆಲೆ ಇಂದು ಕೆಜಿಎಫ್ ಮತ್ತು ಬಂಗಾರಪೇಟೆಯಲ್ಲಿ ಕನ್ನಡವನ್ನು ಉಳಿಸಲು ಸಾಧ್ಯವಾಯಿತು. ಮಕ್ಕಳು ಮನೆಗಳಲ್ಲಿ ತಮಗೆ ಇಷ್ಟ ಬಂದ ಭಾಷೆಯನ್ನು ಮಾತಾಡಿ, ಆದರೆ ವ್ಯವಹಾರಿಕವಾಗಿ, ಓದಲು ಬರೆಯಲು ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ ಎಂದರು.ಕನ್ನಡ ಗೊತ್ತಿದ್ದರೆ ಮಾತ್ರ ರಾಜ್ಯದಲ್ಲಿ ಉಳಿಗಾಲ ಇಲ್ಲದಿದ್ದರೆ ಇಲ್ಲ ಎಂಬ ವಾತಾವರಣ ನಿರ್ಮಾಣ ಮಾಡಬೇಕು. ಆಗ ಮಾತ್ರ ಕನ್ನಡವನ್ನು ಉಳಿಸಿ ಬೆಳೆಸಲು ಸಾಧ್ಯ. ಇತ್ತೀಚಿಗೆ ಬೆಂಗಳೂರಿನಲ್ಲಿ ಕನ್ನಡವನ್ನೇ ಮರೆತು ಹೋಗುತ್ತಿದ್ದಾರೆ. ಬೆಂಗಳೂರಿನ ಅನೇಕ ಬಡಾವಣೆಗಳಲ್ಲಿ ಕನ್ನಡವೇ ಇಲ್ಲದಂತಾಗಿದೆ. ಎಲ್ಲರೂ ಬೇರೆ ಬೇರೆ ಭಾಷೆಗಳನ್ನು ಬೆಳೆಸುತ್ತಿದ್ದಾರೆ. ಆದರೆ ಗಡಿ ಭಾಗಗಳಲ್ಲಿ ಕನ್ನಡಕ್ಕೆ ಧಕ್ಕೆಯಾಗದಂತೆ ಬೆಳೆಸಬೇಕು, ಅನ್ಯರಿಗೂ ಕನ್ನಡ ವ್ಯಾಮೋಹ ಮೂಡಿಸಬೇಕೆಂದರು.
ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಅಧ್ಯಕ್ಷ ನಾಗಾನಂದ ಕೆಂಪರಾಜ್ ಮಾತನಾಡಿ, ಕನ್ನಡಿಗರು ನವೆಂಬರ್ ತಿಂಗಳಿನ ಕನ್ನಡಿಗರಾಗದೆ ವರ್ಷವಿಡೀ ಕನ್ನಡಿಗಾರಬೇಕೆಂದಲ್ಲದೆ ಈಗಿನ ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತ, ಕಲೆ, ಭಾಷೆ ಬಗ್ಗೆ ಅರಿವು ಇಲ್ಲದಂತಾಗಿದೆ. ಅವರಿಗೆ ಸಾಹಿತ್ಯ ಪರಿಷತ್ ಜಾಗೃತಿ ಮೂಡಿಸುವ ಕಾರ್ಯಕ್ರಗಳನ್ನು ಹಮ್ಮಿಕೊಳ್ಳಬೇಕೆಂದು ಕರೆ ನೀಡಿದರು. ಪತ್ರಕರ್ತರಿಗೆ ಅವಕಾಶ ಇಲ್ಲ
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಗೋವಿಂದ, ಕಸಾಪ ಅಧ್ಯಕ್ಷ ಸಂಜೀವಪ್ಪ,ಸಿಆರ್‌ಪಿ ಶಶಿಕಲಾ, ಪ್ರಾಂಶುಪಾಲರಾದ ಸುಬ್ರಹ್ಮಣ್ಯ, ಮುರಳಿ, ಉಪ ಪ್ರಾಂಶುಪಾಲ ಹನುಮಂತ ವಗ್ಗರ್,ಜ್ಯೋತಿ, ಸುಜಾತಾ,ಮಂಜುನಾಥ್, ರಾಮಕೃಷ್ಣಪ್ಪ, ಆಂಜನೇಯ ಗೌಡ ಇದ್ದರು.