ಕನ್ನಡ ಅತ್ಯಂತ ಸುಂದರ, ಶ್ರೀಮಂತ ಭಾಷೆ: ಸೂರಿ ಶ್ರೀನಿವಾಸ್

KannadaprabhaNewsNetwork |  
Published : Apr 01, 2025, 12:46 AM IST
29ಕೆಕೆಡಿಯು2. | Kannada Prabha

ಸಾರಾಂಶ

ಕಡೂರು, ವಿಶ್ವದಲ್ಲಿರುವ ರೋಟರಿ ಸಂಸ್ಥೆಯ ಶಾಖೆಗಳಲ್ಲಿ ಕಡೂರು ರೋಟರಿ ಕ್ಲಬ್ ಕನ್ನಡ ಭಾಷೆ ಬಗ್ಗೆ ದತ್ತಿನಿಧಿ ಸ್ಥಾಪಿಸಿರುವುದು ವಿಶೇಷ ಮನ್ನಣೆಗೆ ಪಾತ್ರವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.

ರೋಟರಿ ಕ್ಲಬ್ ಸಹಯೋಗದೊಂದಿಗೆ ನಡೆದ ದತ್ತಿ ಉಪನ್ಯಾಸ ಕಾರ್ಯ ಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಕಡೂರು

ವಿಶ್ವದಲ್ಲಿರುವ ರೋಟರಿ ಸಂಸ್ಥೆಯ ಶಾಖೆಗಳಲ್ಲಿ ಕಡೂರು ರೋಟರಿ ಕ್ಲಬ್ ಕನ್ನಡ ಭಾಷೆ ಬಗ್ಗೆ ದತ್ತಿನಿಧಿ ಸ್ಥಾಪಿಸಿರುವುದು ವಿಶೇಷ ಮನ್ನಣೆಗೆ ಪಾತ್ರವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ರೋಟರಿ ಭವನದಲ್ಲಿ ಜಿಲ್ಲಾ ಕಸಾಪ ಮತ್ತು ರೋಟರಿ ಕ್ಲಬ್ ಸಹಯೋಗದೊಂದಿಗೆ ನಡೆದ ದತ್ತಿ ಉಪನ್ಯಾಸ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ ಅತ್ಯಂತ ಸುಂದರ ಹಾಗೂ ಶ್ರೀಮಂತ ಭಾಷೆ. ಈ ಭಾಷೆ ಶಾಶ್ವತವಾಗಿ ಉಳಿಯು ತ್ತದೆ ಎಂದು ಹೇಳಿದರು.ಚಿಕ್ಕಮಗಳೂರು ಜಿಲ್ಲಾ ಕಸಾಪ ಸಂಚಾಲಕ ಬಿ. ಎಚ್. ಸೋಮಶೇಖರ್, ಕಡೂರು ರೋಟರಿ ಕ್ಲಬ್ ನಡೆದು ಬಂದ ಬಗ್ಗೆ ಉಪನ್ಯಾಸ ನೀಡಿದರು. ರೋಟರಿ ಕ್ಲಬ್ ಸಾಮಾಜಿಕ ಸೇವೆ ಜತೆಗೆ ಬಡ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಹಾಗೂ ಪಠ್ಯೇತರ ವಿಷಯಗಳಿಗೆ ಸಂಭಂಧಿಸಿದಂತೆ ಹಲವು ಬಗೆಯ ಸಹಕಾರ ನೀಡುತ್ತಾ ಬಂದಿದೆ ಎಂದರು.ಎಲ್ಲ ದಾನಗಳಿಗಿಂತ ನೇತ್ರ ಮತ್ತು ರಕ್ತದಾನ ಪ್ರಮುಖವಾದುದ್ದೆಂದು ಭಾವಿಸಿದ್ದೇವೆ. ಈ ಎರಡಕ್ಕೂ ರೋಟರಿ ಸಂಸ್ಥೆ ಸಂಪೂರ್ಣ ಸಹಕಾರ ನೀಡುತ್ತಾ ಜನರಿಗೆ ಹತ್ತಿರವಾಗಿ ಕೆಲಸ ಮಾಡುತ್ತಿದೆ ಎಂದರು. ಜಿಲ್ಲಾ ಕಸಾಪ ಪ್ರಧಾನ ಸಂಚಾಲಕ ಇಮ್ರಾನ್ ಅಹಮದ್ ಬೇಗ್ ಸ್ವಾರ್ಥ ರಹಿತ ಸೇವೆ ಕುರಿತು ಉಪನ್ಯಾಸ ನೀಡಿ ತನ್ನ ಕಾರ್ಯ ಚಟುವಟಿಕೆಯನ್ನು ವೈಯಕ್ತಿಕವಾಗಿ ಕಾರ್ಯನಿರ್ವಹಿಸಿದರೂ ಅದನ್ನು ರೋಟರಿ ಸಂಸ್ಥೆ ಮೂಲಕ ಮಾಡಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇದಕ್ಕೆ ಕಡೂರು ರೋಟರಿ ಸಂಸ್ಥೆಗೆ ಈ ನಿವೇಶನ ನೀಡಿದ ಟಿ. ಕೆ. ದತ್ತಾತ್ರಿ ಶೆಟ್ಟಿ ಒಬ್ಬ ಶ್ರೇಷ್ಠ ದಾನಿಗಳಾಗಿ ನಿಲ್ಲುತ್ತಾರೆ. ಹಾಗೆಯೇ ಇಲ್ಲಿನ ರೋಟರಿ ಸಂಸ್ಥೆ ಸದಸ್ಯರು ತಮ್ಮ ಕೈಲಾದ ಸೇವೆಯನ್ನು ರೋಟರಿ ಸಂಸ್ಥೆ ಮೂಲಕ ಮಾಡಿ ಜನ ಮನ್ನಣೆ ಗಳಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಅನಿಲ ಚಿತಾಗಾರವನ್ನು ಸಾರ್ವಜನಿಕ ಸೇವೆಗೆ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಕಡೂರು ತಾಲೂಕು ಕಸಾಪ ಅಧ್ಯಕ್ಷ ಎಸ್. ಪರಮೇಶ್ ಮಾತನಾಡಿದರು. ರೋಟರಿ ಕ್ಲಬ್ ಅಧ್ಯಕ್ಷ ಟಿ. ಡಿ. ರಾಜನ್ , ರೋಟರಿ ಕ್ಲಬ್ ಕಾರ್ಯದರ್ಶಿ ಚಂದ್ರಪ್ಪ, ನಿಕಟಪೂರ್ವ ಕಸಾಪ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ. ಕಸಾಪ ಸಂಚಾಲಕ ಕೆ. ಪಿ. ರಾಘವೇಂದ್ರ, ಕುಪ್ಪಾಳು ಶಾಂತ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

29ಕೆಕೆಡಿಯು2.

ಕಡೂರು ಪಟ್ಟಣದ ರೋಟರಿ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ರೋಟರಿ ಕ್ಲಬ್ ಸಹಯೋಗದೊಂದಿಗೆ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ