ವೈಶಿಷ್ಟೆತೆಯಿಂದ ಎಲ್ಲ ಭಾಷೆಗಳ ತಾಯಿ ಕನ್ನಡ

KannadaprabhaNewsNetwork |  
Published : Nov 09, 2024, 01:05 AM IST
ವಿಜಯಪುರದ ಜಿಲ್ಲಾ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ರಾಜ್ಯೋತ್ಸವ  ಪ್ರಶಸ್ತಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಕನ್ನಡ ಎಲ್ಲ ಭಾಷೆಗಳ ತಾಯಿ. ನಾಡು-ನುಡಿ. ನೆಲ-ಜಲ ಸಂರಕ್ಷಣೆ ಮಾಡುವ ಕಾರ್ಯ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ಕನ್ನಡಿಗರ ನಮಗೆಲ್ಲ ಅಭಿಮಾನದ ಸಂಗತಿ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕನ್ನಡ ಎಲ್ಲ ಭಾಷೆಗಳ ತಾಯಿ. ನಾಡು-ನುಡಿ. ನೆಲ-ಜಲ ಸಂರಕ್ಷಣೆ ಮಾಡುವ ಕಾರ್ಯ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ಕನ್ನಡಿಗರ ನಮಗೆಲ್ಲ ಅಭಿಮಾನದ ಸಂಗತಿ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಹೇಳಿದರು.ನಗರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ೬೯ನೇ ರಾಜ್ಯೋತ್ಸವ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ ೫೦ರ ನಿಮಿತ್ತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಅವರು, ಎಲ್ಲ ಭಾಷೆಯಗಳಲ್ಲಿ ಕನ್ನಡ ಭಾಷೆ ತನ್ನ ವೈಶಿಷ್ಟತೆಯನ್ನು ಮೆರೆಯುವ ಮೂಲಕ ತಾಯಿ ಭಾಷೆ ಎನಿಸಿಕೊಂಡಿದೆ ಎಂದರು.

ವಿಶ್ರಾಂತ ಪ್ರಾಚಾರ್ಯ ಪಪೂ ಶಿಕ್ಷಣ ಇಲಾಖೆಯ ವಿಶ್ರಾಂತ ಉಪನಿರ್ದೇಶಕ ಎಸ್.ಎಂ.ಕಣಬೂರ ಮಾತನಾಡಿ, ಕನ್ನಡದ ಮೊಟ್ಟ ಮೊದಲ ಶಾಸನ ಹಲ್ಮಿಡಿ ಶಾಸನ ಹಿಡಿದು ಶಾತವಾಹನರು, ಕದಂಬರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು ಕನ್ನಡ ಸಾಹಿತ್ಯಕ್ಕೆ ನೀಡಿದ ಪ್ರೇರಣೆ ಸ್ಮರಿಸುತ್ತ ನಾವೆಲ್ಲ ಕನ್ನಡವನ್ನು ಹೃದಯದಿಂದ ಮಾತನಾಡಿ ಅಪ್ಪಿ ಒಪ್ಪಿಕೊಳ್ಳಬೇಕು ಎಂದರು.

ಕಸಾಪ ಗೌರವ ಸಲಹೆಗಾರರಾದ ಡಾ.ವಿ.ಡಿ ಐಹೊಳ್ಳಿ ಮಾತನಾಡಿ, ಕನಾ೯ಟಕ ಏಕೀಕರಣದಲ್ಲಿ ಆಲೂರ ವೆಂಕಟರಾಯರು, ಗಂಗಾಧರರಾವ ದೇಶಪಾಂಡೆ, ಹುಯಿಲಗೋಳ ನಾರಾಯಣರು ಮುಂತಾದವರ ಕನ್ನಡ ಸೇವೆಯನ್ನು ಬಯಸುತ್ತ ಮೈಸೂರು ರಾಜ್ಯ ಕನಾ೯ಟಕವಾದ ಸಂದರ್ಭವನ್ನು ಪರಿಚಯಿಸಿಕೊಟ್ಟರು ಎಂದರು.

ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಡಾ.ಸಂಗಮೇಶ ಮೇತ್ರಿ, ಡಾ.ಮಾಧವ ಗುಡಿ, ಸುರೇಶ ಜತ್ತಿ, ವಿಜಯಲಕ್ಷ್ಮೀ ಹಳಕಟ್ಟಿ, ಜಯಶ್ರೀ ಹಿರೇಮಠ, ರವಿ ಕಿತ್ತೂರ, ಜಿ.ಎಸ್ ಬಳ್ಳೂರ, ಶಾರದಾ ಐಹೊಳ್ಳಿ, ಭಾಗಿರತಿ ಸಿಂಧೆ, ನಂದಿನಿ ಬಿದನೂರ, ಜಗದೀಶ ಹುಲ್ಯಾಳ, ಎಸ್.ಬಿ.ಗೊಂಗಡಿ, ಯುವರಾಜ ಚೋಳಕೆ, ರೇಖಾ ಕೂಬಕಡ್ಡಿ, ಶಕುಂತಲಾ ಕಮ್ಮಾರ, ಸಂಗನಗೌಡ ಪಾಟೀಲ, ಮಲಿಕ ಹಳ್ಳೂರ, ವಿಜಯಕುಮಾರ ನಾಯಕ, ರಾಜೇಸಾಬ್‌ ಬಳಗಾರ, ಎಸ್.ಐ.ಬಿರಾದಾರ, ರಮೇಶ ಜಾಧವ, ಅಮಸಿದ್ದ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿಶೇಷೆ ಸನ್ಮಾನ ಸ್ವೀಕರಿಸಿದ ಜಿಲ್ಲಾ ನ್ಯಾಯವಾದಿಗಳ ಅಧ್ಯಕ್ಷ ಡಿ.ಜಿ ಬಿರಾದಾರ, ಗೌರವ ಕಾರ್ಯದರ್ಶಿಯಾಗಿ ಸುರೇಶ ಚೂರಿ, ಆಡಳತ ಮಂಡಳಿ ಸದಸ್ಯರಾದ ಮಹಮ್ಮದಗೌಸ್‌ ಹವಾಲ್ದಾರ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕೊಡಮಾಡು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾದ ಮಡಿವಾಳಮ್ಮ ನಾಡಗೌಡ ರಾಜೇಶ್ವರಿ ಮೋಪಗಾರ, ಸಂಗಮೇಶ ಬಿಜಾಪುರ, ಪರವೀನ ಶೇಖ, ಅರ್ಜುನ ಹಂಜಗಿ, ನಬಿಲಾಲ್‌ ಹರನಾಳ, ಬಿ.ಆರ್.ನಾಡಗೌಡ, ಮಹಮ್ಮದ್‌ ಇಕ್ಟಾಲ್‌, ಸಿದ್ದಪ್ಪ ನ್ಯಾಮಗೌಡ, ಶಿವಲೀಲಾ ಮುರಾಳ, ಚೈತನ್ಯ ಮುದ್ದೆಬಿಹಾಳ ಸಾಧಕರನ್ನು ಗೌರವಿಸಲಾಯಿತು. ಸುನಂದ ಕೋರಿ ಪ್ರಾರ್ಥಿಸಿದರು. ಸಕೀನಾ ನದಾಫ ನಿರೂಪಿಸಿದರು. ಡಾ.ಸಂಗಮೇಶ ಮೇತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ