ಕನ್ನಡ ಭಾಷೆ ಎಂದಿಗೂ ಅವಿಸ್ಮರಣೀಯ: ಕೋಟಿ

KannadaprabhaNewsNetwork |  
Published : Nov 09, 2024, 01:11 AM IST
ಕಾರ್ಯಕ್ರಮವನ್ನು ವೀರಣ್ಣ ಹಳ್ಳಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಕನ್ನಡದ ಭವ್ಯ ಇತಿಹಾಸ ತಿಳಿದುಕೊಳ್ಳಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ. ನಮ್ಮ ಭಾಷೆ, ನಮ್ಮ ಇತಿಹಾಸ ಸರಿಯಾಗಿ ತಿಳಿದುಕೊಂಡಾಗ ಮಾತ್ರ ಕನ್ನಡಕ್ಕೆ ನಾವು ಸಮರ್ಪಕವಾದ ಸ್ಥಾನಮಾನ ನೀಡಲು ಸಾಧ್ಯ

ನರೇಗಲ್ಲ: ಸಾವಿರಾರು ವರ್ಷಗಳ ಹಿನ್ನೆಲೆ ಹೊಂದಿರುವ ಕನ್ನಡ ಭಾಷೆಯು ಎಂದಿಗೂ ಅವಿಸ್ಮರಣೀಯ ಎಂದು ನಿವೃತ್ತ ಉಪನ್ಯಾಸಕ ಜಿ.ಜಿ. ಕೋಟಿ ಹೇಳಿದರು.

ಸ್ಥಳೀಯ ಶ್ರೀಅನ್ನದಾನ ವಿಜಯ ಬಾಲಿಕೆಯರ ಪ್ರೌಢಶಾಲೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡಿಗರಾದ ನಾವೇ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸದಿದ್ದರೆ ಮುಂದೊಂದು ದಿನ ಕನ್ನಡಕ್ಕೆ ಆಪತ್ತು ಬರಬಹುದು. ಆದ್ದರಿಂದ ಮಕ್ಕಳು ಈಗಿನಿಂದಲೇ ಕನ್ನಡದ ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆಯ ಅಸ್ಮಿತೆ ಏನೆಂಬುದನ್ನು ನೀವುಗಳು ತಿಳಿದಿರಬೇಕೆಂದರು.

ನಿವೃತ್ತ ಮುಖ್ಯ ಶಿಕ್ಷಕ ಎಸ್.ಎಚ್. ಅಬ್ಬಿಗೇರಿ ಮಾತನಾಡಿ, ಇಂದಿನ ದಿನಗಳಲ್ಲಿ ಕನ್ನಡಾಭಿಮಾನ ಕಡಿಮೆಯಾಗುತ್ತಿದೆ. ಇಂದಿನ ಯುವ ಪೀಳಿಗೆ ಎಲ್ಲ ವ್ಯವಹಾರಗಳಲ್ಲಿ ಕನ್ನಡತನ ಬಳಸುವ ಮೂಲಕ ಕನ್ನಡ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಮೇಲೆ ಇತರೆ ಭಾಷಿಕರ ದಬ್ಬಾಳಿಕೆ ಹೆಚ್ಚಾಗುತ್ತದೆ. ಇದನ್ನು ತಡೆಯಲು ನಾವೆಲ್ಲರೂ ಶ್ರಮಿಸಬೇಕೆಂದು ತಿಳಿಸಿದರು.

ನಿವೃತ್ತ ಶಿಕ್ಷಕ ಎಂ.ಎಸ್. ಧಡೇಸೂರಮಠ ಮಾತನಾಡಿ, ಕನ್ನಡದ ಭವ್ಯ ಇತಿಹಾಸ ತಿಳಿದುಕೊಳ್ಳಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ. ನಮ್ಮ ಭಾಷೆ, ನಮ್ಮ ಇತಿಹಾಸ ಸರಿಯಾಗಿ ತಿಳಿದುಕೊಂಡಾಗ ಮಾತ್ರ ಕನ್ನಡಕ್ಕೆ ನಾವು ಸಮರ್ಪಕವಾದ ಸ್ಥಾನಮಾನ ನೀಡಲು ಸಾಧ್ಯವಾಗುತ್ತದೆ ಎಂದರು.

ಈ ವೇಳೆ ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಮಾತನಾಡಿದರು.ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ವೀರಣ್ಣ ಹಳ್ಳಿ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಮಲ್ಲಿಕಾರ್ಜುನಪ್ಪ ಮೆಣಸಗಿ, ನಿಂಗನಗೌಡ ಲಕ್ಕನಗೌಡ್ರ, ಷಣ್ಮುಖಪ್ಪ ಸಿದ್ನೆಕೊಪ್ಪ, ಮುಖ್ಯ ಶಿಕ್ಷಕ ಎಸ್.ಎನ್. ಹೂಲಗೇರಿ, ಬಿ.ಡಿ. ಯರಗೊಪ್ಪ, ಸರೋಜಾ ಧರ್ಮಾಯತ, ಎಸ್. ಶಿವಮೂರ್ತಿ, ಎಂ.ಎಸ್. ಅತ್ತಾರ, ಆರ್.ಎಂ. ಗುಳಬಾಳ, ವೀರೇಶ ಚುಳಕಿ, ಸಂಗಮೇಶ ಕುರುಡಗಿ ಸೇರಿದಂತೆ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ