ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ಜೈಕನ್ನಡಾಂಬೆ ಯುವಕರ ಬಳಗದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕರ್ನಾಟಕ ರಾಜ್ಯ ಉದಯವಾಗಿ 69ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಂಭ್ರಮದಿಂದ ಎಲ್ಲರೂ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿದ್ದಾರೆ ಎಂದರು.
ಕನ್ನಡ ರಾಜ್ಯೋತ್ಸವ ಸಮಾರಂಭಗಳು ಕೇವಲ ನವೆಂಬರ್ ತಿಂಗಳಿಗೆ ಸೀಮಿತಗೊಳ್ಳಬಾರದು. ಕನ್ನಡಾಂಬೆಯೂ ನಾಡ ದೇವತೆಯಾಗಿರುವುದರಿಂದ ನಿತ್ಯ ಉತ್ಸವದಂತೆ ಕನ್ನಡ ರಾಜ್ಯೋತ್ಸವವನ್ನು ವರ್ಷವಿಡೀ ಆಚರಣೆ ಮಾಡುವ ಮೂಲಕ ಭಾಷೆ ಬೆಳವಣಿಗೆಗೆ ಶ್ರಮಿಸಬೇಕು ಎಂದರು.ಯುವ ಜನತೆ ಕನ್ನಡ ಭಾಷೆಯಲ್ಲಿ ವ್ಯವಹರಿಸಿ ಸಹಿ ಮಾಡಬೇಕು, ಸಂಕಲ್ಪ ಮಾಡಬೇಕು. ಜತೆಗೆ ನಮ್ಮೂರಿನ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕು. ಕನ್ನಡದ ಸರಕಾರಿ ಶಾಲೆಗಳು ಉಳಿದರೆ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯ ಎಂದು ಹೇಳಿದರು.
ತಾಪಂ ಮಾಜಿ ಸದಸ್ಯೆ ಮಂಗಳ ನವೀನ್‌ಕುಮಾರ್ ಮಾತನಾಡಿ, ಕರ್ನಾಟಕದ ಏಕೀಕರಣದ ನೆನಪಿಗಾಗಿ ನಾವು ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಿದ್ದೇವೆ. ಕನ್ನಡ ನಾಡು- ನುಡಿ, ಸಾಹಿತ್ಯದ ಬಗ್ಗೆ ಪ್ರತಿಯೊಬ್ಬ ಕನ್ನಡಿಗನೂ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯಶಿಕ್ಷಕ ಪಾರ್ವತಮ್ಮ ಮಾತನಾಡಿದರು. ಸರಕಾರಿ ಶಾಲೆಯ ಮಕ್ಕಳು ನಾಡಗೀತೆ ಹಾಡಿದರು. ಈ ವೇಳೆ ಡೇರಿ ಮಾಜಿ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ಪಾಪಯ್ಯ, ಶಿಕ್ಷಕ ಪ್ರದೀಪ್, ಬಿಜೆಪಿ ಮುಖಂಡ ನವೀನ್, ಸಿ.ಆರ್.ಸಂತೋಷ್, ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ, ಗೋಪಿ, ದೊಡ್ಡಯ್ಯ, ಜೈಕನ್ನಡಾಂಬೆ ಬಳಗದ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಯೋಗೇಶ್, ಕಾರ್‍ಯದರ್ಶಿ ಕಿರಣ್, ಖಜಾಂಚಿ ಚನ್ನೇಗೌಡ, ಪದಾಧಿಕಾರಿ ವಿನಯ್, ವೀರಭದ್ರಾಚಾರಿ, ಶ್ರಾವಣ್, ವೀರಭದ್ರ ಸೇರಿದಂತೆ ಹಲವರು ಇದ್ದರು.