ವಿಕಲಚೇತನರ ಹಕ್ಕುಗಳು, ಸರ್ಕಾರಿ ಸೌಲಭ್ಯಗಳ ಕೃತಿ ಲೋಕಾರ್ಪಣೆಗೊಳಿಸಿದ ಶಾಸಕ ದೇವೇಂದ್ರಪ್ಪ
ನಾಡು ನುಡಿ ವಿಚಾರವಾಗಿ ಇಲ್ಲಿ ಕನ್ನಡ ಸಂಘಟನೆಗಳು ಜನ್ಮ ತಾಳುತ್ತಿದೆ. ಸಂಘಟನೆಗಳ ಹೆಸರು ಬೇರೆ. ಆದರೆ ನಮ್ಮ ನಿಮ್ಮೆಲ್ಲರ ಹೋರಾಟ ಒಂದೇ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ನಡೆದ ನಮ್ಮ ಕರ್ನಾಟಕ ಸೇನೆಯ ಪದಾಧಿಕಾರಿಗಳಿಗೆ ಪದಗ್ರಹಣ ಹಾಗೂ ವಿಶೇಷ ಚೇತನರಿಗೆ ಸಾಧನ ಸಲಕರಣೆಗಳ ವಿತರಣೆ ಹಾಗೂ ವಿಕಲಚೇತನರ ಹಕ್ಕುಗಳು ಮತ್ತು ಸರ್ಕಾರಿ ಸೌಲಭ್ಯಗಳ ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ಕನ್ನಡಕ್ಕೆ 5 ಸಾವಿರ ವರ್ಷ ಇತಿಹಾಸವಿರುವ ಕುರಿತು ಆಧಾರಗಳು ಸಿಕ್ಕಿವೆ. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿದ್ದು, ಹಲವಾರು ಕನ್ನಡ ನಟರು ಕನ್ನಡದ ಉಳಿವಿಗೆ ಹೋರಾಟ ಮಾಡಿದ್ದಾರೆ. ದೇಶಾಭಿಮಾನ ಹಾಗೂ ರಾಜ್ಯಾಭಿಮಾನವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಕನ್ನಡದ ಉಳಿವಿಗಾಗಿ ನಾವೆಲ್ಲ ಎಚ್ಚರದಿಂದ ಇರಬೇಕು ಎಂದು ತಿಳಿಸಿದರು.ನಮ್ಮ ಕನ್ನಡ ಸೇನೆ ರಾಜ್ಯಾಧ್ಯಕ್ಷ ಎಂ.ಬಸವರಾಜ್ ಪಡುಕೋಟೆ ಮಾತನಾಡಿ ಡಾ. ಸರೋಜಿನಿ ಮಹರ್ಷಿ ಹೋರಾಟ ಮಾಡಲಾಗುತ್ತಿದೆ, ಈ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು. ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದೇವೆ. ರೈಲ್ವೆ ಉದ್ಯೋಗದಲ್ಲಿ ಮೊದಲು ಹಿಂದಿ ಭಾಷೆಯಲ್ಲಿ ಪರೀಕ್ಷೆ ಬರೆದಿದ್ದರು. ನಮ್ಮ ಹೋರಾಟ ಫಲವಾಗಿ ಇಂದು ಕನ್ನಡದಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಕನ್ನಡದ ಉಳಿಯುವುದಾಗಿ ಎಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದರು.
ಪೋಟೋ: 13 ಜೆ.ಜಿ.ಎಲ್.1
ಜಗಳೂರು ಪಟ್ಟಣದ ವಾಲ್ಮೀಕಿ ಭವನದಲ್ಲಿ ನಡೆದ ನಮ್ಮ ಕರ್ನಾಟಕ ಸೇನೆಯ ಪದಾಧಿಕಾರಿಗಳಿಗೆ ಪದಗ್ರಹಣ ಹಾಗೂ ವಿಶೇಷ ಚೇತನರಿಗೆ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮವನ್ನು ಶಾಸಕ ಶಾಸಕ ಬಿ.ದೇವೇಂದ್ರಪ್ಪ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.