ಅಭಿವೃದ್ದಿ ವಿಚಾರದಲ್ಲಿ ಕನ್ನಡ ಪರ ಸಂಘಟನೆಗಳು ಸರ್ಕಾರದೊಂದಿಗೆ ನಿಲ್ಲಲಿ: ಸಚಿವ ಡಾ.ಎಚ್.ಸಿ. ಮಹದೇವಪ್ಪ

KannadaprabhaNewsNetwork |  
Published : Dec 05, 2024, 12:32 AM IST
24 | Kannada Prabha

ಸಾರಾಂಶ

ಹಾಸ್ಯ ಕಲಾವಿದರಿಂದ ಮನರಂಜನಾ ಕಾರ್ಯಕ್ರಮ, ಜೂನಿಯರ್ ರಾಜ್ಕುಮಾರ್, ಜೂನಿಯರ್ ವಿಷ್ಣುವರ್ಧನ್, ಚಲನಚಿತ್ರ ನಟಿ ರೇಖಾದಾಸ್ ಜೂನಿಯರ್ ಮಾಲಶ್ರೀ, ಡಿಂಗ್ರಿ ನಾಗರಾಜ್ ಸೇರಿದಂತೆ ವಿವಿಧಕಿರುತೆರೆ ಕಲಾವಿದರು ಮನರಂಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಕನ್ನಡಪ್ರಭ ವಾರ್ತೆ ಮೈಸೂರುಅಭಿವೃದ್ದಿ ವಿಚಾರದಲ್ಲಿ ಕನ್ನಡ ಪರ ಸಂಘಟನೆಗಳು ಸರ್ಕಾರದೊಂದಿಗೆ ಗಟ್ಟಿಯಾಗಿ ನಿಲ್ಲಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.ನಗರದ ಹೂಟಗಳ್ಳಿ ಸಂತೆಮಾಳ ಮೈದಾನದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಕನ್ನಡಾಂಬೆ ಹಬ್ಬ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಕನ್ನಡಾಂಬೆ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ಹಿರಿಯರ ಹೋರಾಟದ ಫಲವಾಗಿ ವಿಶಾಲ ಕರ್ನಾಟಕ ಉದಯವಾಗಿದೆ. ದೇಶದ ಅಭಿವೃದ್ದಿಯಲ್ಲಿ ಕರ್ನಾಟಕ ಪಾಲು ಇದೆ. ಸರ್ಕಾರದ ಆಡಳಿತದಲ್ಲಿ ಕನ್ನಡವೇ ಪ್ರಧಾನವಾಗಿದೆ ಎಂದರು.ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಕನ್ನಡ ನಿರ್ಲಕ್ಷಿಸಿ ನಿರಾಭಿಮಾನಿಗಳಾಗಬೇಡಿ, ಕನ್ನಡಿಗರು ಉದ್ಯೋಗ ವ್ಯವಹಾರಿಕವಾಗಿ ಇಂಗ್ಲೀಷ್ ಸೇರಿದಂತೆ ಇತರೆ ಭಾಷೆಗಳನ್ನು ಕಲಿಯುವುದು ಅನಿವಾರ್ಯ. ಹಾಗಂತ ಕನ್ನಡ ಭಾಷೆಯನ್ನು ನಿರ್ಲಕ್ಷಿಸಿ ನಿರಾಭಿಮಾನಿಗಳಾಗಬೇಡಿ ಎಂದು ಕಿವಿಮಾತು ಹೇಳಿದರು.ಬಿಜೆಪಿ ಮುಖಂಡ ವಿ. ಕವೀಶ್ ಗೌಡ ಮಾತನಾಡಿ, ಇತ್ತೀಚೆಗೆ ಮೈಸೂರಿನಲ್ಲಿ ವಿವಿಧ ಎಂ.ಎನ್.ಸಿ ಕಂಪನಿಗಳು ಸ್ಥಾಪಿತವಾಗಿರುವುದು ಸ್ವಾಗತಾರ್ಹ. ಆದರೆ ಈ ಕಂಪನಿಗಳು ಸ್ಥಳಿಯರಿಗೆ ಕೆಲಸ ನೀಡುವಲ್ಲಿ ಮೀನಾಮೇಷ ಎಣಿಸುತ್ತಿವೆ. ಇದನ್ನು ತಪ್ಪಿಸಲು ಸ್ಥಳಿಯರಿಗೆ ಶೇ. 80ರಷ್ಟು ಉದ್ಯೋಗ ನೀಡುವಂತಹ ಕಾನೂನು ಜಾರಿ ತರಬೇಕು ಎಂದರು.ಬೆಂಗಳೂರು ಜಯದೇವ ಆಸ್ಪತ್ರೆ ವೈದ್ಯ ಡಾ. ನಟರಾಜ್ ಶೆಟ್ಟಿ, ಪತ್ರಕರ್ತ ರಾಘವೇಂದ್ರ, ಕೆ.ಆರ್. ನಗರ ತಾಲ್ಲೂಕು ಆಸ್ಪತ್ರೆ ವೈದ್ಯ ಡಾ. ಗೌತಮ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿರುವ ವಿಹಿಕ ಅವರಿಗೆ ಶಾಸಕ ಜಿ.ಟಿ. ದೇವೇಗೌಡ ಕನ್ನಡಾಂಬೆ ರತ್ನ ಪ್ರಶಸ್ತಿ ನೀಡಿದರು. ಕನ್ನಡಾಂಬೆ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ರಾಜಶೇಖರ್ ಮಾತನಾಡಿದರು.ಹೂಟಗಳ್ಳಿ ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆ ಹಿನಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೂರ್ಗಳ್ಳಿ ವಾಸವಿ ಕಾನ್ವೆಂಟ್, ನೋಟರಿ ಶಾಲೆ, ಬೆಳವಾಡಿಯ ಹಿರಿಯ ಪ್ರಾಥಮಿಕ ಶಾಲೆ ಇಲವಾಲ ಮತ್ತು ಬೆಳವಾಡಿಯಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ನಂತರ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿ ವಿದ್ಯಾಥಿನಿಯರಿಗೆ ಬಹುಮಾನ ವಿತರಿಸಲಾಯಿತು. ಹಾಸ್ಯ ಕಲಾವಿದರಿಂದ ಮನರಂಜನಾ ಕಾರ್ಯಕ್ರಮ, ಜೂನಿಯರ್ ರಾಜ್ಕುಮಾರ್, ಜೂನಿಯರ್ ವಿಷ್ಣುವರ್ಧನ್, ಚಲನಚಿತ್ರ ನಟಿ ರೇಖಾದಾಸ್ ಜೂನಿಯರ್ ಮಾಲಶ್ರೀ, ಡಿಂಗ್ರಿ ನಾಗರಾಜ್ ಸೇರಿದಂತೆ ವಿವಿಧಕಿರುತೆರೆ ಕಲಾವಿದರು ಮನರಂಜನಾ ಕಾರ್ಯಕ್ರಮವನ್ನು ನೆಡಸಿಕೊಟ್ಟರು. ಶಾಸಕ ಕೆ. ಹರೀಶ್ ಗೌಡ, ಎಸ್. ರವಿ, ಪವನ್ ಜೋಷಿ, ಎಂ.ಪಿ. ವರ್ಷ, ಕೂರ್ಗಳ್ಳಿ ಮಹದೇವ್, ರಾಷ್ಟ್ರೀಯ ಕುಸ್ತಿಪಟು ಮಂಜುನಾಥ್ ಸಿಂಗ್, ಆತ್ಮಾನ್ ವೆಲ್ ನೆಸ್ ಸೆಂಟರ್ ಸತೀಶ್, ಸಿದ್ದರಾಜು, ಲಲಿತಾ ನಾಗೇಶ್, ಕನ್ನಡಾಂಬೆ ರಕ್ಷಣಾ ವೇದಿಕೆಯ ಖಜಾಂಚಿ ನಂಜುಂಡ, ಜಿಲ್ಲಾಧ್ಯಕ್ಷೆ ಮಂಜುಳ, ಅಜಯ್ ಶೆಟ್ಟಿ, ಸಂತೋಷ್, ಸಿ.ಎಂ. ರಾಮು, ಲೋಕೇಶ್ ಇದ್ದರು.

PREV

Recommended Stories

ಶಿವಯೋಗಿ ಸೊಸೈಟಿಗೆ 20.97 ಲಕ್ಷ ಲಾಭ
ಯುವಜನತೆಗೆ ರಕ್ತದಾನದ ಮಹತ್ವ ತಿಳಿಸಿಕೊಡಿ