ಕನ್ನಡ ಕಾವ್ಯ ಪರಂಪರೆ ಶ್ರೀಮಂತ: ಡಿ.ವಿ. ಬಡಿಗೇರ

KannadaprabhaNewsNetwork |  
Published : Oct 01, 2025, 01:00 AM IST
ಕಾರ್ಯಕ್ರಮದಲ್ಲಿ ಸಾಹಿತಿ ಡಿ.ವಿ. ಬಡಿಗೇರ ಮಾತನಾಡಿದರು. | Kannada Prabha

ಸಾರಾಂಶ

ಕನ್ನಡ ಕಾವ್ಯ ಪರಂಪರೆ ಶ್ರೀಮಂತವಾಗಿದ್ದು, ಅದನ್ನು ಇಂದಿನ ಕವಿಗಳಿಗೆ ಓದುವ ಮೂಲಕ ತಮ್ಮ ಜ್ಞಾನವನ್ನು ವಿಸ್ತರಿಸಿಕೊಂಡು ಕವಿತೆಗಳನ್ನು ಬರೆದಾಗ ಮೌಲ್ಯ ಹೆಚ್ಚಾಗುತ್ತದೆ.

ಗದಗ: ಸಮಾಜದಲ್ಲಿ ಸಾಹಿತಿಯಾದವನಿಗೆ ಜವಾಬ್ದಾರಿ ಅಧಿಕವಾಗಿದೆ. ಸಮಾಜದ ಓರೆಕೋರೆಗಳನ್ನು ತನ್ನ ಕಾವ್ಯದ ಮೂಲಕ ತಿದ್ದುವ ಕಾರ್ಯವನ್ನು ಕವಿ ಮಾಡಬೇಕು. ಸಂಕಟಗಳನ್ನು ಕವಿತೆಗಳು ಧ್ವನಿಸಬೇಕು. ಈ ಹಿನ್ನೆಲೆ ಬರಹಗಾರನಿಗೆ ಬದ್ಧತೆ ಮತ್ತು ಸಾಮಾಜಿಕ ಕಳಕಳಿ ಅಗತ್ಯ ಎಂದು ಹಿರಿಯ ಸಾಹಿತಿ ಡಿ.ವಿ. ಬಡಿಗೇರ ತಿಳಿಸಿದರು.

ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಕೆಎಲ್ಇ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವತಿಯಿಂದ ಜರುಗಿದ ಜಿಲ್ಲಾ ಮಟ್ಟದ ದಸರಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಕಾವ್ಯ ಪರಂಪರೆ ಶ್ರೀಮಂತವಾಗಿದ್ದು, ಅದನ್ನು ಇಂದಿನ ಕವಿಗಳಿಗೆ ಓದುವ ಮೂಲಕ ತಮ್ಮ ಜ್ಞಾನವನ್ನು ವಿಸ್ತರಿಸಿಕೊಂಡು ಕವಿತೆಗಳನ್ನು ಬರೆದಾಗ ಮೌಲ್ಯ ಹೆಚ್ಚಾಗುತ್ತದೆ ಎಂದರು.ಪ್ರಾ. ಡಾ. ಎ.ಕೆ. ಮಠ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಸಾಹಿತ್ಯ, ಸಂಸ್ಕೃತಿ ಕುರಿತಾಗಿ ಆಸಕ್ತಿ ಕಡಿಮೆಯಾಗುತ್ತಿದ್ದು, ಇಂತಹ ಕಾರ್ಯಕ್ರಮಗಳು ಸೃಜನಶೀಲ ಅಭಿವ್ಯಕ್ತಿ ಪ್ರೇರಣೆಯನ್ನು ಒದಗಿಸಲಿ ಎಂದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಸಾಹಿತಿ ಜನಪರ ಮತ್ತು ಜೀವಪರ ಆಶಯಗಳನ್ನು ಇಟ್ಟುಕೊಂಡು ಬರವಣಿಗೆಯಲ್ಲಿ ತೊಡಗಬೇಕು. ಪ್ರಜಾಪ್ರಭುತ್ವ ಮೌಲ್ಯಗಳನ್ನು ಕವಿ ಮತ್ತು ಕಾವ್ಯ ಒಳಗೊಂಡಿರಬೇಕು. ಧಾವಂತದಲ್ಲಿ ಸೃಷ್ಟಿಸುವ ಕಾವ್ಯ ಬಹುಕಾಲ ನಿಲ್ಲುವುದಿಲ್ಲ ಎಂದರು.ಕವಿಗೋಷ್ಠಿಯಲ್ಲಿ ಆರ್.ಎಸ್. ಪಾಟೀಲ, ಮಾಂತೇಶ ಅಕ್ಕೂರ, ಭುವನೇಶ್ವರಿ ಅಂಗಡಿ, ಐ.ಬಿ. ಒಂಟೇಲಿ, ಜಯಶ್ರೀ ಪಟ್ಟಣಶೆಟ್ಟಿ, ಕಳಕಪ್ಪ ಜಲ್ಲಿಗೇರಿ, ಎಸ್.ಎಸ್. ಪೂಜಾರ, ಶಿವಾನಂದ ಹುನಗುಂಡಿ, ಚೈತ್ರಾ ಯಾಳಗಿ, ಬಿ.ಎಸ್. ಹಿಂಡಿ, ವಿರುಪಮ್ಮ ಹಿರೇಮಠ, ಕಸ್ತೂರಿ ಕಡಗದ, ಈರಮ್ಮ ಕುಂದಗೋಳ, ಸ್ವರಾ ಬೀರನೂರ, ಮೇಘಾ ಬೆಳದಡಿ, ಹುಚ್ಚೀರಪ್ಪ ಈಟಿ, ವಿಶ್ವನಾಥ ಆದಿ, ನೀಲಪ್ಪ ಐಹೊಳಿ, ವಿಜಯಲಕ್ಷ್ಮೀ ಪಾಗದ, ಈರಣ್ಣ ಹೂಗಾರ, ಸಂತೋಷ ಚಿಜ್ಜೇರಿ, ಪ್ರೇಮಾ ಶಿರಹಟ್ಟಿ, ಯಶವಂತ ಬಿಷ್ಟಕ್ಕನವರ, ಅನ್ನಪೂರ್ಣ ಕುರಿ, ರುಕ್ಸಾರ್ ಕೊಪ್ಪಳ, ಜಿ.ಎನ್. ಪಾಟೀಲ, ವಿಜಯಲಕ್ಷ್ಮೀ ಬಂಡಿವಾಡ, ಸಂಗೀತಾ ಪೂಜಾರ, ಶೃತಿ ಅಳಗೋಡಿ, ಪ್ರೇರಣಾ ಅಂಗಡಿ, ಲಕ್ಷ್ಮೀ ಕೆ., ನಿಖಿತಾ ಜೆ. ಮೊದಲಾದವರು ಕವನ ವಾಚಿಸಿದರು.ಈ ವೇಳೆ ಸಾಹಿತಿ ಡಿ.ವಿ. ಬಡಿಗೇರ ಅವರನ್ನು ಸನ್ಮಾನಿಸಲಾಯಿತು. ಅನ್ನದಾನಿ ಹಿರೇಮಠ, ಬಸವರಾಜ ಗಣಪ್ಪನವರ, ಸಿ.ಎಂ. ಮಾರನಬಸರಿ, ಬಸವರಾಜ ವಾರಿ, ವಿಠ್ಠಲ ಕೋಳಿ, ರಾಮಚಂದ್ರ ಪಡೇಸೂರ, ನಿಂಗಮ್ಮ ಗದಗ, ಶಶಿಕಾಂತ ಕೊರ್ಲಹಳ್ಳಿ, ಅಮರೇಶ ರಾಂಪೂರ, ಆರ್.ಡಿ. ಕಪ್ಪಲಿ ಮೊದಲಾದವರು ಇದ್ದರು.ಡಾ. ಅಂದಯ್ಯ ಅರವಟಗಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಡಿ.ಎಸ್. ಬಾಪುರಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ