ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಹಮಿಕೊಂಡಿದ್ದ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು. ಈ ಚಿತ್ರಕಲೆಯ ಧ್ಯೇಯ ಕರ್ನಾಟಕ ಅರಣ್ಯ ಅಥವಾ ಕರ್ನಾಟಕ ವನ್ಯ ಜೀವಿಗಳ ಸಂರಕ್ಷಣೆ ಕೇವಲ ಚಿತ್ರಕ್ಕೆ ಸೀಮಿತಗೊಳಿಸದೆ ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.ಅರಣ್ಯ ಇಲಾಖೆಯು ಸಾಮಾಜಿಕ ಬದ್ಧತೆ ಇರುವ ವ್ಯಕ್ತಿಗಳನ್ನು ಪ್ರಶ್ನಿಸುವಂತಾಬೇಕಿದೆ. 1947ರ ಇತಿಹಾಸ ಪುಟ ತಿರುವಿದಾಗ ನಮ್ಮ ದೇಶದಿಂದ ಸಾಗವಾನಿ, ಗಂಧ, ತೇಗ ವಿದೇಶಗಳಿಗೆ ರಪ್ತು ಆಗುತ್ತಿತ್ತು. ಜಿಡಿಪಿ ದರ ಸಹ ಜಾಸ್ತಿ ಇತ್ತು. ಇಂದು ನಾವು ಭಾರತವು ವಿಶ್ವಗುರುವಾಗಲು ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಾವೆಲ್ಲರೂ ಸಾಮಾಜಿಕ ಬದ್ಧತೆ ಮೆರೆದಾಗ ಮಾತ್ರ ಸಾಧ್ಯ ಎಂದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಆಡಳಿತ) ವೀರಯ್ಯ ಸಾಲಿಮಠ ಅವರು ಮಾತನಾಡಿ, ಮನುಷ್ಯ ಭಾವಜೀವಿ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಚಿತ್ರಕಲೆ ಒಳ್ಳೆಯ ವೇದಿಕೆಯಾಗಿದೆ. ಅವಕಾಶ ಬಳಸಿಕೊಂಡು ಸತತ ಪ್ರಯತ್ನದಿಂದ ನೀವು ಸಾಧನೆ ಮಾಡಲು ಸಾಧ್ಯ. ಅನಾದಿ ಕಾಲದಿಂದಲೂ ಅಜಂತಾ ಎಲ್ಲೋರಾ ಹಾಗೂ ಅಶೋಕ ಸಾಮ್ರಾಟನ ಕಾಲದಲ್ಲಿ ಚಿತ್ರಕಲೆ ಬಿಡಿಸುವ ಮೂಲಕ ದೇಶದ ಕಿರ್ತಿ ಹೆಚ್ಚಿಸಿದೆ ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿ ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಬಿ.ಕುಸನಾಳ ಮಾತನಾಡಿ, ಇಂತಹ ಚಿತ್ರಕಲಾ ಸ್ಪರ್ಧೆ ಶೈಕ್ಷಣಿಕ ಕ್ಷೇತ್ರದಲ್ಲಿ ಸ್ಪರ್ಧಾತ್ಮಕವಾಗಿ ಬೆಳೆಯಲು ಪ್ರೇರಣೆ, ಪ್ರೋತ್ಸಾಹ ಸಿಗಲು ಅವಕಾಶ ನೀಡುತ್ತದೆ. ಸ್ಪರ್ಧಿಗಳಿಗೆ ಪ್ರೇರಣೆ ನೀಡುವುದು ಬಹಳ ಮುಖ್ಯ. ಸುದ್ದಿ ಸಂಸ್ಥೆಗಳು ಇಂತಹ ಕೆಲಸಗಳನ್ನು ಮಾಡಿದರೆ ಹೆಚ್ಚು ಪ್ರಚಾರ ಸಿಗಲು ಸಾಧ್ಯ. ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಮಕ್ಕಳಿಂದ ಚಿತ್ರಕಲೆ ತೆಗೆಸಿ ಅವರ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಚಿತ್ರಕಲೆಯನ್ನು ವಿಶ್ಲೇಷಣೆ ಮಾಡಿದಾಗ ಮಾತ್ರ ತಮ್ಮ ತಮ್ಮ ಅರಿವು ಆಗುತ್ತದೆ. ಜಗತ್ತಿನಲ್ಲಿರುವ ಎಲ್ಲ ಕಲೆಗಳಲ್ಲಿ ಚಿತ್ರಕಲೆಯೂ ಶ್ರೇಷ್ಠ. ಜಗತ್ತಿನಲ್ಲಿ ಒಂದೊಂದು ಚಿತ್ರಕಲೆ ಬಹುದೊಡ್ಡ ಬೆಲೆ ಮಾರಾಟ ಆಗಿರುವುದನ್ನು ನೋಡುತ್ತೇವೆ. ಲಿಯೋರ್ಡಾ ವಿಂಚಿ ಬರೆದ ಚಿತ್ರ 2017 ರಲ್ಲಿ ₹3,700 ಕೋಟಿ ಮಾರಾಟ ಆಗಿರುವುದನ್ನು ನೋಡಿದರೆ ಚಿತ್ರಕಲೆ ಎಷ್ಟು ಬೆಲೆ ಇದೆ ಅರಿತುಕೊಳ್ಳಬಹುದು. ಭಾರತದಲ್ಲಿ ಎಂ.ಎಫ್.ಹುಸೇನ ಅವರ ಬರೆದ ಚಿತ್ರ ₹118 ಕೋಟಿಗೆ, ಅಮೃತ್ ಶೌರ ಅವರ ಚಿತ್ರ ₹61 ಕೋಟಿಗೆ ಮಾರಾಟ ಆಗಿದೆ ಎಂದರು.
ಹಲವಾರು ಕನಸುಗಳನ್ನು ಕಾಣುತ್ತಿರುವ ವಿದ್ಯಾರ್ಥಿಗಳ ಜೀವನದಲ್ಲಿ ಯಾವಾಗ ಯಾವ ಬದಲಾವಣೆ ಆಗುತ್ತದೆ ಎಂಬುದು ಗೊತ್ತಿಲ್ಲ. ಸತತ ಪ್ರಯತ್ನ ಮಾಡಿದರೆ ಏನಾದರೂ ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ನಮ್ಮ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದ ರಾಜೇಶ್ವರಿ ಗಾಯಕವಾಡ ಸಾಕ್ಷಿಯಾಗಿ ನಮ್ಮ ಮುಂದೆ ನಿಲ್ಲುತ್ತಾಳೆ ಎಂದರು. ತಮ್ಮ ಮಕ್ಕಳ ಕನಸು ನನಸು ಮಾಡಬೇಕಾದರೆ ಪಾಲಕರು ತಮ್ಮ ಜವಾಬ್ದಾರಿ ಮೀರಿ ಅವರ ಕನಸು ಈಡೇರಿಸಲು ಮುಂದಾಗಬೇಕು. ಅವರಲ್ಲಿರುವ ಕೌಶಲ್ಯ ಗುರುತಿಸಿ ಪ್ರೋತ್ಸಾಹ ನೀಡಬೇಕು. ತಮಗೆ ಸಿಗುವ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡರೆ ತಮ್ಮ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರು.
ಡಾ.ಬಾಬುರಾಜೇಂದ್ರ ನಾಯಿಕ, ಖ್ಯಾತ ಮಧುಮೇಹ ತಜ್ಞಜಿಲ್ಲೆಯ ವಿವಿಧ ತಾಲೂಕುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು, ಆ ತಾಲೂಕಿಗೆ ಅಗ್ರಗಣ್ಯರು ನೀವು. ಚಿತ್ರಕಲೆ ಒಂದು ಮಾಧ್ಯಮವಾಗಿ ತೆಗೆದುಕೊಳ್ಳುವ ಮೂಲಕ ನಿಮ್ಮ ಪ್ರತಿಭೆ ಅನಾವರಣಗೊಳಿಸಿದ್ದು ಈ ನಿಟ್ಟಿನಲ್ಲಿ ಕನ್ನಡಪ್ರಭ ಹಾಗೂ ಸುವರ್ಣ ವಾಹಿನಿ ಮಾಡುತ್ತಿದೆ.
ಎಂ.ಬಿ.ಕುಸನಾಳ, ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಮಕ್ಕಳಲ್ಲಿರುವ ಸೃಜನಶೀಲತೆ ಗುರುತಿಸಬೇಕು. ಮಕ್ಕಳು ಚಿತ್ರಕಲೆಯನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಒಳ್ಳೆಯ ಗುಣ ಬೆಳೆಸಿಕೊಳ್ಳಬೇಕು. ಅವರಲ್ಲಿ ಕ್ರಿಯಾಶೀಲತೆ ಇರಬೇಕು. ಒಳಮನಸ್ಸು ಇರಬೇಕು. ಚಿತ್ರ ಭಾವನೆಗಳನ್ನು ತಟ್ಟುವಂತೆ ಇರಬೇಕು. ಚಿತ್ರ ಬರೆಯಲು ತಾಳ್ಮೆಗುಣ ಅಳವಡಿಸಿಕೊಳ್ಳು ವಂತಾಗಬೇಕು. ಅಂದಾಗ ಒಳ್ಳೆಯ ಕಲಾವಿದರಾಗಲು ಸಾಧ್ಯ.
ಡಾ.ಅಶೋಕಕುಮಾರ ಜಾಧವ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ದೈಹಿಕ ನಿರ್ದೇಶಕ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವ ಮತ್ತು ಸಮಾಜಕ್ಕೆ ತೋರಿಸುವ ಕಾರ್ಯ ಪತ್ರಿಕೆಯಿಂದ ನಡೆಯುತ್ತಿರುವುದು ನಮ್ಮ ಹೆಮ್ಮೆಯಾಗಿದೆ. ಜಿಲ್ಲಾ ಮಟ್ಟದ ಪ್ರೌಢಶಾಲಾ ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲಿ ಎಲ್ಲಾ ಮಕ್ಕಳು ಚೆನ್ನಾಗಿ ತಮ್ಮ ಕಲ್ಪನಾ ಶಕ್ತಿಯನ್ನು ಸೃಜನಾತ್ಮಕವಾಗಿ ಬಳಸಿಕೊಂಡಿದ್ದಾರೆ ಆ ಮಕ್ಕಳಿಗೆ ಶುಭವಾಗಲಿ.