ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪಟ್ಟಣದ ಮುಡಿಗುಂಡ ಸಮೀಪದಲ್ಲಿರುವ ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿಗಳಿಗಾಗಿ ಕನ್ನಡಪ್ರಭ ಪತ್ರಿಕೆ ಚಿತ್ರಕಲಾ ಮತ್ತು ಪ್ರಬಂಧ ಸ್ಪರ್ಧೆ ಅಯೋಜಿಸಲಾಗಿತ್ತು. ಚಿತ್ರಕಲಾ ಸ್ಪರ್ಧೆ ವಿಭಾಗದಲ್ಲಿ 8ನೇ ತರಗತಿ ಬಿ. ವಿಭಾಗದ ಪಿ. ಶ್ರವ್ಯ (ಪ್ರಥಮ), 8ನೇ ತರಗತಿ ಎ ವಿಭಾಗದ ಎಸ್. ಆರ್.ಲಾಲಿತ್ಯ (ದ್ವೀತಿಯ), 9ನೇ ತರಗತಿ ಬಿ, ವಿಭಾಗದ ಕೆ.ಎಂ ಯುಕ್ತ ಜೈಶ್ರೀ (ತೃತೀಯ) ಹಾಗೂ 6ನೇ ತರಗತಿ ಬಿ ವಿಭಾಗದ ಪಿ. ಎಸ್. ಶ್ರೀಲಕ್ಷ್ಮಿ (ಸಮಾಧಾನಕರ ) ಬಹುಮಾನಗಳಿಸಿದ್ದಾರೆ. ಅದೇ ರೀತಿಯಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ 8ನೇತರಗತಿ ಬಿ ವಿಭಾಗದ ಪಿ. ಶ್ರವ್ಯ (ಪ್ರಥಮ), 10ನೇ ತರಗತಿ ಬಿ ವಿಭಾಗದ ಎನ್. ನಾಗಪ್ರಜ್ವಲ್ (ದ್ವಿತೀಯ), 8ನೇ ತರಗತಿ ಬಿ ವಿಭಾಗದ ಟಿ.ಡಿ. ಸ್ಕಂದ (ತೃತೀಯ) ಹಾಗೂ 8ನೇ ತರಗತಿ ಬಿ ವಿಭಾಗದ ನೈಶಾ (ಸಮಾಧಾನಕರ) ಬಹುಮಾನಗಳಿಸಿದ್ದು ಬಹುಮಾನ ವಿಜೇತ ಮಕ್ಕಳಿಗೆ ಶಾಸಕರು ಬಹುಮಾನ ನೀಡಿ ಅಭಿನಂದಿಸಲಿದ್ದಾರೆ.
ವೇದಿಕೆಯಲ್ಲಿ ಕನ್ನಡಪ್ರಭ ಪತ್ರಿಕಾ ಪ್ರತಿನಿಧಿ ಶಾಂತರಾಜು ಅವರನ್ನು ಸನ್ಮಾನಿಸಲಾಗುವುದು, ಅಲ್ಲದೆ ಜಿಲ್ಲಾ ಹಂತದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಆದರ್ಶ ಶಾಲೆಯ ಕನ್ನಡ ಭಾಷಾ ಶಿಕ್ಷಕರಾದ ಪ್ರದೀಪ್ ಕುಮಾರ್ ಅವರನ್ನು ಗೌರವಿಸಲಾಗುವುದು. ಬಳಿಕ ಹತ್ತನೆ ತರಗತಿ ಮಕ್ಕಳಿಗೆ ಕನ್ನಡಪ್ರಭ ಯುವ ಆವೃತ್ತಿ ಸಂಚಿಕೆಯನ್ನು ವಿತರಿಸಲಾಗುವುದು. ಈವೇಳೆ ಕ್ಷೇತ್ರಶಿಕ್ಷಣಾಧಿಕಾರಿ ಮಂಜುಳ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಬಸ್ತಿಪುರ ಪ್ರಕಾಶ್, ಮುಖ್ಯಶಿಕ್ಷಕಿ ಕುಮಾರಿ ಪ್ರಿಯದರ್ಶಿನಿ ಇತರರು ಪಾಲ್ಗೊಳ್ಳಲಿದ್ದಾರೆ
ಸರ್ಕಾರ ಗಂಬೀರವಾಗಿ ಚಿಂತನೆ ನಡೆಸುವ ಮೂಲಕ ಮರಿ ವೀರಪ್ಪನ್ ನಂತಹ ಕಿಡಿಗೇಡಿಗಳ ಹಾವಳಿಗೆ ಶಾಶ್ವತವಾಗಿ ಕಡಿವಾಣ ಹಾಕಬೇಕು, ಮತ್ತೊಮ್ಮೆ ಈ ಹೆಸರು ಕೇಳದ ರೀತಿ, ಈತ ವನ್ಯಪ್ರಾಣಿಗಳಿಗೆ ತೊಂದರೆ ಉಂಟು ಮಾಡದ ರೀತಿ ಕ್ರಮ ಆಗಬೇಕು, ಅದೇ ರೀತಿಯಲ್ಲಿ ಸರ್ಕಾರದ ಸೂಚನೆಯಂತೆ ಅಕ್ರಮ ಬಂದೂಕು ಹೊಂದಿರುವವರು ನ. 1ರೊಳಗೆ ಬಂದೂಕು ಒಪ್ಪಿಸಬೇಕು, ಇಲ್ಲದಿದ್ದಲ್ಲಿ ಸರ್ಕಾರದಿಂದ ಕ್ರಮ ಖಚಿತ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.