ಕನ್ನಡ ಪ್ರೇಮ ನವೆಂಬರ್ ಗೆ ಸೀಮಿತ ಬೇಡ: ಶಾಂತಾ ಬೀರೂರು

KannadaprabhaNewsNetwork |  
Published : Nov 25, 2025, 02:15 AM IST
23 ಬೀರೂರು 1ಬೀರೂರಿನಲ್ಲಿ ಆಟೊ ಚಾಲಕರು– ಮಾಲೀಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಕವಿಗಳ ಮತ್ತು ಚಿತ್ರರಂಗದ ನಾಯಕರುಗಳ ಭಾವಚಿತ್ರದ ಮೆರವಣಿಗೆ ಮಾಡಲಾಯಿತು | Kannada Prabha

ಸಾರಾಂಶ

ಬೀರೂರು, ಕನ್ನಡ ಭಾಷೆ ಮೇಲಿನ ಪ್ರೇಮ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೆ ನಿರಂತರವಾಗಿದ್ದರೆ ಭಾಷೆ ತನ್ನ ಮಹತ್ವ ಉಳಿಸಿಕೊಳ್ಳುತ್ತದೆ ಎಂದು ಶಾಂತಾ ಬೀರೂರು ತಿಳಿಸಿದರು.

ಆಟೊ ಚಾಲಕರು ಮತ್ತು ಮಾಲೀಕರ ಸಂಘದಿಂದ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವ

ಕನ್ನಡಪ್ರಭ ವಾರ್ತೆ, ಬೀರೂರು

ಕನ್ನಡ ಭಾಷೆ ಮೇಲಿನ ಪ್ರೇಮ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೆ ನಿರಂತರವಾಗಿದ್ದರೆ ಭಾಷೆ ತನ್ನ ಮಹತ್ವ ಉಳಿಸಿಕೊಳ್ಳುತ್ತದೆ ಎಂದು ಶಾಂತಾ ಬೀರೂರು ತಿಳಿಸಿದರು.ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ಗಣಪತಿ ಪೆಂಡಾಲ್ ಆವರಣದಲ್ಲಿ ಶನಿವಾರ ಆಟೊ ಚಾಲಕರು ಮತ್ತು ಮಾಲೀಕರ ಸಂಘದಿಂದ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವದ ದ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕನ್ನಡ ಭಾಷೆಗೆ 2 ಸಾವಿರ ರ್ಷಗಳ ಇತಿಹಾಸ ಹೊಂದಿದೆ. ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವ ಭೌಮರಾಗಿದ್ದು, ಕನ್ನಡ ನಾಡು- ನುಡಿ ಉಳಿಸಿ ಬೆಳೆಸುವಲ್ಲಿ ಆಟೊ ಚಾಲಕರು ಹೆಚ್ಚಿನ ಒತ್ತು ನೀಡುತ್ತಿರುವುದು ಮೆಚ್ಚುವಂತಹದ್ದು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ.ಸುದರ್ಶನ್, ಪರಸ್ಥಳಗಳಿಂದ ಬರುವ ಯಾತ್ರಿಗಳನ್ನು ಸುರಕ್ಷಿತ ವಾಗಿ ಸೇರಿಸುವ ಆಟೊ ಚಾಲಕರು ತಮ್ಮ ವೃತ್ತಿ ಬದುಕಿನಲ್ಲಿ ಭಾಷಾಭಿಮಾನ ಮೆರೆಯುವ ಜತೆಗೆ ತಮ್ಮ ಮನೆ ಹಬ್ಬದಂತೆ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವ ಎಲ್ಲರಿಗೂ ಮಾದರಿ ಎಂದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಸವಿತಾ ರಮೇಶ್ ಮಾತನಾಡಿ, ಇಂಗ್ಲೀಷ್ ವ್ಯಾಮೋಹ ಎಲ್ಲರಲ್ಲೂ ಹೆಚ್ಚಾಗಿ ಮಾತೃಭಾಷೆ ಕಡೆಗಣಿಸುವ ವಾತಾವರಣದಲ್ಲಿ ನಾವಿದ್ದೇವೆ. ಆದರೆ ಇಂದಿಗೂ ನಾಡು, ನುಡಿ, ನೆಲ, ಜಲ ಸಂರಕ್ಷಣೆಯಲ್ಲಿ, ಕನ್ನಡ ಪರ ಹೋರಾಟಗಳಲ್ಲಿ ಆಟೊ ಚಾಲಕರು ಮುಂಚೂಣಿಯಲ್ಲಿದ್ದಾರೆ ಎಂದರು.ಬೀರೂರು ಪಿಎಸ್ಐ ತಿಪ್ಪೇಶ್ ಮಾತನಾಡಿ, ಆಟೊ ಚಾಲಕರು ಪಟ್ಟಣಗಳ ನರನಾಡಿ ಇದ್ದಂತೆ. ಆಟೊ ಚಾಲಕರು ಕಡ್ಡಾಯ ವಾಗಿ ರಸ್ತೆ ಸುರಕ್ಷತಾ ನಿಯಮವನ್ನು ಪಾಲಿಸಬೇಕು. ವಾಹನಗಳ ವಿಮೆ, ಹೊಗೆ ತಪಾಸಣೆ, ಪರವಾನಗಿಗಳನ್ನು ಹೊಂದ ಬೇಕು ಹಾಗೂ ಸಮವಸ್ತ್ರ ಧರಿಸುವುದನ್ನು ಮರೆಯಬೇಡಿ ಎಂದು ಸಲಹೆ ನೀಡಿದರು.ಕರ್ಯಕ್ರಮದಲ್ಲಿ ಆಟೊ ಚಾಲಕರು ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಬಿ.ಕೆ.ಶಶಿಧರ್, ಅಧ್ಯಕ್ಷ ಬಿ.ಎಲ್. ರವಿಕುಮಾರ್, ಕೆ.ಎಂ.ಜಯಪ್ರಕಾಶ್, ಮರ್ಗದ ಮಧು, ಅಪರಾಧ ವಿಭಾಗದ ಪಿಎಸ್ಐ ಗಣಪತಿ ಶೇರುಗಾರ್, ಹಾಗೂ ಆಟೋ ಸಂಘದ ಸಲಹೆಗಾರರಾದ ಮಾಲತೇಶ್, ಸೋಮಣ್ಣ ಮತ್ತು ಮಂಜುನಾಥ್, ಭರತ್, ವಿಲ್ಸನ್ ಹಾಜರಿದ್ದರು.ಕಾರ್ಯಕ್ರಮದ ಬಳಿಕ ಆಟೊಗಳಿಗೆ ಕನ್ನಡದ ಬಾವುಟಗಳಿಂದ ಅಲಂಕರಿಸಿ, ಭುವನೇಶ್ವರಿ ಭಾವಚಿತ್ರ, ಬಸವಣ್ಣ, ಸಂಗೊಳ್ಳಿ ರಾಯಣ್ಣ, ಶಂಕರ್ ನಾಗ್, ಇಮ್ಮಡಿ ಪುಲಿಕೇಶಿ ಸೇರಿದಂತೆ ಕನ್ನಡ ಕವಿಗಳ ಮತ್ತು ಚಿತ್ರರಂಗದ ನಾಯಕರ ಭಾವ ಚಿತ್ರದೊಂದಿಗೆ ಪಟ್ಟಣದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.23 ಬೀರೂರು 1ಬೀರೂರಿನಲ್ಲಿ ಆಟೊ ಚಾಲಕರು– ಮಾಲೀಕರ ಸಂಘದಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಕವಿಗಳ ಮತ್ತು ಚಿತ್ರರಂಗದ ನಾಯಕರ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.

PREV

Recommended Stories

ಸಿದ್ದರಾಮಯ್ಯ ಕಾಂಗ್ರೆಸ್‌ ಆಸ್ತಿ: ಡಿಕೆ - ಅವರ ಮಾತೇ ವೇದವಾಕ್ಯ : ಡಿಸಿಎಂ ಡಿ.ಕೆ.ಶಿವಕುಮಾರ್‌
ದಿಲ್ಲಿಯಲ್ಲಿ ಈಗ ಡಿಕೆಶಿ ಪರ ಆಪ್ತ ಶಾಸಕರ ಬಹಿರಂಗ ಲಾಬಿ!