ಕನ್ನಡ ರಾಜ್ಯೋತ್ಸವ ಸ್ವಾಭಿಮಾನದ ಸಂಕೇತ

KannadaprabhaNewsNetwork |  
Published : Nov 02, 2025, 03:15 AM IST
ಸಸಸಸಸಸಸಸಸಸ | Kannada Prabha

ಸಾರಾಂಶ

ನಮ್ಮ ನೆಲ, ಜಲ ಬಳಕೆ ಮಾಡಿಕೊಂಡು ನಮ್ಮ ನಡುವೆ ಜೀವಿಸುವ, ಉದ್ಯೋಗ ಮಾಡುವವರು ಕನ್ನಡ ಭಾಷೆ ಮಾತನಾಡಿ ವ್ಯವಹರಿಸುವಂತೆ ನಾವೆಲ್ಲ ಆಡಳಿತದಲ್ಲಿಯೇ ಕನ್ನಡ ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾಗಿದೆ

ಕಾರಟಗಿ: ದೇಶದಲ್ಲಿಯೇ ಅತೀ ಹೆಚ್ಚು ಜ್ಞಾನಪೀಠ ದೊರಕಿದ್ದು ಕನ್ನಡ ನಾಡಿಗೆ. ನಾವೆಲ್ಲ ಹೆಚ್ಚು ಕನ್ನಡ ಮಾತನಾಡುವ ಮೂಲಕ ನಮ್ಮ ಭಾಷೆಯನ್ನೇ ಹೆಚ್ಚು ಬಳಕೆ ಮಾಡಬೇಕಾಗಿದೆ ಜತೆಗೆ ಕನ್ನಡ ನೆಲ, ಜಲ ಮತ್ತು ಸಂಸ್ಕೃತಿ ಕಾಪಾಡಬೇಕಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಡಾ. ಸಾಬಣ್ಣ ಕಟ್ಟೇಕಾರ ಹೇಳಿದರು.

ಇಲ್ಲಿನ ಪುರಸಭೆ ಆವರಣದಲ್ಲಿ ಶನಿವಾರ ೭೦ನೇ ಕನ್ನಡ ರಾಜ್ಯೋತ್ಸವ ನಿಮಿತ್ತ ನಾಡದೇವಿ ಭುವನೇಶ್ವರಿ ದೇವಿ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ನಮ್ಮ ನೆಲ, ಜಲ ಬಳಕೆ ಮಾಡಿಕೊಂಡು ನಮ್ಮ ನಡುವೆ ಜೀವಿಸುವ, ಉದ್ಯೋಗ ಮಾಡುವವರು ಕನ್ನಡ ಭಾಷೆ ಮಾತನಾಡಿ ವ್ಯವಹರಿಸುವಂತೆ ನಾವೆಲ್ಲ ಆಡಳಿತದಲ್ಲಿಯೇ ಕನ್ನಡ ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾಗಿದೆ. ಆಗ ಮಾತ್ರ ಕನ್ನಡ ನಾಡಿನಲ್ಲಿ ಇದ್ದುಕೊಂಡವರು ಕನ್ನಡ ಭಾಷೆಯ ಹಿರಿಮೆ ತಿಳಿದು ಸರಿದಾರಿಗೆ ಬರುತ್ತಾರೆ. ನಮಗೆಲ್ಲ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದರು.

ಕನ್ನಡ ರಾಜ್ಯೋತ್ಸವ ಎಂಬುದು ನಮ್ಮ ಹೆಮ್ಮೆ ಮತ್ತು ಸ್ವಾಭಿಮಾನದ ಸಂಕೇತ, ನಮ್ಮ ರಾಜ್ಯದ ಸುವರ್ಣ ಪರಂಪರೆ ನೆನೆಯುತ್ತಾ.ರಾಜ್ಯದ ಕೀರ್ತಿ ಪತಾಕೆ ಇನ್ನಷ್ಟು ಎತ್ತರಕ್ಕೆ ಹಾರಿಸುವ ಮೂಲಕ ಕನ್ನಡಿಗರಾದ ನಾವೆಲ್ಲ ಕನ್ನಡ ರಾಜ್ಯೋತ್ಸವ ಹಬ್ಬದಂತೆ ಆಚರಣೆ ಮಾಡೋಣ ಎಂದರು.

ಇದಕ್ಕೂ ಮುಂಚೆ ಪುರಸಭೆ ಸದಸ್ಯರು, ಕಚೇರಿಯ ಅಧಿಕಾರಿಗಳ, ಸಿಬ್ಬಂದಿ, ಕನ್ನಡ ಪರ ಸಂಘಟನೆ ಪದಾಧಿಕಾರಿಗಳು, ಸಾರ್ವಜನಿಕರು, ನಾಡದೇವಿ ಭುವನೇಶ್ವರಿ ದೇವಿಗೆ ಪುಷ್ಪನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಈಶಪ್ಪ, ಉಪಾಧ್ಯಕ್ಷೆ ದೇವಮ್ಮ ಚಲವಾದಿ, ಸದಸ್ಯರಾದ ಹಿರೇಬಸಪ್ಪ ಸಜ್ಜನ್, ಬಸವರಾಜ ಕೊಪ್ಪದ, ರಾಜಶೇಖರ ಆನೆಹೊಸೂರು, ಆರೋಗ್ಯ ನಿರೀಕ್ಷಕಿ ಅಕ್ಷತಾ ಕಮ್ಮಾರ, ನಾಗರಾಜ ತಳವಾರ, ಸೀಮಾರಾಣಿ, ಮಂಜುನಾಥ ನಾಯಕ, ಕನ್ನಡಪರ ಸಂಘಟನೆಗಳ ಪ್ರಮುಖರು,ಅಧಿಕಾರಿಗಳು, ಸಿಬ್ಬಂದಿ ಇದ್ದರು.

ವಿವಿಧೆಡೆ: ಪಟ್ಟಣದ ವಿವಿಧ ಸರ್ಕಾರಿ ಕಚೇರಿಗಳು ಸೇರಿದಂತೆ ಶಾಲಾ ಕಾಲೇಜ್‌ಗಳಲ್ಲಿ ೭೦ನೇ ರಾಜ್ಯೋತ್ಸವ ಆಚರಿಸಲಾಯಿತು.

ತಹಸೀಲ್ದಾರ ಕಚೇರಿಯಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ಕನ್ನಡ ರಾಜ್ಯೊತ್ಸವ ಆಚರಿಸಲಾಯಿತು.

ಕನ್ನಡ ತಾಯಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಔಪಚಾರಿಕವಾಗಿ ತಹಸೀಲ್ದಾರ್ ಕುಮಾರಸ್ವಾಮಿ ಮಾತನಾಡಿದರು.

ಖಜಾನೆ ಅಧಿಕಾರಿ ಹನುಮಂತಪ್ಪ ನಾಯಕ, ಕಂದಾಯ ನಿರೀಕ್ಷಕಿ ಸಂಗಮ್ಮ ಹಿರೇಮಠ, ಶಿರಸ್ತೇದಾರ ಸಾವಿತ್ರಿಬಾಯಿ, ಉಮಾಮಹೇಶ್ವರ ಸೇರಿದಂತೆ ಇತರರು ಇದ್ದರು.

ಪೊಲೀಸ್ ಠಾಣೆ, ಅಗ್ನಿಶಾಮಕ ಕಚೇರಿ, ಹಳೆ ತಹಸೀಲ್ದಾರ ಕಚೇರಿ ಸೇರಿದಂತೆ ಪಟ್ಟಣದ ಸರ್ಕಾರಿ ಕಚೇರಿ, ಶಾಲಾ ಕಾಲೇಜ್ ಖಾಸಗಿ ವಿದ್ಯಾ ಸಂಸ್ಥೆ, ಬಿಜೆಪಿ ಕಚೇರಿಯಲ್ಲಿ ಶನಿವಾರ ೭೦ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ನಿಮಿತ್ತ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ವಂದಿಸಿದರು.

ಬಿಜೆಪಿ ಕಾರ್ಯಾಲಯ:ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ದಿನ ಆಚರಿಸಲಾಯಿತು. ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಈ ವೇಳೆ ಯುವ ಮೋರ್ಚಾ ಅಧ್ಯಕ್ಷ ಮೌನೇಶ ದಡೇಸ್ಗೂರು, ತಿಪ್ಪಣ್ಣ ನಾಯಕ, ದೇವರಾಜ ನಾಯಕ, ಮಂಜುನಾಥ ಮಸ್ಕಿ,ವೀರೇಶ ದಿವಟರ್, ದೇವರಾಜ, ಆಂಜನೇಯ್ಯ ಬೂದುಗುಂಪಾ, ಹುಲಗಪ್ಪ ದಿಡ್ಡಿಮನಿ, ವಿಜಯ ದೇಸಾಯಿಕ್ಯಾಂಪ್ ಇದ್ದರು.

PREV

Recommended Stories

ಪಾಳು ಬಿದ್ದ ರೈತ ಸಭಾ ಭವನ ಕಟ್ಟಡ
ಕೊಂಕಣಿ ನೆಲದಲ್ಲಿ ಕನ್ನಡದಲ್ಲಿ ಸಹಿ ಸಂಗ್ರಹ, ಕದಂಬ ವೃಕ್ಷ ಪೂಜಿಸಿ ರಾಜ್ಯೋತ್ಸವ ಆಚರಣೆ