ಪರಿಣಾಮಕಾರಿ ಭಾಷಾ ಹಿತರಕ್ಷಣೆ ಅಗತ್ಯ: ಲೋಕೇಶ್ ಕುಮಾರ್

KannadaprabhaNewsNetwork |  
Published : Nov 23, 2026, 02:45 AM IST
ಚಿತ್ರ.1: ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ವತಿಯಿಂದ ಸುಂಟಿಕೊಪ್ಪದ ಮೀನಾಕ್ಷಮ್ಮ ಮಂಜನಾಥಯ್ಯ ಕಲ್ಯಾಣ ಮಂಟಪದಲ್ಲಿ ನಡೆದ ಕನ್ನಡ ರಾಜ್ಯೋತ್ಸವ

ಸುಂಟಿಕೊಪ್ಪ: ಕನ್ನಡ ಭಾಷೆಯ ಹಿತರಕ್ಷಣೆ ಕಾರ್ಯ ಪರಿಣಾಮಕಾರಿಯಾಗಬೇಕಿದೆ ಎಂದು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ತಿಳಿಸಿದರು.

ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ವತಿಯಿಂದ ಸುಂಟಿಕೊಪ್ಪದ ಮೀನಾಕ್ಷಮ್ಮ ಮಂಜನಾಥಯ್ಯ ಕಲ್ಯಾಣ ಮಂಟಪದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ, ಭಾಷೆಯನ್ನು, ನಾಡು-ನುಡಿಯನ್ನು ಬೆಳೆಸುವಲ್ಲಿ ಸಾಹಿತ್ಯ ಪ್ರಮುಖ ಸ್ಥಾನ ವಹಿಸುವಂತಾಗಬೇಕು. ಕೇವಲ ಕಾರ್ಯಕ್ರಮ ಮಾಡಿ ಹೋಗುವುದಕ್ಕಿಂತ, ನಾವು ಏನು ಮಾಡಿದ್ದೇವೆ? ಎಂದು ತೋರಿಸುವಲ್ಲಿ ಸ್ವಾಭಿಮಾನಿ ವೇದಿಕೆ ಪ್ರಾಮುಖ್ಯತೆ ನೀಡಿ ಕೆಲಸ ಮಾಡಬೇಕು ಎಂದರು.

ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಸಂಘಟನೆಯ ಬೆಳವಣಿಗೆ ಹಾಗೂ ನಡೆದು ಬಂದ ಹಾದಿಯ ಕುರಿತು ವಿವರಿಸಿದರು.

ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಾದ ಎ. ಲೋಕೇಶ್ ಕುಮಾರ್ ( ಸ್ವಾಭಿಮಾನಿ ವೇದಿಕೆ ಜಿಲ್ಲಾ ಕಾನೂನು ಸಲಹೆಗಾರರು) ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಕಾರ್ಯದರ್ಶಿ ಕೆ.ಎಸ್. ಅನಿಲ್ ಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜಿನಾಸುದ್ದೀನ್, ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಶರೀಫ್, ರಕ್ತದಾನ ಶಿಬಿರ ಆಯೋಜಕ ಎಂ.ಇ. ಅಬ್ಬಾಸ್, ಕುಂಞ ಮಹಮ್ಮದ್ (ಹಿರಿಯ ಆಟೋ ಚಾಲಕರು) ಜಯಂತಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಾಜಶೇಖರ್ ಗೌಡ, ವೇದಿಕೆ ತಾಲೂಕು ಅಧ್ಯಕ್ಷ ಕೆ.ಎಸ್. ಶಿವ, 10ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಾದ ವೈಷ್ಣವಿ ಆರ್. ಅಜಯ್ ಪಿ.ಆರ್. ನಂದಿನಿ, ಶೋಭಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಯುವ ಘಟಕದ ಅಧ್ಯಕ್ಷ ಕ್ಲಿಫರ್ಡ್ ರಾಡ್ರಿಗಸ್, ಹೋಬಳಿ ಘಟಕದ ಅಧ್ಯಕ್ಷ ಶರೀಫ್ ಎಂ.ಇ., ಪದಾಧಿಕಾರಿಗಳಾದ ಶಹಾದ್, ನಿತಿನ್ ಮಂದಣ, ಮಡೆ ಪೂಜಾರಿ, ರವಿ, ದಿನೀತ್ ಹಾಗೂ ಸಂಘಟನೆಯ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೀವನ ಶೈಲಿ ಬದಲಾವಣೆಯಿಂದ ಮಧುಮೇಹ
ನಿಗಧಿತ ಅವಧಿಯಲ್ಲಿ ಜನರ ಕೆಲಸಗಳನ್ನು ಮಾಡಿಕೊಡಿ