ಹಾನಗಲ್ಲ: ಕನ್ನಡತನದ ಜಾಗೃತಿಗಾಗಿ ಸುವರ್ಣ ಕರ್ನಾಟಕ ಸಂಭ್ರಮದ ಸಂದರ್ಭದಲ್ಲಿ ಸಂಚರಿಸುತ್ತಿರುವ ಸರಕಾರದ ಮಹಾತ್ವಾಕಾಂಕ್ಷಿ ಕನ್ನಡ ರಥ ಭಾನುವಾರ ಹಾನಗಲ್ಲಿಗೆ ಬಂದಾಗ ತಾಲೂಕು ತಹಸೀಲ್ದಾರ್ ಎಸ್. ರೇಣುಕಮ್ಮ ಪೂಜೆ ಸಲ್ಲಿಸಿ ರಥವನ್ನು ಸ್ವಾಗತಿಸಿದರು.ಪಟ್ಟಣದ ಪ್ರವಾಸಿ ಮಂದಿರದ ಬಳಿ ಡೊಳ್ಳು ಕುಣಿತ ಹಾಗೂ ವಿವಿಧ ಅಲಂಕಾರಗಳೊಂದಿಗೆ ರಥವನ್ನು ಸ್ವಾಗತಿಸಿದ ಸಂದರ್ಭದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಪ್ರಮುಖರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆರು, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ತಹಸೀಲ್ದಾರ್ ಎಸ್.ರೇಣುಕಮ್ಮ, ಕನ್ನಡ ರಥ ಸಂಚರಣೆ ಮೂಲಕ ಕನ್ನಡತನದ ಹೊಸ ಉತ್ಸಾಹ ಮೂಡಿದಂತಾಗಿದೆ. ಕನ್ನಡ ನಾಡು ನುಡಿಯ ಬಗೆಗೆ ನಮಗೆಲ್ಲ ಅಭಿಮಾನ ಇರಬೇಕು. ಕನ್ನಡದ ನೆಲ ಜಲ ಸಂಸ್ಕೃತಿಯ ಉಳಿವಿಗಾಗಿ ನಾವೆಲ್ಲ ಒಟ್ಟಾಗಿ ಶ್ರಮಿಸಬೇಕು. ಕನ್ನಡ ಭಾಷೆ ಸಂಸ್ಕೃತಿಯ ಮೂಲಕ ನಮ್ಮತನವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳೋಣ ಎಂದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾರುತಿ ಶಿಡ್ಲಾಪೂರ, ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕಲ್ಲಪ್ಪ ಚಿಕ್ಕೇರಿ, ಕಾರ್ಯದರ್ಶಿ ಎಸ್.ವಿ. ಅಗಸನಹಳ್ಳಿ, ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಸಿಕಂದರ್ ವಾಲಿಕಾರ, ಉಪಾಧ್ಯಕ್ಷ ಮಾಲತೇಶ ಕಾಳೇರ, ಹಜರತ್ ಅತ್ತಾರ, ತಾಲೂಕು ಕಸಾಪ ಅಧ್ಯಕ್ಷ ಷಣ್ಮುಖ ಮುಚ್ಚಂಡಿ, ಪ್ರೇಮಾ ಮುದಿಗೌಡರ, ಹನುಮಂತಪ್ಪ ಕೋಣನಕೊಪ್ಪ, ಶಿವಾನಂದ ಕ್ಯಾಲಕೊಂಡ, ಮಾರುತಿ ತಾಂದಳೆ, ಎಸ್.ವಿ. ಹೊಸಮನಿ, ಎಸ್.ಎಸ್. ಹಿರೇಮಠ, ಎಂ.ಎಸ್. ಅಮರದ, ಪ್ರವೀಣ ಬ್ಯಾತನಾಳ, ರಾಮಣ್ಣ ಸುಗಂಧಿ, ಶ್ರೀನಿವಾಸ ದೀಕ್ಷಿತ್, ಆರ್.ಬಿ.ರೆಡ್ಡಿ, ಸಿ.ಆರ್.ವಡ್ಡರ, ಮಹದೇವ ಶಿರಸಿ, ಆರ್.ಎಸ್. ಹಿರೇಮಠ, ಕುಂಕೂರ, ಶಿವಕುಮಾರ ಭರಮಗೌಡರ, ಮಾಲತೇಶ ಬಾರ್ಕಿ, ಶ್ರೀನಿವಾಸ ದೀಕ್ಷಿತ್, ಶ್ರೀಕಾಂತ ಹೊಸಮನಿ, ಪರಮೇಶ್ವರ ಗಾಡಿಹುಚ್ಚಣ್ಣನವರ, ವೀರಪ್ಪ ಕರೆಗೊಂಡರ ಸೇರಿದಂತೆ ಕನ್ನಡಾಭಿಮಾನಿಗಳು ರಥ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಕುಮಾರೇಶ್ವರ ವಿರಕ್ತಮಠಕ್ಕೆ ತಲುಪಿ ಸಮಾರೋಪಗೊಂಡಿತು.