ಹಿನ್ನೆಲೆ ಗಾಯಕ ಸೋನು ನಿಗಮ್ ಬಂಧನಕ್ಕೆ ಕನ್ನಡಸೇನೆ ಆಗ್ರಹ

KannadaprabhaNewsNetwork | Published : May 6, 2025 12:16 AM
೫ಕೆಎಂಎನ್‌ಡಿ-೩ಕನ್ನಡಿಗರನ್ನು ಅವಹೇಳನಕಾರಿಯಾಗಿ ನಿಂದಿಸಿರುವ ಗಾಯಕ ಸೋನುನಿಗಮ್ ಅವರನ್ನು ಬಂಧಿಸುವಂತೆ ಕನ್ನಡಸೇನೆ ಜಿಲ್ಲಾಧ್ಯಕ್ಷ ಹೆಚ್.ಸಿ.ಮಂಜುನಾಥ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಇ.ಸಿ.ತಿಮ್ಮಯ್ಯ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಕರ್ನಾಟಕದ ನೆಲದಲ್ಲಿ ಸೋನು ನಿಗಮ್ ಕನ್ನಡಿಗರನ್ನು ಗೂಂಡಾಗಳು ಮತ್ತು ಭಯೋತ್ಪಾದಕರು ಎಂದು ಅವಮಾನಿಸಿದ್ದಾರೆ ಕನ್ನಡಿಗರನ್ನು ಕೀಳಾಗಿ ಕಂಡಿರುವುದು ಮಾತ್ರವಲ್ಲ. ಕನ್ನಡಿಗರನ್ನು ದೇಶದ್ರೋಹಿಗಳೆಂದು ಬಿಂಬಿಸಿ, ಅವರನ್ನು ಖಳನಾಯಕರನ್ನಾಗಿ ಮಾಡಿರುವುದು ಕನ್ನಡಿಗರಾದ ನಮಗೆ ಸಹಿಸಲಾಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕದ ನೆಲದಲ್ಲಿ ಕನ್ನಡಿಗರನ್ನು ಗೂಂಡಾಗಳು ಮತ್ತು ಭಯೋತ್ಪಾದಕರು ಎಂದು ಅವಮಾನಿಸಿರುವ ಗಾಯಕ ಸೋನು ನಿಗಮ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಕನ್ನಡ ಸೇನೆ ಕಾರ್ಯಕರ್ತರು ಆಗ್ರಹಿಸಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ತಿಮ್ಮಯ್ಯರಿಗೆ ದೂರು ಸಲ್ಲಿಸಿದ ಸೇನೆಯ ಕಾರ್ಯಕರ್ತರು ಗಾಯಕ ಸೋನು ನಿಗಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದ ನೆಲದಲ್ಲಿ ಸೋನು ನಿಗಮ್ ಕನ್ನಡಿಗರನ್ನು ಗೂಂಡಾಗಳು ಮತ್ತು ಭಯೋತ್ಪಾದಕರು ಎಂದು ಅವಮಾನಿಸಿದ್ದಾರೆ ಕನ್ನಡಿಗರನ್ನು ಕೀಳಾಗಿ ಕಂಡಿರುವುದು ಮಾತ್ರವಲ್ಲ. ಕನ್ನಡಿಗರನ್ನು ದೇಶದ್ರೋಹಿಗಳೆಂದು ಬಿಂಬಿಸಿ, ಅವರನ್ನು ಖಳನಾಯಕರನ್ನಾಗಿ ಮಾಡಿರುವುದು ಕನ್ನಡಿಗರಾದ ನಮಗೆ ಸಹಿಸಲಾಗುತ್ತಿಲ್ಲ. ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು ಎಂದು ಒತ್ತಾಯಿಸಿದರು.

ಕನ್ನಡಿಗರನ್ನು ನಿಂದಿಸಿರುವ ಸೋನು ನಿಗಮ್ ಅವರನ್ನು ಕನ್ನಡ ಚಿತ್ರರಂಗ ಬಹಿಷ್ಕರಿಸಬೇಕು, ಕರ್ನಾಟಕದ ಜನಪ್ರತಿನಿಧಿಗಳು ಮೌನ ಮುರಿದು ಮಾತನಾಡಬೇಕು. ಮೂರು ಸಾವಿರ ವರ್ಷ ಹಾಗೂ ದೇಶದ ಎಲ್ಲಾ ಭಾಷೆಯ ತಾಯಿ ಭಾಷೆ ಕನ್ನಡಕ್ಕೆ ಅವಮಾನಿಸಿದ ಯಾವುದೇ ವ್ಯಕ್ತಿಯಾದರೂ ನಿಂದಿಸಿದರೆ ಅಂತವರ ವಿರುದ್ಧ ೨೪ ತಾಸಿನೊಳಗೆ ಕಾನೂನು ಕ್ರಮ ಕೈಗೊಳ್ಳುವ ಕಾನೂನು ರೂಪಿಸಬೇಕೆಂದು ಆಗ್ರಹಿಸಿದರು.

ಕನ್ನಡ ಸೈನ್ಯ ಜಿಲ್ಲಾಧ್ಯಕ್ಷ ಮಂಜುನಾಥ್, ಎಚ್.ಸಿ,ಮಹಾಂತಪ್ಪ, ಆರ್.ಸೌಭಾಗ್ಯ, ಶಿವಾಲಿ, ಅಭಿಷೇಕ್, ಪವಿತ್ರ ನಾಗರಾಜ್, ವೇಣು ಇತರರಿದ್ದರು.

ಮೇ 19 ರಂದು ಪ್ರಗತಿ ಪರಿಶೀಲನಾ ಸಭೆ

ಮಂಡ್ಯ: ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್‌ ಅಧ್ಯಕ್ಷತೆಯಲ್ಲಿ 2024-25ನೇ ಸಾಲಿನ ಮಾರ್ಚ್‌ ಅಂತ್ಯದವರೆಗಿನ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಮೇ 19ರಂದು ಜಿಪಂ ಕಾವೇರಿ ಸಭಾಂಗಣದಲ್ಲಿ ನಡೆಯಲಿದೆ. ಸಭೆಗೆ ಅಧಿಕಾರಿಗಳು ಬೇರೆ ಸಿಬ್ಬಂದಿಯನ್ನು ನಿಯೋಜಿಸದೆ ಖುದ್ದು ಅಗತ್ಯ ಮಾಹಿತಿಗಳೊಂದಿಗೆ ಹಾಜರಾಗಲು ತಿಳಿಸಲಾಗಿದೆ. ಸದರಿ ಸಭೆಗೆ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಪಟ್ಟ 20 ಅಂಶಗಳ ಕಾರ್ಯಕ್ರಮಗಳ ವರದಿಯೊಂದಿಗೆ ಇತರ ಪ್ರಗತಿ ವರದಿಯ 30 ಧೃಢೀಕೃತ ಪ್ರತಿಗಳನ್ನು ಮೇ 12ರ ಸಂಜೆಯೊಳಗಾಗಿ ಮುದ್ದಾಂ ಹಾಗೂ ಸ್ಟಾಂಪ್ ಕಾಫಿಯನ್ನು ತಾಪಂ ಕಾರ್ಯಾಲಯ ಕಚೇರಿಯ ಇ-ಮೇಲ್ ವಿಳಾಸವಾದ eotpmandya@gmail.com ಕಳುಹಿಸಲು ತಿಳಿಸಿದ್ದಾರೆ.