ಕನ್ನಡಮ್ಮನ ಸೇವೆ ಅತ್ಯಂತ ಪುಣ್ಯದ ಕೆಲಸ

KannadaprabhaNewsNetwork |  
Published : Dec 02, 2024, 01:15 AM IST
ಹೊಸದುರ್ಗ ಪಟ್ಟಣದ  ಕನ್ನಡ  ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು  ವತಿಯಿಂದ 69 ನೇ  ಕನ್ನಡ  ರಾಜ್ಯೋತ್ಸವ ಮತ್ತು ಕನ್ನಡ  ಭಾಷಾ ವಿಷಯದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ  125 ಕ್ಕೆ  125 ಮತ್ತು ಪಿ ‌ಯು. ಸಿ.ಯಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದ  ಪ್ರತಿಭಾನ್ವಿತ ವಿದ್ಯಾಥಿ೯ ಗಳಿಗೆ ಪ್ರತಿಭಾ ಪುರಸ್ಕಾರ ಮತ್ತು  ಕಿತ್ತೂರು ರಾಣಿ ಚೆನ್ನಮ್ಮ  ಸಾವಿತ್ರಿಬಾಯಿ ಪುಲೆ ಕನಕ ದಾಸರ ಸ್ಮರಣೆ ಕಾಯ೯ಕ್ರಮವನ್ನು ಹೈಕೋರ್ಟನ ನಿವೃತ್ತ ನ್ಯಾಯಾಧೀಶ ಹೆಚ್‌ ಬಿಲ್ಲಪ್ಪ  ಉದ್ಘಾಟಿಸಿದರು. | Kannada Prabha

ಸಾರಾಂಶ

ಹೊಸದುರ್ಗ: ತಾಯಿ ನೆಲದ ಕನ್ನಡಮ್ಮನ ಸೇವೆ ಅತ್ಯಂತ ಪುಣ್ಯದ ಕೆಲಸವಾಗಿದ್ದು, ಕನ್ನಡಮ್ಮನ ಸೇವೆಯನ್ನು ಪ್ರತಿಯೊಬ್ಬ ಕನ್ನಡಿಗನು ಮಾಡುವ ಮೂಲಕ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ, ನೆಲ, ಜಲ ಸಂರಕ್ಷಣೆ ಮಾಡಬೇಕು ಎಂದು ಹೈಕೋರ್ಟ್‌ ನ ವಿಶ್ರಾಂತ ನ್ಯಾಯಧೀಶರಾದ ಎಚ್.ಬಿಲ್ಲಪ್ಪ ಕರೆ ನೀಡಿದರು.

ಹೊಸದುರ್ಗ: ತಾಯಿ ನೆಲದ ಕನ್ನಡಮ್ಮನ ಸೇವೆ ಅತ್ಯಂತ ಪುಣ್ಯದ ಕೆಲಸವಾಗಿದ್ದು, ಕನ್ನಡಮ್ಮನ ಸೇವೆಯನ್ನು ಪ್ರತಿಯೊಬ್ಬ ಕನ್ನಡಿಗನು ಮಾಡುವ ಮೂಲಕ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ, ನೆಲ, ಜಲ ಸಂರಕ್ಷಣೆ ಮಾಡಬೇಕು ಎಂದು ಹೈಕೋರ್ಟ್‌ ನ ವಿಶ್ರಾಂತ ನ್ಯಾಯಧೀಶರಾದ ಎಚ್.ಬಿಲ್ಲಪ್ಪ ಕರೆ ನೀಡಿದರು.

ಪಟ್ಟಣದ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಮತ್ತು ಕನ್ನಡ ಭಾಷಾ ವಿಷಯದಲ್ಲಿ ಎಸ್‌ಎಸ್ಎಲ್ಸಿಯಲ್ಲಿ 125ಕ್ಕೆ 125 ಮತ್ತು ಪಿಯುಸಿಯಲ್ಲಿ 100ಕ್ಕೆ 100 ಅಂಕಗಳನ್ನು ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಕಿತ್ತೂರು ರಾಣಿ ಚೆನ್ನಮ್ಮ, ಸಾವಿತ್ರಿಬಾಯಿ ಪುಲೆ, ಕನಕ ದಾಸರ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಹೆಚ್ಚು ವಿದ್ಯಾವಂತರಾದರೆ ಗ್ರಾಮದ, ನಾಡಿನ, ರಾಷ್ಟ್ರದ ಬದಲಾವಣೆ ಮಾಡಲು ಸಾಧ್ಯ. ಶಿಕ್ಷಣ ಕೊಡಿಸುವಲ್ಲಿ ಪೋಷಕರು ಹಿಂದೆ ಬಿಳಬಾರದು. ಕನ್ನಡ ನಾಡು ಕಟ್ಟಲು ಅನೇಕ ಮಹನೀಯರು ತ್ಯಾಗ ಬಲಿದಾನ ಮಾಡಿದ್ದಾರೆ. ಹಾಗೇಯೇ ದಾಸರು, ಶರಣರು, ಸಂತರು, ಕವಿ ಪುಂಗರು ಅವರದೇ ಆದ ಕೊಡುಗೆ ನೀಡಿದ್ದಾರೆ. ಕನ್ನಡ ನೆಲದಲ್ಲಿ ಏನೆಲ್ಲ ವಿಪುಲ ಸಂಪತ್ತು ಇದೆ. ವಿದ್ಯಾವಂತರಾದ ನಾವುಗಳು ಅವುಗಳನ್ನು ಸಂರಕ್ಷಿಸುವ ಕೆಲಸ ಮಾಡಬೇಕು ಎಂದರು.

ಕನ್ನಡ ಜಾನಪದ ಪರಿಷತ್ತಿ ನ ಜಿಲ್ಲಾಧ್ಯಕ್ಷ ಬಾ.ಮೈಲಾರಪ್ಪ ಮಾತನಾಡಿದರು.

ಇದೆ ವೇಳೆ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಕನ್ನಡದಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಸಾಪ ತಾಲೂಕು ಅಧ್ಯಕ್ಷ ಬಿ.ಪಿ.ಓಂಕಾರಪ್ಪ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಆಗ್ರೋ ಶಿವಣ್ಣ, ಕವಿ ಇಲ್ಕಲ್ ಅಶೋಕ್ ಕುಮಾರ್, ಕಸಾಪ ಮತ್ತೋಡು ಹೋಬಳಿ ಘಟಕದ ಅಧ್ಯಕ್ಷ ರಮೇಶ್, ಡಿ.ಟಿ.ಚಂದ್ರಶೇಖರ್, ಕಸಾಪ ಮಾಜಿ ಕಾರ್ಯದರ್ಶಿಗಳಾದ ರುದ್ರಸ್ವಾಮಿ, ಚಿಕ್ಕಮುದ್ದು, ಕಾರ್ಯದರ್ಶಿ ಸುಮತಿ ಕುಮಾರ್, ಅಶೋಕ ಕಬ್ಲ್ ನ ಅಧ್ಯಕ್ಷ ಎಸ್.ಶಂಕರಪ್ಪ, ಶಿಕ್ಷಕರಾದ ಅಂಬರೀಶ್, ಬಿಜೆಪಿ ಮುಖಂಡರಾದ ತುಂಬಿನಕೆರೆ ಬಸವರಾಜ್, ಗೂಳಿಹಟ್ಟಿ ಕೃಷ್ಣಮೂರ್ತಿ, ಕವಯಿತ್ರಿ ಎಂ.ಆರ್.ನಳಿನ, ಸಮಾಜ ಸೇವಕಿ ನಾಗಲಾಬಿಂಕ ಕಲ್ಮಠ್, ಶಿಕ್ಷಕಿ ಶಬಿನಾ ಬಾನು, ಬಿ.ಒ.ಶೋಭ, ಗೀತಾಸಿಂಗ್, ಪರಮ್ಮ, ಪೀಲಾಪುರ.ಆರ್ ಕಂಠೇಶ್ ಮುಂತಾದವರು ಉಪಸ್ಥಿತರಿದ್ದರು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್