ಕನ್ನಡ ರಕ್ಷಣೆಗೆ ಕನ್ನಡಿಗರು ಸದಾ ಬದ್ಧ: ಕೆ.ಎನ್. ಚಕ್ರಸಾಲಿ

KannadaprabhaNewsNetwork |  
Published : Nov 11, 2024, 01:09 AM ISTUpdated : Nov 11, 2024, 01:10 AM IST
ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಗೌರವಿಸಲಾಯಿತು | Kannada Prabha

ಸಾರಾಂಶ

ರಾಜ್ಯ ಮತ್ತು ದೇಶದ ಗಾಮೀಣ ಭಾಗದಲ್ಲಿ ಮಾತ್ರ ಕನ್ನಡದ ತಲ್ಲಣಗಳು ಕಾಣಬಹುದು. ಹಾಗೆಯೇ ಕನ್ನಡ ಭಾಷೆ, ಜಲ, ನೆಲಕ್ಕೆ ಧಕ್ಕೆ ಬಂದಾಗ ಕನ್ನಡಿಗರು ತಮ್ಮ ನಿಷ್ಠೆ ಪ್ರದರ್ಶಿಸಲು ಬದ್ಧರಿದ್ದಾರೆ ಎಂದು ಮುಖ್ಯಶಿಕ್ಷಕ ಕೆ.ಎನ್. ಚಕ್ರಸಾಲಿ ಮಲೇಬೆನ್ನೂರಲ್ಲಿ ಹೇಳಿದ್ದಾರೆ.

- ರಾಜನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ರಾಜ್ಯ ಮತ್ತು ದೇಶದ ಗಾಮೀಣ ಭಾಗದಲ್ಲಿ ಮಾತ್ರ ಕನ್ನಡದ ತಲ್ಲಣಗಳು ಕಾಣಬಹುದು. ಹಾಗೆಯೇ ಕನ್ನಡ ಭಾಷೆ, ಜಲ, ನೆಲಕ್ಕೆ ಧಕ್ಕೆ ಬಂದಾಗ ಕನ್ನಡಿಗರು ತಮ್ಮ ನಿಷ್ಠೆ ಪ್ರದರ್ಶಿಸಲು ಬದ್ಧರಿದ್ದಾರೆ ಎಂದು ಮುಖ್ಯಶಿಕ್ಷಕ ಕೆ.ಎನ್. ಚಕ್ರಸಾಲಿ ಹೇಳಿದರು.

ಇಲ್ಲಿಗೆ ಸಮೀಪದ ರಾಜನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಾರ್ಕಾಂಡೇಶ್ವರ ಬಟ್ಟೆಮನಿ ಹಾಗೂ ಕನ್ನಡ ಭಾಷಾ ಕ್ಲಬ್ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ, ೧೩ನೇ ವರ್ಷದ ಪ್ರತಿಭಾ ಪುರಸ್ಕಾರ, ಪರಿಸರ ಕಾಳಜಿಯ ಹಳೇ ವಿದ್ಯಾರ್ಥಿಗಳಿಗೆ ಗೌರವ ಮತ್ತು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕ.ಸಾ.ಪ. ಸಂಘಟನಾ ಕಾರ್ಯದರ್ಶಿ ಸದಾನಂದ ಮಾತನಾಡಿ, ನಿರಂತರ ಐದು ಘಂಟೆಗಳ ಕಾಲ ಕನ್ನಡ ಗೀತೆಗಳು, ಕನ್ನಡ ಭಾಷೆಯ ಚರ್ಚೆ, ೨೬ ಕವಿಗಳಿಂದ ಕವಿತೆ ವಾಚನ, ವಿದ್ಯಾರ್ಥಿಗಳಿಗೆ ಗೌರವ ನೋಡಿದರೆ ಬೆಂಗಳೂರಿನ ರವಿಂದ್ರ ಕಲಾಕ್ಷೇತ್ರದಲ್ಲಿನ ಕಾರ್ಯಕ್ರಮವನ್ನು ಮೀರಿ ಕನ್ನಡದ ಡಿಂಡಿಮ ಬಾರಿಸಿದೆ ಎಂದರು.

ಗ್ರಾ.ಪಂ. ಸದಸ್ಯ ಎ.ಕೆ. ನಾಗೇಂದ್ರಪ್ಪ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿನ ಪ್ರತಿಭೆ ಇರುವ ಕಂದೋಡ್ ನಾಗಪ್ಪ ಹೆಸರಿನ ಶಿಕ್ಷಕ ಕನ್ನಡದ ಉತ್ಸವಕ್ಕೆ ಯಾರೂ ದೇಣಿಗೆ ನೀಡಬೇಡಿ, ಒಬ್ಬರೇ ವೆಚ್ಚ ಭರಿಸುತ್ತೇನೆ ಎಂದು ಹೇಳಿದ್ದಾರೆ. ಇಂಥವರ ಕನ್ನಡ ಕಾಳಜಿ ಸೇವೆಯನ್ನು ಆಳುವ ಸರ್ಕಾರ ಗುರುತಿಸಿ, ಪ್ರಶಸ್ತಿ ನೀಡಬೇಕಿದೆ ಎಂದು ಆಗ್ರಹಿಸಿದರು.

ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಕರಿಬಸಪ್ಪ ಮಾತನಾಡಿ, ಕನ್ನಡಾಂಬೆಯೇ ಎಲ್ಲರನ್ನು ಬೆಳೆಸುತ್ತಾಳೆ. ಅಲ್ಲದೇ, ಭಾಷಾ ವಿಷಯದಲ್ಲಿ ಮಾತ್ರ ರಕ್ತದ ಕಣದಲ್ಲೂ ಅಭಿಮಾನವಿರುವ ಕನ್ನಡಿಗರು ಸ್ವಾವಲಂಬಿಯಾಗಿ ಹೋರಾಟ ಮಾಡಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಕುಂತಲಮ್ಮ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಅರುಣ್, ನಾಗರಾಜ್, ವಿವಿಧ ಶಾಲೆಗಳ ಕನ್ನಡ ಶಿಕ್ಷಕರಾದ ಸುರೇಶ್, ಗಣೇಶ್, ವಿಜಯ್‌ಓಲೇಕಾರ್, ಕರಿಬಸಪ್ಪ, ರಾಜ್‌ಶೇಖರ್, ಮಲ್ಲಪ್ಪ, ಶಿವಕುಮಾರ್,ಅನಿತಾ, ಸಾರಂಗಮಠ್, ಮಲ್ಲಾಪುರ್ ಮತ್ತಿತರರು ಇದ್ದರು.

ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ೨೬ ಕವಿಗಳು ತಮ್ಮ ಕವಿತೆ ವಾಚನ ಮಾಡಿದರು. ಶಾಲೆ ಆವರಣದಲ್ಲಿನ ಎಲ್ಲ ಗಿಡ-ಮರಗಳಿಗೆ ಕವಿಗಳ ಛಾಯಾಚಿತ್ರ ಮತ್ತು ಕನ್ನಡ ಬಾವುಟಗಳನ್ನು ಹಾಕಲಾಗಿತ್ತು. ಶಾಲಾ ಕಟ್ಟೆಯಲ್ಲಿ ರಂಗೋಲಿ ಆಕರ್ಷಣೆಯಾಗಿತ್ತು. ಅತಿಥಿಗಳನ್ನು ವಿದ್ಯಾರ್ಥಿನಿಯರಾದ ಭುವನೆಶ್ವರಿ, ಕಶಿಷ್ ಕಂಕಣಧಾರಣೆ ಮಾಡಿ ಸ್ವಾಗತಿಸಿದರು. ರಾಜನಹಳ್ಳಿ, ಹರಗನಹಳ್ಳಿ, ತಿಮ್ಲಾಪುರ, ಹಲಸಬಾಳು ಪೋಷಕರು, ಹಳೇ ವಿದ್ಯಾರ್ಥಿಗಳು. ಗ್ರಾಮಸ್ಥರು, ಬೋಧಕ ವರ್ಗ-ಸಿಬ್ಬಂದಿ ಪಾಲ್ಗೊಂಡಿದ್ದರು.

- - -

ಕೋಟ್ ಸರ್ಕಾರದ ವೇತನ ಪಡೆಯುತ್ತೇವೆ. ಕನ್ನಡಕ್ಕಾಗಿ, ಭೂಮಿಗಾಗಿ ಹಾಗೂ ಮಕ್ಕಳಿಗಾಗಿ ಶಾಶ್ವತ ಸೇವೆ ಮಾಡಬೇಕು

- ಕಂದೋಡ್ ನಾಗಪ್ಪ, ಸಂಘಟಕ, ಶಿಕ್ಷಕ

- - - -೧೦ಎಂಬಿಆರ್೧: ಕಾರ್ಯಕ್ರಮದಲ್ಲಿ ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ